ಚಕ್ಕಡಿಯ ಚಕ್ರ ಹರಿದು ಚಕ್ಕಡಿ ಚಲಾಯಿಸುತ್ತಿದ್ದ ಯುವಕ ಸಾವಿಗೀಡಾದ ಘಟನೆ  ಉತ್ತರ ಕನ್ನಡ‌ ಜಿಲ್ಲೆಯ ದಾಂಡೇಲಿ ಸಮೀಪದ ಜನತಾ ಕಾಲೋನಿಯಲ್ಲಿ ನಡೆದಿದೆ. ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮ ನಿವಾಸಿ ಈರಣ್ಣ ಧೂಪದಾಳ (21) ಸಾವಿಗೀಡಾದ ಯುವಕ. 

ಉತ್ತರ ಕನ್ನಡ (ಜ.29): ಚಕ್ಕಡಿಯ ಚಕ್ರ ಹರಿದು ಚಕ್ಕಡಿ ಚಲಾಯಿಸುತ್ತಿದ್ದ ಯುವಕ ಸಾವಿಗೀಡಾದ ಘಟನೆ ಉತ್ತರ ಕನ್ನಡ‌ ಜಿಲ್ಲೆಯ ದಾಂಡೇಲಿ ಸಮೀಪದ ಜನತಾ ಕಾಲೋನಿಯಲ್ಲಿ ನಡೆದಿದೆ. ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮ ನಿವಾಸಿ ಈರಣ್ಣ ಧೂಪದಾಳ (21) ಸಾವಿಗೀಡಾದ ಯುವಕ. ಜೊಯಿಡಾ ಮಾರ್ಗವಾಗಿ ದಾಂಡೇಲಿ ಕಡೆಗೆ ಚಕ್ಕಡಿ ಸಾಗುತ್ತಿತ್ತು. 

ಈ ವೇಳೆ ವಾಹನದ ಹಾರ್ನ್ ಶಬ್ದಕ್ಕೆ ಚಕ್ಕಡಿಯ ಎತ್ತುಗಳು ಭಯಪಟ್ಟು ಪಕ್ಕದ ಕಮರಿನತ್ತ ಸಾಗಿತ್ತು. ಚಕ್ಕಡಿ ಚಲಾಯಿಸುತ್ತಿದ್ದ ಯುವಕ ಆಯತಪ್ಪಿ ನೆಲಕ್ಕೆ ಬಿದ್ದಿದ್ದು, ಆತನ ಮೇಲೆಯೇ ಚಕ್ಕಡಿಯ ಚಕ್ರಗಳು ಹರಿದು ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದ. ಚಕ್ಕಡಿಯಲ್ಲಿದ್ದ ಇತರ ನಾಲ್ವರು ಅಪಾಯದಿಂದ ಪಾರಾಗಿದ್ದು, ದಾಂಡೇಲಿಯ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ರವಾನಿಸಲಾಗಿದೆ. ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಕಾವಲುಗಾರನಾಗಿ ಸೇವೆ: ಎಚ್‌.ಡಿ.ಕುಮಾರಸ್ವಾಮಿ

ಮರದಿಂದ ಬಿದ್ದು ಯುವಕ ಸಾವು: ಮರದಿಂದ ಬಿದ್ದು ಯುವಕ ಸಾವನಪ್ಪಿರುವ ಘಟನೆ ತಾಲೂಕಿನ ವಡ್ಡರಹಳ್ಳಿಯಲ್ಲಿ ಗುರುವಾರ ನಡೆದಿದೆ. ಗ್ರಾಮದ ಶಿವಣ್ಣರ ಪುತ್ರ ಸುನೀಲ (31) ಮೃತ ಯುವಕ. ಮೃತ ಸುನೀಲ ಹೊರವಲಯದ ತಮ್ಮ ಜಮೀನಿನಲ್ಲಿ ಇದ್ದ ಆಲದ ಮರದಲ್ಲಿ ಮೇಕೆಗೆ ಸೊಪ್ಪು ಕಡಿಯಲು ಹೋಗಿ ಕಾಲುಜಾರಿ ಮರದಿಂದ ಕೆಳಗೆ ಬಿದ್ದಾನೆ. ಮರದಿಂದ ಬಿದ್ದ ರಭಸಕ್ಕೆ ಯುವಕ ಸುನೀಲ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ವಿಷಯ ತಿಳಿದ ಕುಟುಂಬಸ್ಥರು, ಗ್ರಾಮಸ್ಥರು ಸ್ಥಳಕ್ಕೆ ತೆರಳಿ ವಿಷಯನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿ ಮೃತದೇಹವನ್ನು ಪಾಂಡವಪುರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಮೃತ ಯುವಕ ಸುನೀಲ್‌ಗೆ ಪತ್ನಿ ಹಾಗೂ 11 ತಿಂಗಳ ಮಗು ಇದೆ. ಗಂಡನನ್ನು ಕಳೆದುಕೊಂಡ ಪತ್ನಿ ಆಕ್ರಂದನ ಮುಗಿಲು ಮುಟ್ಟಿತ್ತು. ಬಳಿಕ ತಮ್ಮ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಿತು.

Chikkaballapur: ಸೋಲು, ಗೆಲುವು ಮತದಾರರ ಕೈಯಲ್ಲಿ: ಸಚಿವ ಸುಧಾಕರ್‌

ವಿಷಯ ತಿಳಿದ ಜಿಪಂ ಮಾಜಿ ಸದಸ್ಯ ಸಿ.ಅಶೋಕ್‌, ಬಿಜೆಪಿ ಮುಖಂಡ ಡಾ.ಎನ್‌.ಎಸ್‌.ಇಂದ್ರೇಶ್‌ ಸ್ಥಳಕ್ಕೆ ತೆರಳಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಘಟನೆಯ ಬಗ್ಗೆ ಶಾಸಕ ಸಿ.ಎಸ್‌.ಪುಟ್ಟರಾಜು ಗಮನಕ್ಕೆ ತಂದು ಮೃತರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಲಾಗುವುದು ಎಂದು ಜಿಪಂ ಸದಸ್ಯ ಸಿ.ಅಶೋಕ್‌ ಭರವಸೆ ನೀಡಿದರು.