ಮಹಾಲಿಂಗಪುರ(ಫೆ.19): ಸಾರಾಯಿ ಕುಡಿತ ಬಿಡುವಂತೆ ಬುದ್ಧಿ ಹೇಳಿದಕ್ಕೆ ಯುವನಕನೊರ್ವ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ನಡೆದಿದೆ.

ಸ್ಥಳೀಯ ಚಿಮ್ಮಡ ಗಲ್ಲಿಯ ನಿವಾಸಿ ಸಚಿನ್‌ ಹನಮಂತ ರೊಳ್ಳಿ (23) ಆತ್ಮಹತ್ಯೆ ಮಾಡಿಕೊಂಡ ಯುವಕ. ತಾಯಿ ಮತ್ತು ಸಹೋದರ ಕುಡಿತ ಬಿಡಲು ಬುದ್ಧಿ ಹೇಳಿದ್ದಕ್ಕೆ ಜಿಗುಪ್ಸೆ ಹೊಂದಿ, ಸ್ಥಳೀಯ ಜೋಡು ರಸ್ತೆಯ ಶಾಂತಕುಮಾರ ಮಣ್ಣಯ್ಯಮಠ ಇವರ ಅಂಗಡಿ ಮಳಿಗೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಗದಗ: ಬ್ಲೇಡ್‌ನಿಂದ ಬೇಕಾಬಿಟ್ಟಿ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವೈದ್ಯ

ಈ ಕುರಿತು ಮೃತನ ಸಹೋದರ ಚೇತನ ರೊಳ್ಳಿ ಮಹಾಲಿಂಗಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ಎ.ಎಸ್‌.ಐ. ಎಲ್‌. ಕೆ. ಅಗಸರ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.