ಸಿಂಧನೂರು: ಅತ್ತೆಯನ್ನೇ ಕೊಂದ ಸೊಸೆಯ ಬಂಧನ
* ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮಲ್ಕಾಪುರ ಗ್ರಾಮದಲ್ಲಿ ನಡೆದಿದ್ದ ಘಟನೆ
* ಸೊಸೆಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಅತ್ತೆ
* ಅತ್ತೆಯ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದ ಸೊಸೆ
ಸಿಂಧನೂರು(ಜು.28): ತಾಲೂಕಿನ ಮಲ್ಕಾಪುರ ಗ್ರಾಮದಲ್ಲಿ ಈತ್ತೀಚೆಗೆ ನಡೆದ ಮಹಿಳೆ ಕೊಲೆ ಪ್ರಕರಣ ಸಂಬಂಧ ವಿಶೇಷ ತನಿಖಾ ಕಾರ್ಯಾಚರಣೆ ನಡೆಸಿದಾಗ ಅತ್ತೆಯನ್ನ ಸೊಸೆಯೇ ಕೊಲೈಗೈದಿರುವ ಸತ್ಯ ಬಯಲಾಗಿದ್ದು, ಆರೋಪಿಯನ್ನು ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಲ್ಕಾಪೂರ ಗ್ರಾಮದ ಮೀನಾಕ್ಷಿ (ಕಮಲಮ್ಮ) ಎನ್ನುವ ಮಹಿಳೆಯನ್ನು ಅಪರಿಚಿತ ವ್ಯಕ್ತಿಗಳು ಆಯುಧದಿಂದ ಎಡತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾರೆ ಎಂದು ಮೃತಳ ಪುತ್ರ ನೀಡಿದ ದೂರಿನ ಮೇರೆಗೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್ಪಿ ನಿಕಮ್ ಪ್ರಕಾಶ ಅಮ್ರಿತ್ ಆದೇಶದಂತೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು, ಡಿವೈಎಸ್‌ಪಿ ವೆಂಕಟಪ್ಪ ನಾಯಕ, ಸರ್ಕಲ್ ಇನ್ಸ್‌ಪೆಕ್ಟರ್ ಉಮೇಶ ಎನ್.ಕಾಂಬಳೆ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ಸಂಶಯಾಸ್ಪದ ಮೃತಳ ಸೊಸೆ ಸೀತಾ ಬೆಟ್ಟಪ್ಪರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿತ್ತು. ಈ ವೇಳೆ ಟೈಲರಿಂಗ್ ಕೆಲಸದಿಂದ ಬಂದ ಹಣದ ಸಲುವಾಗಿ ಮತ್ತು ಅತ್ತೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದುದ್ದರಿಂದ ಆಗಾಗ್ಗೆ ಮನೆಯಲ್ಲಿ ಇಬ್ಬರಿಗೂ ಜಗಳವಾಗಿತ್ತು. ಹೀಗಾಗಿ ಮನೆಯಲ್ಲಿನ ಒನಕೆ ತೆಗೆದುಕೊಂಡು ಅತ್ತೆಯ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಆರೋಪಿತಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರವಾಸಿ ತಾಣದ ಗುಹೆಯಲ್ಲಿ ಪತ್ನಿಯೊಂದಿಗೆ ಸೆಕ್ಸ್ ನಂತರ ಹತ್ಯೆ!
ಸರ್ಕಲ್ ಇನ್ಸ್‌ಪೆಕ್ಟರ್ ಉಮೇಶ ಎನ್.ಕಾಂಬಳೆ, ಸಬ್‌ಇನ್ಸ್‌ಪೆಕ್ಟರ್ ಎರಿಯಪ್ಪ, ಸಿಬ್ಬಂದಿ ಶೆಟ್ಟೆಪ್ಪ, ದ್ಯಾಮಣ್ಣ, ಮಹಿಬೂಬ್, ಸಂಗನಗೌಡ, ಪರಶುರಾಮ, ಅಶೋಕ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕಮ್ ಪ್ರಕಾಶ ಅಮ್ರಿತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.