Asianet Suvarna News Asianet Suvarna News

ಗೆಳೆಯರ ಜೊತೆ ಎಣ್ಣೆ ಪಾರ್ಟಿ ಮುಗಿಸಿ ಮಧ್ಯರಾತ್ರಿ ಮನೆಗೆ ಬಂದ ಪತಿಗೆ ಶಾಕ್; ಪ್ರಶ್ನಿಸಿದ್ದಕ್ಕೆ ಭೀಕರವಾಗಿ ಕೊಂದ ಪತ್ನಿ!

ಅನೈತಿಕ ಸಂಬಂಧ ವಿಚಾರಕ್ಕೆ ಪತಿ-ಪತ್ನಿ ನಡುವೆ ವಾಗ್ವಾದ ವಿಕೋಪಕ್ಕೆ ತಿರುಗಿ ಚೂರಿಯಿಂದ ಇರಿದು ಪತಿಯನ್ನೇ ಭೀಕರವಾಗಿ ಕೊಂದ ಘಟನೆ ಬನ್ನೇರುಘಟ್ಟ ಹುಳಿಮಾವು ಸಮೀಪದ ಪುಲ್ಲಿಂಗ್ ಪಾಸ್ ಎಂಬ ಕಾಲೇಜಿನಲ್ಲಿ ನಡೆದಿದೆ. ಉಮೇಶ್ ದಾಮಿ(27) ಕೊಲೆಯಾದ ಪತಿ. ಮನಿಷಾ ದಾಮಿ ಎಂಬಾಕೆಯಿಂದ ಕೃತ್ಯ. 

Bengaluru crime Illicit relationship horrible murder of husband by wife at bannerughatt bengaluru rav
Author
First Published Dec 21, 2023, 12:51 PM IST

ಬನ್ನೇರುಘಟ್ಟ (ಡಿ.21): ಅನೈತಿಕ ಸಂಬಂಧ ವಿಚಾರಕ್ಕೆ ಪತಿ-ಪತ್ನಿ ನಡುವೆ ವಾಗ್ವಾದ ವಿಕೋಪಕ್ಕೆ ತಿರುಗಿ ಚೂರಿಯಿಂದ ಇರಿದು ಪತಿಯನ್ನೇ ಭೀಕರವಾಗಿ ಕೊಂದ ಘಟನೆ ಬನ್ನೇರುಘಟ್ಟ ಹುಳಿಮಾವು ಸಮೀಪದ ಪುಲ್ಲಿಂಗ್ ಪಾಸ್ ಎಂಬ ಕಾಲೇಜಿನಲ್ಲಿ ನಡೆದಿದೆ.

ಉಮೇಶ್ ದಾಮಿ(27) ಕೊಲೆಯಾದ ಪತಿ. ಮನಿಷಾ ದಾಮಿ ಎಂಬಾಕೆಯಿಂದ ಕೃತ್ಯ. 

ಕಾಲೇಜಿನಲ್ಲಿ ಸೆಕ್ಯುರಿಟಿ ಹಾಗೂ ಹೌಸ್ ಕೀಪಿಂಗ್ ಕೆಲಸ‌ ಮಾಡ್ತಿದ್ದ ದಂಪತಿ. ರಾತ್ರಿ ಗೆಳೆಯನೊಂದಿಗೆ ಎಣ್ಣೆ ಪಾರ್ಟಿಗೆ ಹೋಗಿದ್ದ ಉಮೇಶ್ ದಾಮಿ. ಪಾರ್ಟಿ ಮುಗಿಸಿ ರಾತ್ರಿ 12 ಗಂಟೆ ಸುಮಾರಿಗೆ ಮನೆಗೆ ವಾಪಸ್ಸಾಗಿದ್ದ. ಈ ವೇಳೆ ಪತ್ನಿ ಮನಿಷಾ ಫೋನ್‌ನಲ್ಲಿ ಯಾರೊಂದಿಗೆ ಮಾತನಾಡುತ್ತಿದ್ದಳು. ಉಮೇಶ್ ಕಂಡು ಫೋನ್‌ ಕಾಲ್ ಅರ್ಧಕ್ಕೆ ಕಟ್ ಮಾಡಿದ್ದ ಮನಿಷಾ. ಇದರಿಂದ ಪತಿಗೆ ಅನುಮಾನ. ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಅನುಮಾನದಿಂದ ಶುರುವಾಗಿರುವ ಜಗಳ. ಇದೇ ವಿಚಾರವಾಗಿ ನಡೆದಿರೋ ಜಗಳ ಮಧ್ಯರಾತ್ರಿ ವಿಕೋಪಕ್ಕೆ ಹೋದಾಗ ಚಾಕು ತೆಗೆದುಕೊಂಡು ಉಮೇಶ್ ದಾಮಿ ಎದೆಗೆ ಇರಿದ ಮನಿಷಾ. ಇದರಿಂದ ತೀವ್ರ ರಕ್ತಸ್ರಾವ ದಿಂದ ಸ್ಥಳದಲ್ಲೇ ಒದ್ದಾಡಿ ಜೀವಬಿಟ್ಟ ಪತಿ ಉಮೇಶ್ ದಾಮಿ.

ಗಂಡನಿಲ್ಲವೆಂದು ಲೈನ್‌ಮ್ಯಾನ್ ಸಖ್ಯ ಬೆಳೆಸಿದ ಗೃಹಿಣಿ, ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಘಟನೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು. ಸದ್ಯ ಆರೋಪಿ ಮನಿಷಾಳನ್ನು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ. ಉಮೇಶ್ ಮೃತದೇಹ ವಿಕ್ಟೋರಿಯಾ ಆಸ್ಪತ್ರೆ ರವಾನಿಸಲಾಗಿದೆ. ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಅನೈತಿಕ ಸಂಬಂಧದ ಆರೋಪ; ಮರ್ಯಾದೆಗಂಜಿ ನೇಣುಬಿಗಿದು ಯುವಕ ಆತ್ಮಹತ್ಯೆ

Follow Us:
Download App:
  • android
  • ios