ದೇವೇಗೌಡರ ಪುತ್ರಿ ಒಡೆತನದ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

* ದೇವೇಗೌಡರ ಪುತ್ರಿ ಒಡೆತನದ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು
*  ತಲಘಟ್ಟಪುರ ಠಾಣಾ ವ್ಯಾಪ್ತಿಯ ರಘುವನಹಳ್ಳಿ ಗೇಟ್ ಬಳಿ ಈ ದುರ್ಘಟನೆ
* ತಲಘಟ್ಟಪುರ ಠಾಣೆಯಲ್ಲಿ 304A ಅಡಿ ಪ್ರಕರಣ ದಾಖಲು

worker dies after slipping from HD Devegowda daughter Owned building rbj

ಬೆಂಗಳೂರು, (ಮಾ.15): ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ( HD Devegowdha ) ಪುತ್ರಿ ಒಡೆತನದ ಕಟ್ಟಡದಿಂದ ಕಾರ್ಮಿಕನೊಬ್ಬ ಕಾಲು ಜಾರಿ ಬಿದ್ದು, ಸಾವನ್ನಪ್ಪಿರೋ ಘಟನೆ  ನಡೆದಿದೆ.

ತಲಘಟ್ಟಪುರ ಠಾಣಾ ವ್ಯಾಪ್ತಿಯ ರಘುವನಹಳ್ಳಿ ಗೇಟ್ ಬಳಿ ಈ ದುರ್ಘಟನೆ ನಡೆದಿದೆ. ಕ್ಯಾತ (35) ಮೃತ ಕಾರ್ಮಿಕ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪುತ್ರಿ ಶೈಲಜಾ ಒಡೆತನದ ಕಟ್ಟಡ ಇದಾಗಿದೆ. ನಿರ್ಲಕ್ಷ್ಯತನದಿಂದ ಕಾರ್ಮಿಕನ ಸಾವು ಹಿನ್ನೆಲೆ ಮೇಸ್ತ್ರಿಯ ವಿರುದ್ಧ ತಲಘಟ್ಟಪುರ ಠಾಣೆಯಲ್ಲಿ 304A ಅಡಿ ಪ್ರಕರಣ ದಾಖಲಾಗಿದೆ.

Suicide Cases: 23ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ: ಕಾರಣ?

9 ತಿಂಗಳ ಮಗು ಬಿಟ್ಟು ಗೃಹಿಣಿ ಆತ್ಮಹತ್ಯೆ
ಕೊಳ್ಳೇಗಾಲ: ಕೌಟುಂಬಿಕ ಕಲಹದಿಂದ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಳ್ಳೆಗಾಲದಲ್ಲಿ ನಡೆದಿದೆ.

ವಿದ್ಯಾಶ್ರೀ (22) ಆತ್ಮಹತ್ಯೆಗೆ ಶರಣಾದ ಗೃಹಿಣಿ ಎಂದು ತಿಳಿದು ಬಂದಿದೆ. ಈಕೆಗೆ 9 ತಿಂಗಳ ಹೆಣ್ಣು ಮಗುವಿದೆ.

ಬಾಗಲಕೋಟೆಯ ವಿದ್ಯಾಶ್ರೀ ಇವರನ್ನು ಕಳೆದ ಮೂರು ವರ್ಷಗಳ ಹಿಂದೆ ಬೆಳಗಾವಿ ಜಿಲ್ಲೆಯ ಆನಂದ್ ಕಾಂಬಳೆ ಜೊತೆ ಮದುವೆ ಮಾಡಿಕೊಡಲಾಗಿತ್ತು. ಹನೂರು ತಾಲ್ಲೂಕಿನ ಹೂಗ್ಯಂ ಗ್ರಾ.ಪಂನ ಪಿಡಿಒ ಆಗಿರುವ ಆನಂದ್ ಕಾಂಬಳೆ ಕೊಳ್ಳೆಗಾಲದಲ್ಲಿ ವಾಸ ಮಾಡಿಕೊಂಡಿದ್ದರು.

ಆನಂದ್ ಕಾಂಬಳೆ ನಮ್ಮ ಮಗಳನ್ನು ವರದಕ್ಷಿಣೆಗಾಗಿ ಪೀಡಿಸುತ್ತಿದ್ದ. ಆಗಾಗ ಊರಿನಿಂದ ಹಣ ತರುವಂತೆ ಮಗಳಿಗೆ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದ. ಮಗಳು ಗಂಡನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ಪೋಷಕರು ಠಾಣೆಯಲ್ಲಿ ದೂರು ದಾಖಲಿಸಿ ಆರೋಪಿಸಿದ್ದಾರೆ.

ಕೊಳ್ಳೆಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಆರೋಪಿ ಆನಂದ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮತನಿಖೆ ಮುಂದುವರೆದಿದೆ.

ಕಾರು ಭಸ್ಮ, ಹಿಂಬದಿ ಸೀಟ್ ಕೆಳಗೆ ಸುಟ್ಟು ಕರಕಲಾದ ಮೃತದೇಹ ಪತ್ತೆ
ಹಾಸನ: ಸೋಮವಾರ ಮಧ್ಯ ರಾತ್ರಿ ಗ್ರಾಮವೊಂದರ ಕೆರೆಯ ಏರಿ ಮೇಲೆ ವ್ಯಕ್ತಿಯೊಬ್ಬರು ಸುಟ್ಟು ಭಸ್ಮವಾಗಿದ್ದು, ಕಾರು ಸಹಿತ ಅಗ್ನಿಗೆ ಆಹುತಿಯಾಗಿದೆ.

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬೆಳವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಕೊಣನೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕಾರಿನ ಹಿಂಬದಿ ಸೀಟ್ ನ ಕೆಳಗೆ ಸುಟ್ಟು ಕರಕಲಾದ ಮೃತದೇಹ ಬಿದ್ದಿದೆ. ಇದು ಕೊಲೆಯೋ, ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಇದೇ ವೇಳೆ, ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಮಾಹಿತಿ ಕಲೆ ಹಾಕಿದ್ದಾರೆ. ಘಟನೆಯಿಂದ ಸುತ್ತಮುತ್ತಲಿನ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಕೂಡಲೇ ಪ್ರಕರಣ ಬೇಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

23ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ
ಬೆಂಗಳೂರು:  ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ(PUC Student) ಅಪಾರ್ಟ್‌ಮೆಂಟ್‌ನ 23ನೇ ಮಹಡಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಕೋಣನಕುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೋಣನಕುಂಟೆಯ ನಿವಾಸಿ ಆರ್‌.ಅಂಜನ್‌ (17) ಮೃತ ವಿದ್ಯಾರ್ಥಿ. ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಕೋಣನಕುಂಟೆ ಕ್ರಾಸ್‌ನ ಪ್ರೆಸ್ಟೀಜ್‌ ಫಾಲ್ಕನ್‌ ಅಪಾರ್ಟ್‌ಮೆಂಟ್‌ನ(Apartment) 23ನೇ ಮಹಡಿಯಲ್ಲಿ ಅಂಜನ್‌ ದೊಡ್ಡಪ್ಪ ಅವರು ಫ್ಲ್ಯಾಟ್‌ ಹೊಂದಿದ್ದಾರೆ. ಇಲ್ಲಿ ದೊಡ್ಡಪ್ಪನ ಮಗ ಅಚಲ್‌ ನೆಲೆಸಿದ್ದ. ಭಾನುವಾರ ಬೆಳಗ್ಗೆ ಫ್ಲ್ಯಾಟ್‌ಗೆ ಬಂದಿರುವ ಅಂಜನ್‌, ಅಚಲ್‌ ಜತೆಗೆ ಟಿವಿಯಲ್ಲಿ ಕ್ರಿಕೆಟ್‌ ಪಂದ್ಯ ವೀಕ್ಷಿಸಿದ್ದಾನೆ. ಬಳಿಕ ರಾತ್ರಿ ಇಬ್ಬರೂ ಊಟ ಮಾಡಿ ನಿದ್ರೆಗೆ ಜಾರಿದ್ದಾರೆ.

ಸೋಮವಾರ ಮುಂಜಾನೆ 3.30ಕ್ಕೆ ಎದ್ದಿರುವ ಅಂಜನ್‌, ಫ್ಲ್ಯಾಟ್‌ನ ಬಾಲ್ಕನಿಗೆ ಬಂದು ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವೇಳೆ ಜೋರಾಗಿ ಶಬ್ದವಾದ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ನೋಡಿದಾಗ ಅಂಜನ್‌ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಬಳಿಕ ಸುದ್ದಿ ತಿಳಿದು ಪೊಲೀಸರು(Police) ಸ್ಥಳಕ್ಕೆ ದೌಡಾಯಿಸಿ ಸ್ಥಳ ಪರಿಶೀಲನೆ ನಡೆಸಿ, ಮೃತದೇಹವನ್ನು(Deadbody) ಮರಣೋತ್ತರ ಪರೀಕ್ಷೆ ಕಳುಹಿಸಿದ್ದಾರೆ. ಅಂಜನ್‌ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಕೋಣನಕುಂಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದೆ.

Latest Videos
Follow Us:
Download App:
  • android
  • ios