Asianet Suvarna News Asianet Suvarna News

Crime News: 8ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ!

ಪುಣಚ ಗ್ರಾಮದ ಮಣಿಲ ರವೀಂದ್ರ ಗೌಡ ಎಂಬವರ ಪುತ್ರ ಹೇಮಂತ್‌ ಭಾನುವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುಣಚ ದೇವಿನಗರ ಶ್ರೀದೇವಿ ವಿದ್ಯಾಕೇಂದ್ರದ ಪ್ರೌಢಶಾಲೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದ.

Crime News 8th class student committed suicide by hanging herself rav
Author
First Published Jan 9, 2023, 2:41 PM IST

ಬಂಟ್ವಾಳ (ಜ.9): ಪುಣಚ ಗ್ರಾಮದ ಮಣಿಲ ರವೀಂದ್ರ ಗೌಡ ಎಂಬವರ ಪುತ್ರ ಹೇಮಂತ್‌ ಭಾನುವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುಣಚ ದೇವಿನಗರ ಶ್ರೀದೇವಿ ವಿದ್ಯಾಕೇಂದ್ರದ ಪ್ರೌಢಶಾಲೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಈತ ಮನೆ ಮಂದಿಯೆಲ್ಲಾ ಪುಣಚ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅಯ್ಯಪ್ಪ ವ್ರತಧಾರಿಗಳು ಇರುಮುಡಿ ಕಟ್ಟುವ ಕಾರ್ಯಕ್ರಮಕ್ಕೆ ಹೋಗಿದ್ದ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತರಗತಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಈತ ಬೆಳಗ್ಗೆ ಧನು ಪೂಜೆಗೆ ಹೋಗಿ ಬಂದಿದ್ದು, ಸೋಮವಾರ ಪರೀಕ್ಷೆ ಇರುವ ಕಾರಣ ಓದಲಿದ್ದು ದೇವಸ್ಥಾನಕ್ಕೆ ಬರುವುದಿಲ್ಲ ಎಂದು ಮನೆಯಲ್ಲಿಯೇ ಉಳಿದಿದ್ದ ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಮನೆಗೆ ಬೆಂಕಿ: ಪುತ್ರನ ರಕ್ಷಿಸಿ ಪ್ರಾಣಬಿಟ್ಟತಂದೆ!

ಶಿವಮೊಗ್ಗ: ವಿದ್ಯುತ್‌ ಶಾರ್ಚ್‌ ಸಕ್ರ್ಯೂಟ್‌ನಿಂದಾಗಿ ಮನೆಗೆ ಬೆಂಕಿ ತಗುಲಿದ ವೇಳೆ ಕರಳು ಕುಡಿಯನ್ನು ಬೆಂಕಿಯಿಂದ ರಕ್ಷಿಸಿ ಉದ್ಯಮಿಯೊಬ್ಬರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಪ್ರತಿಷ್ಠಿತ ಭೂಪಾಳಂ ಕುಟುಂಬದ ಶರತ್‌ (39) ಮೃತ ದುರ್ದೈವಿ. ಜಿಪಂ ಕಚೇರಿ ಎದುರು ಇರುವ ಅವರ ಮನೆಯಲ್ಲಿ ಶನಿವಾರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಮಾತ್ರದಲ್ಲಿ ದಟ್ಟಹೊಗೆ ಮನೆಯನ್ನು ಆವರಿಸಿದೆ. ಈ ವೇಳೆ ಶರತ್‌ ಅವರು ತಮ್ಮ ಕೋಣೆಯಿಂದ ಮಗ ಸಂಚಿತ್‌ನನ್ನು ರಕ್ಷಣೆ ಮಾಡಿದ್ದಾರೆ. ಆದರೆ ತಾವು ಹೊಗೆಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. . ಮನೆಯಲ್ಲಿದ್ದ ಶರತ್‌ ಅವರ ತಂದೆ ಶಶಿಧರ್‌, ಪತ್ನಿ ಸೇರಿ ನಾಲ್ವರು ಪ್ರಾಣಾ​ಪಾ​ಯ​ದಿಂದ ಪಾರಾಗಿದ್ದಾರೆ.

ಅವಘಡದಲ್ಲಿ ಮನೆಯ ಕೊಠಡಿ ಸಂಪೂರ್ಣ ಭಸ್ಮವಾಗಿದೆ. ಮನೆಯಲ್ಲಿದ್ದ ಶರತ್‌ ಅವರ ತಂದೆ ಶಶಿಧರ್‌, ಪತ್ನಿ ಸೇರಿ ನಾಲ್ವರು ಪ್ರಾಣಾ​ಪಾ​ಯ​ದಿಂದ ಪಾರಾಗಿದ್ದಾರೆ. ಶರತ್‌ ಅವರು ಮಕ್ಕಳÜು್ನ ರಕ್ಷಣೆ ಮಾಡಿ ತಾವು ಬದುಕುಳಿಯಲಿಲ್ಲ. ಸ್ವಾತಂತ್ರ್ಯ ಸೇನಾನಿ ಭೂಪಾಳಂ ಚಂದ್ರಶೇಖರಯ್ಯ ಅವ​ರ ಕುಟುಂಬದವರಾಗಿದ್ದ ಶರತ್‌ ಅವರು ಮಾಚೇನಹಳ್ಳಿಯಲ್ಲಿ ಕೈಗಾರಿಕೆ ನಡೆಸುತ್ತಿದ್ದರು. ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀರಾಮಸೇನೆ ನಾಯಕಗೆ ಗುಂಡೇಟು; 3 ಸೆರೆ

ಬೆಳಗಾವಿ: ಶ್ರೀರಾಮ ಸೇನೆಯ ಬೆಳಗಾವಿ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ ಮೇಲಿನ ಗುಂಡಿನ ದಾಳಿ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ್ದ, ರಿಯಲ್‌ ಎಸ್ಟೇಟ್‌ ವ್ಯವಹಾರದ ಹಣಕಾಸಿನ ಬಗ್ಗೆ ಮನಸ್ತಾಪ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಘಟನೆ ನಡೆದ ಕೇವಲ 18 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿ ನಗರದ ಪಾಟೀಲ ಮಾಳದ ಅಭಿಜೀತ ಸೋಮನಾಥ ಭಾತಖಂಡೆ (41), ಬೆಳಗಾವಿ ತಾಲೂಕಿನ ಬಸ್ತವಾಡ ಗ್ರಾಮದ ಸಂಭಾಜಿ ಗಲ್ಲಿಯ ರಾಹುಲ್‌ ನಿಂಗಾಣಿ ಕೋಡಚವಾಡ (32) ಹಾಗೂ ಜ್ಯೋತಿಬಾ ಗಂಗಾರಾಮ ಮುತಗೇಕರ (25) ಬಂಧಿತರು.

ಕೋಕಿತ್ಕರ ಹಾಗೂ ಅವರ ಕಾರು ಚಾಲಕ ಮನೋಜ ದೇಸೂರಕರ ಮೇಲೆ ಶನಿವಾರ ಸಂಜೆ 7.45ರ ಸುಮಾರಿಗೆ ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಹತ್ತಿರ ಗುಂಡಿನ ದಾಳಿ ನಡೆದಿತ್ತು. ಈ ಪ್ರಕರಣಕ್ಕೂ, ಹಿಂದೂ ಸಮಾವೇಶಕ್ಕೂ ಯಾವುದೇ ಸಂಬಂಧ ಇಲ್ಲ. ಅಭಿಜೀತ್‌ ಬಾತಖಾಂಡೆ ಹಾಗೂ ರವಿ ಕೋಕಿತ್ಕರ ಇಬ್ಬರೂ ಸ್ನೇಹಿತರಾಗಿದ್ದು, ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಸಂಬಂಧಿಸಿದಂತೆ ನಡೆದ ಹಣಕಾಸಿನ ವಿಷಯವಾಗಿ ಇಬ್ಬರ ನಡುವೆ ಮನಸ್ತಾಪವಾಗಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ನಗರ ಪೊಲೀಸ್‌ ಆಯುಕ್ತ ಬೋರಲಿಂಗಯ್ಯ ತಿಳಿಸಿದ್ದಾರೆ.

Follow Us:
Download App:
  • android
  • ios