ಜೇವರ್ಗಿ(ಆ.27): ಕುಡಿದ ನಶೆಯಲ್ಲಿ ಹೆತ್ತವಳನ್ನೇ ಮಗ ಕೊಲೆ ಮಾಡಿ ಜೈಲು ಸೇರಿದ ಘಟನೆ ತಾಲೂಕಿನ ನೆಲೋಗಿ ಪೊಲೀಸ್‌ ಠಾಣೆ ವ್ಯಾಪ್ತಿಯ ಯಾತನೂರ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. 

ಯಲ್ಲವ್ವ ಸಿದ್ದಪ್ಪ ದೊಡ್ಡಮನಿ (70) ಕೊಲೆಗೀಡಾಗಿದ್ದು, ಆಕೆಯ ಹೆತ್ತ ಮಗ ಆರೋಪಿ ಹಣಮಂತ ಸಿದ್ದಪ್ಪ ದೊಡ್ಡಮನಿ ಕೊಲೆ ಮಾಡಿದ್ದಾನೆ. ಆರೋಪಿ ಹಣಮಂತ ತನ್ನ ಕುಡಿತದ ಚಟಕ್ಕೆ ನಿತ್ಯ ತಾಯಿ ಯಲ್ಲವ್ವನ ಜೊತೆ ಹಣಕ್ಕಾಗಿ ಪೀಡಿಸುತ್ತಿದ್ದ. 

ಬೇರೆ ಮಹಿಳೆ ಜೊತೆ ಗಂಡನ ಲವ್ವಿ-ಡವ್ವಿ : ಕೊಚ್ಚಿ ಕೊಂದು ಜೊತೆಗೆ ಮಲಗಿದ್ಲು ಹೆಂಡ್ತಿ!

ಹಣ ಕೊಡಲಿಲ್ಲವೆಂದು ಕಳೆದ ಮಂಗಳವಾರ ರಾತ್ರಿ ಕಂಠಪೂರ್ತಿ ಕುಡಿದು ಬಂದು ತಾಯಿ ಯಲ್ಲವ್ವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಘಟನೆ ಸುದ್ಧಿ ತಿಳಿದು ಜಿಲ್ಲಾ ಪೊಲೀಸ್‌ ವರೀಷ್ಠಾಧಿಕಾರಿ ಸೀಮಿ ಮರೀಯಮ್‌ ಜಾಜ್‌ರ್‍, ಡಿವೈಎಸ್ಪಿ ತಾಯಪ್ಪ ದೊಡ್ಡಮನಿ, ಸಿಪಿಐ ರಮೇಶ ರೊಟ್ಟಿ, ಪಿಎಸ್‌ಐ ಮಲ್ಲಣ್ಣ ಯಲಗೋಡ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನೆಲೋಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಶಾಚಿಯೂ ನಾಚುವಂಥ ಹೀನ ಕೃತ್ಯ! ಕೊಲೆ ಮಾಡಿ ರೇಪ್, ಸಿಸಿಟಿವಿಯಲ್ಲಿ ಸೆರೆ

"