Chikkaballapura Crime News: ಪ್ರಿಯಕರನೊಂದಿಗೆ ಸೇರಿ ಗ್ಯಾಸ್ ಗನ್ ಬಳಸಿ ಪತಿಯನ್ನು ಕೊಂದ ಪತ್ನಿ
Chikkaballapura Crime News: ಪ್ರಿಯಕರನ ಜೊತೆ ಸೇರಿ ಪತ್ನಿ, ಪತಿಯನ್ನು ಗ್ಯಾಸ್ ಗನ್‌ನಲ್ಲಿ ಕೋಳಿ ಸುಡುವ ರೀತಿಯಲ್ಲಿ ಸುಟ್ಟು ಭೀಕರ ಕೊಲೆ ಮಾಡಿದ್ದಾಳೆ
ಚಿಕ್ಕಬಳ್ಳಾಪುರ (ಜು. 01): ಆತ್ಮಹತ್ಯೆ ಎಂದು ಬಿಂಬಿತವಾಗಿದ್ದ ಕೊಲೆ ಪ್ರಕರಣವನ್ನು ದಿಬ್ಬೂರಹಳ್ಳಿ ಪೊಲೀಸರು ಭೇದಿಸಿದ್ದಾರೆ. ಪ್ರಿಯಕರನ ಜೊತೆ ಸೇರಿ ಪತ್ನಿ, ಪತಿಯನ್ನು ಗ್ಯಾಸ್ ಗನ್‌ನಲ್ಲಿ ಕೋಳಿ ಸುಡುವ ರೀತಿಯಲ್ಲಿ ಸುಟ್ಟು ಭೀಕರ ಕೊಲೆ (Murder) ಮಾಡಿದ್ದಾಳೆ. ಘಟನೆಯಾಗಿ 8 ತಿಂಗಳ ಬಳಿಕ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಗಂಜಿಗುಂಟೆ ಗ್ರಾಮದ ದಾದಾಪೀರ್ ಕೊಲೆಯಾದ ವ್ಯಕ್ತಿ. ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪತ್ನಿ ನಾಟಕವಾಡಿದ್ದಳು.
ದಾದಾಪೀರ್ ಪತ್ನಿ ಆಕೆಯ ಪ್ರಿಯಕರ ಬುರುಡಗುಂಟೆಯ ಮೆಹರ್ ಜೊತೆ ಸೇರಿ ಕೊಲೆ ಮಾಡಿದ್ದಾಳೆ. ದಾದಾಪೀರ್ ಅಕ್ಕ ರೇಷ್ಮಾ ತಾಜ್ ಕೊಲೆಯ ಸುಳಿವು ಕೊಟ್ಟಿದ್ದು, ಸುಳಿವು ದೊರೆಯುತ್ತಿದ್ದಂತೆ ಮೆಹರ್ ಹಾಗೂ ತೌಸಿಪ್‌ರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಇಬ್ಬರೂ ಆರೋಪಿಗಳು ಕೊಲೆ ಮಾಡಿರುವ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಇದನ್ನೂ ಓದಿ: ಚಿಕನ್, ರೊಟ್ಟಿ ತಿಂದ ಮನೆಯಲ್ಲೇ 2 ಹೆಣ ಉರುಳಿಸಿದ ಆಳು, ಬೆಚ್ಚಿಬಿದ್ದ ಗ್ರಾಮ
ಗಂಡನಿಗೆ ನಿದ್ರೆ ಮಾತ್ರೆ ಹಾಕಿ ಪ್ರಜ್ಞೆ ತಪ್ಪುತ್ತಿದ್ದಂತೆ ಕೋಳಿ ಸುಡುವ ಗ್ಯಾಸ್ ಗನ್ ನಿಂದ ಸುಟ್ಟು ಪತ್ನಿ ಹಾಗೂ ಪ್ರಿಯಕರ ಕೊಲೆಗೈದಿದ್ದಾರೆ. ಇಬ್ಬರು ಕೊಲೆ ಆರೋಪಿಗಳನ್ನು ಬಂಧಿಸಿ ದಿಬ್ಬೂರಹಳ್ಳಿ ಪೋಲಿಸರು ಜೈಲಿಗಟ್ಟಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.