Asianet Suvarna News Asianet Suvarna News

ಹೊಸಕೋಟೆ: ಪ್ರೇಯಸಿ ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪ್ರಿಯಕರ, ಕಾರಣ?

*   ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಯುವತಮ ಯುವತಿ 
*   ಉಷಾಗೌಡಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯ
*   ಉಸಿರುಗಟ್ಟಿಸಿ ಉಷಾಳನ್ನ ಹತ್ಯೆ ಮಾಡಿದ ಪ್ರಿಯಕರ
 

Young Man Committed Suicide After Killed His Lover at Hoskote in Bengaluru grg
Author
Bengaluru, First Published Oct 27, 2021, 1:49 PM IST
  • Facebook
  • Twitter
  • Whatsapp

ಹೊಸಕೋಟೆ(ಅ.27):  ಪ್ರೇಯಸಿಯನ್ನ ಹತ್ಯೆಗೈದು ಪ್ರಿಯಕರನೂ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರು(Bengaluru) ಗ್ರಾಮಾಂತರ ಜಿಲ್ಲೆಯ ಹೊಸಕೋಟೆ(Hoskote) ತಾಲೂಕಿನ ಲಿಂಗಧೀರಮಲ್ಲಸಂದ್ರ ಗ್ರಾಮದಲ್ಲಿ ಇಂದು(ಬುಧವಾರ) ನಡೆದಿದೆ. 

ಉಷಾಗೌಡ(24) ಎಂಬಾಕೆಯೇ ಹತ್ಯೆಯಾದ(Murder) ದುರ್ದೈವಿಯಾಗಿದ್ದಾಳೆ. ಪ್ರಿಯತಮೆಯನ್ನ ಕೊಂದ ಬಳಿಕ ಪ್ರಿಯಕರ ಗೋಪಾಲಕೃಷ್ಣ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. 

Young Man Committed Suicide After Killed His Lover at Hoskote in Bengaluru grg

ಬೆಂಕಿ ಪೊಟ್ಟಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ತಿರುಗಿ ಬಂದು ಚಾಕು ಇರಿದರು!

ಕೊಲೆಯಾದ ಉಷಾಗೌಡ ಯುವತಿ ಉತ್ತರ ಕನ್ನಡ(Uttara Kannada) ಜಿಲ್ಲೆಯ ಅಂಕೋಲಾ(Ankola) ಮೂಲದವರು ಎಂದು ತಿಳಿದು ಬಂದಿದೆ. ಉಷಾಗೌಡ ಹಾಗೂ ಗೋಪಾಲಕೃಷ್ಣ ಹಲವು ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು(Love) ಎಂದು ಹೇಳಲಾಗುತ್ತಿದೆ.  ಆದರೆ, ಕೆಲವು ದಿನಗಳ ಹಿಂದೆ ಉಷಾಗೌಡಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು(Engagement). ಹೀಗಾಗಿ ಗೋಪಾಲಕೃಷ್ಣ ಮನನೊಂದಿದ್ದನು. 

ಯುವತಿಯ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ಬಂದಿದ್ದ ಗೋಪಾಲಕೃಷ್ಣ ತಲೆದಿಂಬಿನಿಂದ ಉಸಿರುಗಟ್ಟಿಸಿ ಉಷಾಳನ್ನ ಹತ್ಯೆ ಮಾಡಿದ್ದಾನೆ. ಬಳಿಕ ಗೋಪಾಲಕೃಷ್ಣ ತರಬಹಳ್ಳಿ ಗ್ರಾಮದ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಅನುಗೊಂಡನಹಳ್ಳಿ ಪೊಲೀಸ್(Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

Follow Us:
Download App:
  • android
  • ios