Asianet Suvarna News Asianet Suvarna News

ಬೆಂಗಳೂರು ವಿವಿ ಹಾಸ್ಟೆಲ್ ಊಟದಲ್ಲಿ ಹುಳ ಪತ್ತೆ; ವಿದ್ಯಾರ್ಥಿಗಳು ಪ್ರತಿಭಟನೆ

ಬೆಂಗಳೂರು ವಿವಿ ಹಾಸ್ಟೆಲ್‌ನ ವಿದ್ಯಾರ್ಥಿಗಳಿಗೆ ನೀಡಿದ ಅನ್ನದಲ್ಲಿ ಹುಳಗಳ ಪತ್ತೆಯಾದ ಹಿನ್ನೆಲೆ ಹಾಸ್ಟೆಲ್ ವಾರ್ಡನ್ ನಿರ್ಲಕ್ಷ್ಯದ ವಿರುದ್ಧ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Worm found in Bengaluru VV hostel food; Students protest at Bengaluru rav
Author
First Published Nov 21, 2023, 12:57 PM IST

ಬೆಂಗಳೂರು (ನ.21): ಬೆಂಗಳೂರು ವಿವಿ ಹಾಸ್ಟೆಲ್‌ನ ವಿದ್ಯಾರ್ಥಿಗಳಿಗೆ ನೀಡಿದ ಅನ್ನದಲ್ಲಿ ಹುಳಗಳ ಪತ್ತೆಯಾದ ಹಿನ್ನೆಲೆ ಹಾಸ್ಟೆಲ್ ವಾರ್ಡನ್ ನಿರ್ಲಕ್ಷ್ಯದ ವಿರುದ್ಧ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಹಾಸ್ಟೆಲ್ ವಾರ್ಡನ್ ನಿರ್ಲಕ್ಷ್ಯ ಜಾಸ್ತಿಯಾಗಿದೆ. ಕ್ವಾಲಿಟಿ ಊಟ ಕೊಡ್ತಿಲ್ಲ. ನಾವೇನಾದರೂ ಪ್ರಶ್ನೆ ಮಾಡಿದ್ರೆ ನಮ್ಮ ಮೇಲೆ ದಬ್ಬಾಳಿಕೆ ಮಾಡ್ತಾರೆ. ಗೊತ್ತಿಲ್ಲದೆ ಊಟದಲ್ಲಿ ಹುಳಗಳು ತಿಂದರೆ ಆರೋಗ್ಯ ಸಮಸ್ಯೆಯಾಗಿದೆ. ಹುಳು ಉಪ್ಪಟೆ ಇರುವ ಆಹಾರ ತಿಂದು ಜೀವಕ್ಕೆ ಅಪಾಯವಾದರೆ ಯಾರು ಹೊಣೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. 

ಹಾಸ್ಟೆಲ್‌ನಲ್ಲಿ ಊಟ, ನೀರು, ಮೂಲಭೂತ ಸೌಲಭ್ಯ ವ್ಯವಸ್ಥಿತವಾಗಿಲ್ಲ ನಿರ್ಲಕ್ಷ್ಯ ಮಾಡುವ ಹಾಸ್ಟೆಲ್ ವಾರ್ಡನ್ ಸಸ್ಪೆಂಡ್ ಮಾಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು.

ವಿಪರೀತ ಕೆಮ್ಮೆಂದು ಆಸ್ಪತ್ರೆಗೆ ಹೋದ ವ್ಯಕ್ತಿ, ಸ್ಕ್ಯಾನ್ ಮಾಡಿದಾಗ ದೇಹ ಪೂರ್ತಿ ಹುಳುಗಳು!

Follow Us:
Download App:
  • android
  • ios