ಯುವ ದೇಹದಾರ್ಢ್ಯ ಪಟುವೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೆ.ಆರ್. ಪುರಂ ಬಳಿಯ ಹೀರಂಡಹಳ್ಳಿಯಲ್ಲಿ ನಡೆದಿದೆ. 

ಬೆಂಗಳೂರು(ಜ.11): ಯುವ ದೇಹದಾರ್ಢ್ಯ ಪಟುವೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೆ.ಆರ್. ಪುರಂ ಬಳಿಯ ಹೀರಂಡಹಳ್ಳಿಯಲ್ಲಿ ಇಂದು(ಬುಧವಾರ) ನಡೆದಿದೆ. ಶ್ರೀನಾಥ್ ಎಂಬುವನೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ದೇಹದಾರ್ಢ್ಯ ಪಟುವಾಗಿದ್ದಾನೆ. 

ಮೃತ ಶ್ರೀನಾಥ್ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಫಾರ್ಮಾ ಡಿ ಓದುತ್ತಿದ್ದ ಅಂತ ತಿಳಿದು ಬಂದಿದೆ. ಓದಿನ ಜೊತೆಗೆ ದೇಹದಾರ್ಢ್ಯ ಸ್ಪರ್ಧೆಗಳಲ್ಲೂ ಭಾಗಿಯಾಗುತ್ತಿದ್ದ. 

Crime News: 8ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ!

ಆದರೆ ನಿನ್ನೆ ಶ್ರೀನಾಥ್ ತಾನು ವಾಸವಿದ್ದ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಶ್ರೀನಾಥ್ ಮೂಲತಃ ಕೋಲಾರನ ಜಿಲ್ಲೆಯ ಶ್ರೀನಿವಾಸಪುರದವನಾಗಿದ್ದಾನೆ. ಶ್ರೀನಾಥ್ ಸಾವಿನ ಬಗ್ಗೆ ಆತನ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.