ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವಕ| ವಿಜಯಪುರ ನಗರದ ಖಾಸಗಿ ಲಾಡ್ಜ್‌ನಲ್ಲಿ ನಡೆದ ಘಟನೆ| ಹಣಕಾಸಿನ ವ್ಯವಹಾರದ ಸಮಸ್ಯೆಯಿಂದ ಮನನೊಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ| 

ವಿಜಯಪುರ(ಸೆ.21): ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಿನ್ನೆ(ಭಾನುವಾರ) ನಡೆದಿದೆ. ಮೃತನನ್ನ ರುದ್ರೇಶ ಶಿವಪ್ಪ ಕಲಗುಡಿ (33) ಎಂದು ಗುರುತಿಸಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ಖಾಸಗಿ ಲಾಡ್ಜ್‌ವೊಂದರಲ್ಲಿ ರುದ್ರೇಶ ಶಿವಪ್ಪ ಕಲಗುಡಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ವಿಜಯಪುರ: ನೇಣು ಬಿಗಿದುಕೊಂಡು ಮಹಿಳಾ ವಿವಿ ವಿದ್ಯಾರ್ಥಿನಿ ಆತ್ಮಹತ್ಯೆ

ಆತ್ಮಹತ್ಯೆಗೆ ಶರಣಾದ ಯುವಕನು ಜಿಲ್ಲೆಯ ನಿಡಗುಂದಿ ನಿವಾಸಿ ಎಂದು ಎಂದು ತಿಳಿದು ಬಂದಿದೆ. ಹಣಕಾಸಿನ ವ್ಯವಹಾರದ ಸಮಸ್ಯೆಯಿಂದ ಮನನೊಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಈ ಕುರಿತು ಗೋಳಗುಮ್ಮಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.