Chikkaballapur: ಸೋಲು, ಗೆಲುವು ಮತದಾರರ ಕೈಯಲ್ಲಿ: ಸಚಿವ ಸುಧಾಕರ್‌

ತಮ್ಮ ವಿರುದ್ಧ ಯಾರೇ ಸ್ಪರ್ಧೆ ಮಾಡಿದರೂ ನನ್ನ ಕ್ಷೇತ್ರದ ಜನರನ್ನು ನಂಬಿ ಕಣದಲಿರುತ್ತೇನೆ. ಅವಕಾಶ ಸಿಕ್ಕರೆ ನಾನು ಆಯ್ಕೆಯಾಗಿ ಜನರ ಸೇವೆ ಮುಂದುವರಿಸುತ್ತೇನೆ. ಕ್ಷೇತ್ರದ ಜನತೆಗೆ ನನ್ನ ಅವಶ್ಯಕತೆ ಇಲ್ಲ ಅಂತ ಸೋಲಿಸಿದರೆ ನನ್ನ ಕೆಲಸ ನಾನು ಮಾಡಿಕೊಂಡಿರುತ್ತೇನೆಂದು ಸಚಿವ ಡಾ.ಕೆ.ಸುಧಾಕರ್‌ ಹೇಳಿದರು. 

Defeat and Victory are in the Hands of Voters Says Minister Dr K Sudhakar gvd

ಚಿಕ್ಕಬಳ್ಳಾಪುರ (ಜ.29): ತಮ್ಮ ವಿರುದ್ಧ ಯಾರೇ ಸ್ಪರ್ಧೆ ಮಾಡಿದರೂ ನನ್ನ ಕ್ಷೇತ್ರದ ಜನರನ್ನು ನಂಬಿ ಕಣದಲಿರುತ್ತೇನೆ. ಅವಕಾಶ ಸಿಕ್ಕರೆ ನಾನು ಆಯ್ಕೆಯಾಗಿ ಜನರ ಸೇವೆ ಮುಂದುವರಿಸುತ್ತೇನೆ. ಕ್ಷೇತ್ರದ ಜನತೆಗೆ ನನ್ನ ಅವಶ್ಯಕತೆ ಇಲ್ಲ ಅಂತ ಸೋಲಿಸಿದರೆ ನನ್ನ ಕೆಲಸ ನಾನು ಮಾಡಿಕೊಂಡಿರುತ್ತೇನೆಂದು ಸಚಿವ ಡಾ.ಕೆ.ಸುಧಾಕರ್‌ ಹೇಳಿದರು. ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ಬಾರಿ ಮನೆಗೆ ಹೋಗಿ ಬಂದವರ ಮಾತುಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ತಾವು ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ಧಿಯನ್ನು ಕಂಡಿರುವ ಜನ ಮತ ಚಲಾಯಿಸಲಿದ್ದಾರೆಂದರು.

ಜನರ ತೀರ್ಮಾನವೇ ಅಂತಿಮ: ವಿರೋಧ ಪಕ್ಷದ ನಾಯಕರು ಹೇಳಿದಂತೆ ಜನರು ತಮ್ಮನ್ನು ಮನೆಗೆ ಕಳುಹಿಸ್ತಾರೋ ಅಥವಾ ಎಲ್ಲಿಗೆ ಕಳುಹಿಸ್ತಾರೆ ಎಂಬುದನ್ನು ನೋಡೋಣ. ಕಳೆದ ಹತ್ತು ವರ್ಷದಿಂದ ಕ್ಷೇತ್ರಕ್ಕೆ ತಮ್ಮದೇ ಆದ ಸೇವೆ ಮಾಡಿದ್ದೀನಿ, ಅದೇ ಸೇವೆ ಮುಂದುವರಿಯಬೇಕು ಎಂಬ ತೀರ್ಮಾನ ಮತದಾರರು ಮಾಡಿದರೆ ಶಾಸಕರಾಗಿ ಆಯ್ಕೆಯಾಗುತ್ತೇನೆ. ತಮ್ಮ ಸೇವೆ ಕ್ಷೇತ್ರದ ಜನತೆಗೆ ತೃಪ್ತಿ ತಂದಿದ್ದರೆ ಪುನರಾಯ್ಕೆ ಮಾಡಲಿದ್ದಾರೆ. ಎಲ್ಲವನ್ನೂ ತೀರ್ಮಾನ ಮಾಡುವವರು ಜನರು. ಹಾಗಾಗಿ ಅವರ ತೀರ್ಮಾನವೇ ಅಂತಿಮ ಎಂದರು.

ಕಾರಾವಾರಲ್ಲಿ ಸ್ಥಾಪನೆಯಾಗಲಿದೆ ಟ್ಯುಪೊಲೆವ್ ಮ್ಯೂಸಿಯಂ

ಚಿರತೆನಾದರೂ ಬರಲಿ, ಕತ್ತೆನಾದರೂ ಬರಲಿ: ಕಾಂಗ್ರೆಸ್‌ ನವರು ಚಿಕ್ಕಬಳ್ಳಾಪುರಕ್ಕೆ ಚಿರತೆ (ಕೊತ್ತೂರು ಮಂಜುನಾಥ) ಕರೆತರುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ 10 ವರ್ಷದಲ್ಲಿ ತಾವು ಕ್ಷೇತ್ರಕ್ಕೆ ಮಾಡಿದ ಅಬಿವೃದ್ಧಿ ಜನರ ಮುಂದಿದೆ. ಚಿರತೆನಾದರೂ ಬರಲಿ, ಕೋತಿನಾದರೂ ಬರಲಿ, ಕತ್ತೆನಾದರೂ ಬರಲಿ, ತೀರ್ಮಾನ ಮಾಡುವವರು ಜನತೆ ಎಂದರು. ಎಚ್‌.ಡಿ. ದೇವೇಗೌಡರ ಕುಟುಂಬದಿಂದ ಅನೇಕರು ಚುನಾವಣೆಗೆ ಸ್ಪರ್ಧಿಸುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜನ ಮತ ನೀಡುತ್ತಿರುವ ಕಾರಣ ಅವರು ಸ್ಪರ್ಧಿಸುತ್ತಿದ್ದಾರೆ. ಒಂದೇ ಮನೆಯಿಂದ ಸ್ಪರ್ಧಿಸಬಾರದು ಎಂದು ಸಂವಿಧಾನದಲ್ಲಿ ನಿಯಮ ಇಲ್ಲದ ಕಾರಣ ಅವರು ಲಾಭ ಪಡೆಯುತ್ತಿದ್ದಾರೆ. ಎಲ್ಲಿಯವರೆಗೂ ಜನರು ಅವರನ್ನು ಆಯ್ಕೆ ಮಾಡುತ್ತಾರೆ ಅಲ್ಲಿಯವರೆಗೂ ಇದು ಮುಂದುವರಿಯಲಿದೆ ಎಂದು ಹೇಳಿದರು.

Kolar: ಸಿದ್ದರಾಮಯ್ಯ ಸ್ಪರ್ಧೆ: ಇನ್ನೂ ಬಗೆಹರಿಯದ ಗೊಂದಲ

ಮಂಡ್ಯ ಗೋಬ್ಯಾಕ್‌ ಷಡ್ಯಂತ್ರ: ಮಂಡ್ಯ ಜಿಲ್ಲೆಯಲ್ಲಿ ಸಚಿವ ಆರ್‌. ಅಶೋಕ್‌ ಅವರ ಬಗ್ಗೆ ಗೋಬ್ಯಾಕ್‌ ಚಳವಳಿ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಮಂಡ್ಯಕ್ಕೆ ಅವರು ಇದೇ ಮೊದಲ ಬಾರಿಗೆ ಹೋಗುತ್ತಿಲ್ಲ. ಮಂಡ್ಯಜಿಲ್ಲೆಯಲ್ಲಿ ಮೂರರಿಂದ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಲಿದ್ದು, ಇದನ್ನು ಸಹಿಸಲಾರದೆ ಕೆಲವರು ಷಡ್ಯಂತ್ರ ರೂಪಿಸಿದ್ದಾರೆ. ಅವರು ಯಾರು ಎಂಬ ಬಗ್ಗೆ ಈಗಾಗಲೇ ಹಲವು ಮಾಹಿತಿ ಲಭ್ಯವಾಗಿದ್ದು, ಅವರೆಲ್ಲ ಬಿಜೆಪಿಯವರಲ್ಲ. ಆಶೋಕ್‌ ಆಗಮನದಿಂದ ಮಂಡ್ಯ ಜಿಲ್ಲೆಯ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಸಚಿವ ಡಾ.ಸುಧಾಕರ್‌ ಹೇಳಿದರು.

Latest Videos
Follow Us:
Download App:
  • android
  • ios