ಅನಸೂಯ ಹಾಗೂ ವಿಜಯ್ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಜಯ್ ಕುಮಾರ್ ಅನಸೂಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಹೇಳಲಾಗುತ್ತಿದೆ. ಆತ್ಮಹತ್ಯೆಗೆ ಶರಣಾದ ಈ ಜೋಡಿ ಕಳೆದ ಎರಡು ತಿಂಗಳ ಹಿಂದೆ ಊರು ಬಿಟ್ಟು ನಾಪತ್ತೆಯಾಗಿತ್ತು. 

ಕೋಲಾರ(ಡಿ.27): ಮಹಿಳೆಯೊಂದಿಗೆ ಯುವಕ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಎಸ್.ಜೀಡಮಾಕಲಪಲ್ಲಿ ಗ್ರಾಮದಲ್ಲಿ ನಿನ್ನೆ(ಮಂಗಳವಾರ) ರಾತ್ರಿ ನಡೆದಿದೆ. 

ಗ್ರಾಮದ ಮಹಿಳೆ ಅನಸೂಯ(35) ಹಾಗೂ ಯುವಕ ವಿಜಯ್ ಕುಮಾರ್(28) ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಜಯ್ ಕುಮಾರ್ ಅನಸೂಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಹೇಳಲಾಗುತ್ತಿದೆ. ಆತ್ಮಹತ್ಯೆಗೆ ಶರಣಾದ ಈ ಜೋಡಿ ಕಳೆದ ಎರಡು ತಿಂಗಳ ಹಿಂದೆ ಊರು ಬಿಟ್ಟು ನಾಪತ್ತೆಯಾಗಿತ್ತು. 

ಗೆಳೆಯರ ಜೊತೆ ಎಣ್ಣೆ ಪಾರ್ಟಿ ಮುಗಿಸಿ ಮಧ್ಯರಾತ್ರಿ ಮನೆಗೆ ಬಂದ ಪತಿಗೆ ಶಾಕ್; ಪ್ರಶ್ನಿಸಿದ್ದಕ್ಕೆ ಭೀಕರವಾಗಿ ಕೊಂದ ಪತ್ನಿ!

ಅನಸೂಯ ಮಂಜುನಾಥ್ ಎಂಬುವರೊಂದಿಗೆ ವಿವಾಹವಾಗಿ ಇಬ್ಬರು ಮಕ್ಕಳು ಇದ್ದರು. ವಿಜಯ್ ಕುಮಾರ್‌ ಅವಿವಾಹಿತನಾಗಿದ್ದನು. ಕಳೆದ ರಾತ್ರಿ ಗ್ರಾಮದ ಹೊರಗಿನ ಮರಕ್ಕೆ ನೇಣು ಬಿಗಿದುಕೊಂಡು ಈ ಜೋಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ರಾಯಲ್ಪಾಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.