ವಿಜಯಪುರ(ಏ.09): ನಗರದ ಯುವತಿಯೊಬ್ಬಳನ್ನು ಪ್ರೀತಿಸಿ ನಂತರ ಆಕೆಯ ನಗ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪಿಯನ್ನು ಅಂತಾರಾಜ್ಯಕ್ಕೆ (ಉತ್ತರಪ್ರದೇಶದಲ್ಲಿ) ತೆರಳಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಉತ್ತರ ಪ್ರದೇಶದ ರಾಜೇಂದ್ರಸಿಂಗ್‌ ಜೀವನ್‌ ಸಿಂಗ್‌ ಬಿಷತ್‌ (21) ಬಂಧಿತ ಆರೋಪಿ. ಈಗಾಗಲೇ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಆರೋಪಿಯು ಯುವತಿಯನ್ನು ನಂಬಿಸಿ, ಪ್ರೀತಿಸುವಂತೆ ನಟಿಸಿ ಯುವತಿಯಿಂದ ನಗ್ನ ಫೋಟೋಗಳನ್ನು ಪಡೆದುಕೊಂಡು ಹಾಗೂ ಜಿ-ಮೇಲ್‌ ಅಕೌಂಟ್‌ ಪಡೆದು ಜಿಮೇಲ್‌ನಲ್ಲಿರುವ ಸ್ಥಳೀಯರ ಫೋನ್‌ ನಂಬರಗಳಿಗೆ ವಿವಿಧ ಗ್ರೂಪ್‌ಗಳಿಗೆ, ಸಾಮಾಜಿಕ ಜಾಲತಾಣದಲ್ಲಿ ಯುವತಿಯ ನಗ್ನ ಫೋಟೋಗಳನ್ನು ಹರಿಬಿಟ್ಟಿದ್ದ. 

ಹುಬ್ಬಳ್ಳಿ: ಮನೆ ಪರಿಹಾರಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಈ ಕುರಿತು ಜಿಲ್ಲಾ ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿ ಬಂಧನಕ್ಕೆ ಜಾಲ ಬೀಸಿದ್ದರು. ಎಎಸ್‌ಪಿ ಮಾರ್ಗದರ್ಶನದಲ್ಲಿ ರಚಿಸಿದ ಸೈಬರ್‌ ಕ್ರೈಂ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.