ಬೆಂಕಿ ಪೊಟ್ಟಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ತಿರುಗಿ ಬಂದು ಚಾಕು ಇರಿದರು!
* ಕ್ಷುಲ್ಲಕ ಕಾರಣ ಕೊಲೆಯಲ್ಲಿ ಅಂತ್ಯ
* ಬೆಂಕಿ ಪೊಟ್ಟಣಕ್ಕಾಗಿ ಉಂಟಾದ ಜಗಳ ಬಿಡಿಸಲು ಹೋಗಿದ್ದೆ ತಪ್ಪಾಯಿತು
* ಬಿಹಾರ ಮೂಲದ ಜ್ಯೂಸ್ ಸೆಂಟರ್ ಮಾಲೀಕನ ಹತ್ಯೆ
ಮೊಹಾಲಿ(ಅ. 25) ದಶಕದ ನಂತರ ಬೆಂಕಿ ಪೊಟ್ಟಣದ(matchbox) ದರ ಜಾಸ್ತಿಯಾಗಿದೆ ಎನ್ನುವುದು ಸುದ್ದಿಯಾಗಿತ್ತು. ಆದರೆ ಇಲ್ಲಿ ಬೆಂಕಿ ಪೊಟ್ಟಣಕ್ಕಾಗಿ ಕೊಲೆಯೇ(Murder) ನಡೆದು ಹೋಗಿದೆ.
ಇಬ್ಬರು ವ್ಯಕ್ತಿಗಳು ಕ್ಷುಲ್ಲಕ ಕಾರಣಕ್ಕೆ ಬಿಹಾರ ಮೂಲದ ಜ್ಯೂಸ್ ಸೆಂಟರ್ ಮಾಲೀಕನ ಹತ್ಯೆ ಮಾಡಿದ್ದಾರೆ. ಚಂಡೀಘಡದ ಸೆಕ್ಟರ್ 82 ದಲ್ಲಿ ಸಿಲ್ಲಿ ಮ್ಯಾಟರ್ ಗಾಗಿ ಕೊಲೆ(Crime News) ನಡೆದು ಹೋಗಿದೆ.
ಆರೋಪಿಗಳನ್ನು ಭೂಪಿಂದರ್ ಸಿಂಗ್ ಮತ್ತು ರಿಂಕು ಎಂದು ಗುರುತಿಸಲಾಗಿದೆ. ಬಟಿಂಡಾದ ಧನ್ ಸಿಂಗ್ ಗ್ರಾಮದ ನಿವಾಸಿಯಾ ಭೂಪಿಂದರ್ ಆದರೆ , ರಿಂಕು ಮೊಹಾಲಿಯ ಜಗತ್ಪುರದಲ್ಲಿ ವಾಸ ಮಾಡುತ್ತಿದ್ದ.
ಸಿಗರೇಟ್ ಹಚ್ಚಲು ಬೆಂಕಿ ಪೊಟ್ಟಣ ಕೇಳಿದ್ದೇ ತಪ್ಪಾಯ್ತಾ? ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ
ಹತ್ಯೆಗೀಡಾದ ವ್ಯಕ್ತಿಯನ್ನು ಪ್ರಿನ್ಸ್ ಕುಮಾರ್(28) ಎಂದು ಗುರುತಿಸಲಾಗಿದೆ. ಬಿಹಾರ ಮೂಲದ ವ್ಯಕ್ತಿ ಜ್ಯೂಸ್ ಸೆಂಟರ್ ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಇವರ ಅಂಗಡಿ ಪಕ್ಕದಲ್ಲಿಯೇ ಕುಮಾರ್ ತಂದೆ ಮುಕ್ತಿಯಾರ್ ಸಿಂಗ್ ಎಂಬುವರು ಸಿಗರೇಟ್ ವ್ಯಾಪಾರ ಮಾಡ್ತಿದ್ದರು. ಮುಕ್ತಿಯಾರ್ ಬಳಿ ಆರೋಪಿಗಳು ಬಂದು ಮ್ಯಾಚ್ ಬಾಕ್ಸ್ ಕೇಳಿದ್ದಾರೆ. ಆರೋಪಿಗಳು ಈಗಾಗಲೇ ಅಂಗಡಿಯಲ್ಲಿ ಐದು ನೂರು ರೂ. ಗೂ ಅಧಿಕ ಬಾಕಿ ಇಟ್ಟುಕೊಂಡಿದ್ದರು. ಇದೆ ಕಾರಣಕ್ಕೆ ಬೆಂಕಿ ಪೊಟ್ಟಣ ಕೊಟ್ಟಿಲ್ಲ. ಇದರಿಂದ ಆಕ್ರೋಶಗೊಂಡ ಆರೋಪಿಗಳು ಸಿಂಗ್ ಮೇಲೆ ಕೂಗಾಟ ಆರಂಭಿಸಿದ್ದಾರೆ. ಈ ವೇಳೆ ಗಲಾಟೆ ಬಿಡಿಸಲು ಮಗ ಕುಮಾರ್ ಅಲ್ಲಿಗೆ ಬಂದಿದ್ದಾರೆ.
ಒಂದು ಹಂತಕ್ಕೆ ಗಲಾಟೆ ತಣ್ಣಗಾಗಿದ್ದು ಆರೋಪಿಗಳು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಆದರೆ ಕೆಲ ಸಮಯದ ನಂತರ ವಾಪಸ್ ಬಂದು ಕುಮಾರ್ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ. ಚಾಕುವಿನಿಂದ ಹೊಟ್ಟೆ ಭಾಗಕ್ಕೆ ಮನಸಿಗೆ ಬಂದಂತೆ ಇರಿದಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ), 506 (ಕ್ರಿಮಿನಲ್ ಬೆದರಿಕೆ), ಮತ್ತು 34 (ಸಾಮಾನ್ಯ ಉದ್ದೇಶಕ್ಕಾಗಿ ಮಾಡಿದ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಸಿಗರೇಟ್ ಹಚ್ಚಲು ಬೆಂಕಿ ಪೊಟ್ಟಣ ಕೇಳಿದ್ದಕ್ಕೆ ಲಾರಿ ಕ್ಲೀನರ್‌ವೊಬ್ಬನನ್ನ ಮೂವರ ತಂಡ ಕೊಲೆ ಮಾಡಿದ ಘಟನೆ ನಗರದ ಬೆಳಗಾವಿ ನಾಕಾ ಬಳಿ ನಡೆದಿತ್ತು. ಕೊಲೆಯಾದವರನ್ನ ಚಿತ್ರದುರ್ಗ ಮೂಲದ ಮಹಮ್ಮದ್ ಶಫೀವುಲ್ಲಾ ಎಂದು ಗುರುತಿಸಲಾಗಿತ್ತು.