ಯಾದಗಿರಿಯಲ್ಲಿ ಚಿಕ್ಕಮ್ಮನ ಮೇಲೆ ಇಬ್ಬರು ಸೋದರರು ಏಳು ವರ್ಷಗಳಿಂದ ನಿರಂತರವಾಗಿ ಅತ್ಯಾ*ಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.  ಸಂತ್ರಸ್ತೆಯ ಮಗಳಿಗೂ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ.

ಯಾದಗಿರಿ: ಸಮಾಜವೇ ತಲೆ ತಗ್ಗಿಸುವಂತಹ ಘಟನೆಯೊಂದು ಯಾದಗಿರಿ (Yadagiri) ಜಿಲ್ಲೆಯಲ್ಲಿ ನಡೆದಿದೆ. ಸೋದರನೊಂದಿಗೆ ಸೇರಿಕೊಂಡು ನಿರಂತರವಾಗಿ ಅತ್ಯಾ*ಚಾರ ಎಸೆಗಲಾಗಿದೆ ಎಂದು ಸಂತ್ರಸ್ತ ಮಹಿಳೆ ಯಾದಗಿರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ (Police Station) ದೂರು ದಾಖಲಿಸಿದ್ದಾರೆ. ಯಾದಗಿರಿ ಜಿಲ್ಲೆಯ ಗುರಮಠಕಲ್ ತಾಲೂಕಿನ ಚಪೇಟ್ಲಾ ಗ್ರಾಮದ ನಿವಾಸಿಯಾಗಿರುವ ಸಂತ್ರಸ್ತೆ ಗಿರಿಜಾ (ಹೆಸರು ಬದಲಾಯಿಸಲಾಗಿದೆ), ಕಳೆದ ಏಳು ವರ್ಷದಿಂದ ತಮ್ಮ ಮೇಲೆ ಲೈಂ*ಗಿಕ ದೌರ್ಜನ್ಯ ನಡೆದಿದೆ ಎಂದು ಇಬ್ಬರು ಸೋದರರ ಮೇಲೆ ಗಂಭೀರ ಆರೋಪವನ್ನು (Allegation) ಮಾಡಿದ್ದಾರೆ. ಇಬ್ಬರು ಆರೋಪಿಗಳಿಗೆ ಮಹಿಳೆ ಸಂಬಂಧದಲ್ಲಿ ಚಿಕ್ಕಮ್ಮ (Aunty) ಆಗಬೇಕು ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ ಏಳು ವರ್ಷದಿಂದ ದೌರ್ಜನ್ಯದ ಆರೋಪ

ರಮೇಶ್ ಮತ್ತು ಲಕ್ಷ್ಮಣ್ ಎಂಬ ಸೋದರರ ವಿರುದ್ಧ ಗಿರಿಜಾ ಅವರು ಲೈಂ*ಗಿಕ ದೌರ್ಜನ್ಯದ ಆರೋಪವನ್ನು ಮಾಡಿದ್ದಾರೆ. ಆರೋಪಿ ರಮೇಶ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ರೆ, ಮತ್ತೋರ್ವ ಲಕ್ಷ್ಮಣ್ ಜೆಸ್ಕಾಂ ಉದ್ಯೋಗಿಯಾಗಿದ್ದಾನೆ. ಏಳು ವರ್ಷದಿಂದ ಇಬ್ಬರಿಂದ ದೌರ್ಜನ್ಯಕ್ಕೆ ಒಳಗಾಗಿರುವ ಬಗ್ಗೆ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಗಿರಿಜಾ ಮಗಳಿಗೆ ಅಶ್ಲೀಲ ವಾಟ್ಸಪ್ ಸಂದೇಶ

ಕಳೆದ ಏಳು ವರ್ಷಗಳಿಂದ ಜೀವ ಬೆದರಿಕೆ ಹಾಕಿ ಅತ್ಯಾ*ಚಾರ ಎಸಗಿದ್ದಾರೆ. ಜೊತೆಗೆ ನನ್ನ ಮಗಳು 14 ವರ್ಷದಾಗಿನಿಂದಲೂ ಅಶ್ಲೀಲವಾಗಿ ವಾಟ್ಸಾಪ್ ಮೆಸೇಜ್ ಕಳುಹಿಸ್ತಿದ್ದಾರೆ. ಬಟ್ಟೆಯನ್ನು ಬಿಚ್ಚಿ ಬೆತ್ತಲೆ ದೇಹವನ್ನು ತೋರಿಸು ಎಂದು ಪೀಡಿಸುತ್ತಿದ್ದಾರೆ. ರಮೇಶ್ ಹಾಗೂ ಆತನ ಸಹೋದರ ಲಕ್ಷ್ಮಣ್ ನಿಂದ ಮಾನಸಿಕ ಹಿಂಸೆ ಅನುಭಿಸತ್ತಿದ್ದೇನೆ ಎಂದು ಸಂತ್ರಸ್ತೆ ಗಿರಿಜಾ ಹೇಳಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ಪೈಶಾಚಿಕ ಕೃತ್ಯ: ಬುದ್ಧಿಮಾಂದ್ಯ ಯುವತಿಯ ಗ್ಯಾಂಗ್‌ರೇ*ಪ್‌ ಮಾಡಿ ಕುಟುಂಬಕ್ಕೆ ವಿಡಿಯೋ ಕಳಿಸಿದ ದುರುಳರು!

ಅಪ್ರಾಪ್ತ ಮಗಳನ್ನೇ ರೇ* ಮಾಡಿ ಗರ್ಭಿಣಿಯಾಗಿಸಿದ!

ಮೈಸೂರು: ತಂದೆಯೇ ಅಪ್ರಾಪ್ತೆ ಮಗಳ ಮೇಲೆ ಅತ್ಯಾ*ರವೆಸಗಿರುವ ಘಟನೆ ಮೈಸೂರಿನ ಬೆಟ್ಟದಪುರ ಬಳಿಯ ಗ್ರಾಮವೊಂದರಲ್ಲಿ ನಡೆದಿದೆ. 8 ತಿಂಗಳ ಗರ್ಭಿಣಿಯಾಗಿರುವ ಬಾಲಕಿ ಆಸ್ಪತ್ರೆಗೆ ದಾಖಲಾದಾಗ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದರು. ಈ ಬಗ್ಗೆ ಬಾಲಕಿಯನ್ನು ವಿಚಾರಿಸಿದಾಗ ತಂದೆಯೇ ಒಂದು ವರ್ಷದಿಂದ ನಿರಂತರವಾಗಿ ಲೈಂಗಿಕವಾಗಿ ಬಳಸಿಕೊಂಡಿರುವುದಾಗಿ ಹೇಳಿಕೆ ನೀಡಿದ್ದಾಳೆ. ಆರೋಪಿ ತಂದೆಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಬೆಟ್ಟದಪುರ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಇಬ್ಬರು ಬಾಲಕರನ್ನ ಅಪಹರಿಸಿ ಮಸೀದಿಯಲ್ಲಿ ರೇ*ಪ್: ಮೂವರು ಸೋದರರಿಗೆ ಶಿಕ್ಷೆ ಪ್ರಕಟ, ಇವರು ತುಂಬಾ ಡೇಂಜರ್ ಎಂದ ನ್ಯಾಯಾಲಯ