Asianet Suvarna News Asianet Suvarna News

Bengaluru Crime: ವೆಲ್ಡಿಂಗ್‌ ಮಾಡುವಾಗ ಬಾವಿಗೆ ಬಿದ್ದು ಯುವಕ ಸಾವು

ಬೆಂಗಳೂರಿನ ದೇವರಜೀವನಹಳ್ಳಿ (ಡಿ.ಜೆ.ಹಳ್ಳಿ)ಯಲ್ಲಿ ಇಂದು ಬಾವಿಗೆ ಗ್ರಿಲ್‌ ಅಳವಡಿಕೆ ಮಾಡುತ್ತಿರುವ ವೇಳೆ ಜಾರಿ ಬಾವಿಯೊಳಗೆ ಬಿದ್ದು ಸಾವನ್ನಪ್ಪಿದ ಯುವಕ ಶಿವು (26) ಆಗಿದ್ದಾನೆ.

Young man died after falling into a well while welding sat
Author
First Published Dec 17, 2022, 5:12 PM IST

ಬೆಂಗಳೂರು (ಡಿ.17): ನಾವು ಪ್ರತಿನಿತ್ಯ ಕೆಲಸ ಮಾಡುವ ವೇಳೆ ಎಷ್ಟೇ ಮುಂಜಾಗ್ರತೆವಹಿಸಿದರೂ ಕೂಡ ಸಾವು ನಮ್ಮ ಬೆನ್ನ ಹಿಂದೆಯೇ ಇರುತ್ತದೆ. ಪ್ರತಿಯೊಂದು ಕ್ಷಣವೂ ಕೂಡ ಸುರಕ್ಷತೆ ವಹಿಸದಿದ್ದರೆ ಅನಾಹುತ ತಪ್ಪಿದ್ದಲ್ಲ. ಅದೇ ರೀತಿ ಬೆಂಗಳೂರಿನಲ್ಲಿ ಬಾವಿಗೆ ಗ್ರಿಲ್‌ ಅಳವಡಿಸುವ ವೇಳೆ ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಬೆಂಗಳೂರಿನ ದೇವರಜೀವನಹಳ್ಳಿ (ಡಿ.ಜೆ.ಹಳ್ಳಿ)ಯಲ್ಲಿ ಇಂದು ಬಾವಿಗೆ ಗ್ರಿಲ್‌ ಅಳವಡಿಕೆ ಮಾಡುತ್ತಿರುವ ವೇಳೆ ಜಾರಿ ಬಾವಿಯೊಳಗೆ ಬಿದ್ದು ಸಾವನ್ನಪ್ಪಿದ ಯುವಕ ಶಿವು (26) ಆಗಿದ್ದಾನೆ. ಇನ್ನು ಅಪಯಾಕಾರಿ ಕೆಲಸ ಮಾಡುವ ವೇಳೆ ಮೃತ ಶಿವು ಯಾವುದೇ ಸುರಕ್ಷಾ ಕ್ರಮಗಳ ಅನುಸರಿಸದೆ ವೆಲ್ಡಿಂಗ್‌ ಮಾಡುತ್ತಿದ್ದನು. ಆದರೆ, ಹಳೆಯ ಕಬ್ಬಿಣದ ಗ್ರಿಲ್‌ ತೀವ್ರವಾಗಿ ಹಾಳಾಗಿದ್ದ ಹಿನ್ನೆಲೆಯಲ್ಲಿ ಅದರ ಮೇಲೆಯೇ ಕುಳಿತು ವೆಲ್ಡಿಂಗ್‌ ಮಾಡುತ್ತಿದ್ದು, ಈ ವೇಳೆ ಕಬ್ಬಿಣದ ಹಳೆಯ ರಾಡುಗಳು ತುಂಡಾಗಿ ಬಾವಿಯೊಳಗೆ ಬಿದ್ದಿದ್ದಾರೆ. ಈ ವೇಳೆ ರಕ್ಷಣೆ ಮಾಡಲು ತುರ್ತಾಗಿ ಯಾವುದೇ ಸಾಮಗ್ರಿಗಳು ಲಭ್ಯವಾಗದ ಹಿನ್ನೆಲೆಯಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಮನೆಯಲ್ಲಿ ಮಲಗಿದ್ದ ಬಾಲಕನನ್ನು ಕಚ್ಚಿಕೊಂದ ವಿಷಕಾರಿ ಕೊಳಕು ಮಂಡಲ ಹಾವು

15 ದಿನದ ಹಿಂದೆ ತಂದೆಯಾಗಿದ್ದ: ಇನ್ನು ಮೃತ ಶಿವು ಅವರಿಗೆ ಇತ್ತೀಚೆಗೆ ಮದುವೆಯಾಗಿದ್ದು, ಅವನಿಗೆ ಕಳೆದ 15 ದಿನಗಳ ಹಿಂದೆ ಮಗು ಜನಿಸಿತ್ತು. ಈ ಹಿನ್ನೆಲೆಯಲ್ಲಿ ಪತ್ನಿ ಸೇರಿದಂತೆ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಮಗು ಸೇರಿ ಪತ್ನಿಯನ್ನು ದುಡಿದು ಸಾಕಬೇಕಿದ್ದ ಮನೆಯ ಮಾಲೀಕನೇ ಈಗ ಇಲ್ಲದಂತಾಗಿದೆ. ಕುಟುಂಬಕ್ಕೆ ಆಸರೆಯನ್ನು ಕಳೆದುಕೊಂಡಿದ್ದು, ಹಸುಳೆ ಮಗುವಿನ ಭವಿಷ್ಯದ ಬಗ್ಗೆ ತಾಯಿಗೆ ಚಿಂತೆಯಾಗಿದೆ. ಇನ್ನು ಕೆಲಸ ಮಾಡುವ ವೇಳೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಬಗ್ಗೆ ಮೃತನ ಕುಟುಂಬ ಸದಸ್ಯರು ಪರಿತಪಿಸುತ್ತಿದ್ದಾರೆ.

ಬಾವಿಗೆ ಬೀಳುವುದು 2ನೇ ಪ್ರಕರಣ: ಇನ್ನು ಡಿ.ಜೆ. ಹಳಳಿಯಲ್ಲಿ ಯುವಕರು ಹಾಗೂ ಕೆಲಸ ಮಾಡುವ ಕಾರ್ಮಿಕರು ಬಾವಿಗೆ ಬಿದ್ದು ಸಾವನ್ನಪ್ಪುತ್ತಿರುವ ಪ್ರಕರಣ ಎರಡನೇಯದ್ದಾಗಿದೆ. ಈ ಹಿಂದೆ 2010ರಲ್ಲಿಯೂ ಕೂದ ವ್ಯಕ್ತಿಯೋರ್ವ ಬಾವಿಗೆ ಬಿದ್ದು ಸಾವನ್ನಪ್ಪಿದ್ದರು. ಈಗ ಸಾವನ್ನಪ್ಪಿದ ಶಿವು, ಮನೆಯ ಪಕ್ಕದಲ್ಲಿಯೇ ಇದ್ದ ಬಾವಿ ಗ್ರಿಲ್ ಅಳವಡಿಕೆ ಕೆಲಸ ಮಾಡ್ತಿದ್ದಾಗ ಘಟನೆ ಸಂಭವಿಸಿದೆ. ಈ ಕುರಿತಂತೆ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

Chikkamagaluru: ನಾಯಿ ಕಡಿತಕ್ಕೆ ಚಿಕಿತ್ಸೆ ಪಡೆಯದೇ ಬಾಲಕ ಸಾವು

ಶವ ತೆಗೆದ ಅಗ್ನಿಶಾಮಕ ಸಿಬ್ಬಂದಿ: ಬಾವಿಗೆ ಗ್ರಿಲ್ ಅಳವಡಿಕೆ ಕೆಲಸ ಮಾಡುವ ವೇಳೆ ಬಿದ್ದ ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ರಕ್ಷಣೆ ಮಾಡುವಂತೆಯೂ ಮನವಿ ಮಾಡಲಾಗಿದೆ. ಆದರೆ, ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬಾವಿಗೆ ಅಳವಡಿಕೆ ಮಾಡಿದ್ದ ಗ್ರಿಲ್‌ಗಳನ್ನು ತುಂಡರಿಸಿ ರಕ್ಷಣೆ ಮಾಡುವ ವೇಳೆಗಾಗಲೇ ಶಿವು ಸಾವನ್ನಪ್ಪಿದ್ದನು ಎಂದು ತಿಳಿದುಬಂದಿದೆ. ಇನ್ನು ಸ್ಥಳದಲ್ಲಿ ಮೃತದೇಹ ನೋಡಲು ನೆರೆಹೊರೆಯವರು ಹೆಚ್ಚಿನ ಂಖ್ಯೆಯಲ್ಲಿ ಜಮಾವಣೆ ಆಗಿದ್ದಾರೆ.

Follow Us:
Download App:
  • android
  • ios