Bengaluru Crime: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ: ಪತಿ ಕೊಲೆ ಮಾಡಿರುವ ಶಂಕೆ
ಉದ್ಯಾನ ನಗರಿ ಬೆಂಗಳೂರಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ನೇಣಿಗೆ ಶರಣಾದ ಮಹಿಳೆಯನ್ನು ಕತೀಜಾ ಕೂಬ್ರ(29) ಎಂದು ಗುರುತಿಸಲಾಗಿದ್ದು, ಗಂಡನ ಮನೆಯವರೇ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಬೆಂಗಳೂರು (ನ.28) : ಉದ್ಯಾನ ನಗರಿ ಬೆಂಗಳೂರಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ನೇಣಿಗೆ ಶರಣಾದ ಮಹಿಳೆಯನ್ನು ಕತೀಜಾ ಕೂಬ್ರ(29) ಎಂದು ಗುರುತಿಸಲಾಗಿದ್ದು, ಗಂಡನ ಮನೆಯವರೇ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
'ನನ್ನ ಮಗಳು ಮದುವೆಯಾಗಿಂದ ಗಂಡ ಜಗಳ ಮಾಡುತ್ತಿದ್ದ. ದೈಹಿಕವಾಗಿ ಹಲ್ಲೆ ಮಾಡುತ್ತಿದ್ದ. ಅವನಿಗೆ ಬೇರೊಬ್ಬಳೊಂದಿಗೆ ಸಂಬಂಧವಿತ್ತು. ಹೀಗಾಗಿ ಕತೀಜಾಳನ್ನ ಪತಿ ಮಹೆಬೂಬ್ ಪರೀಷನೇ ಹೊಡೆದು ಕೊಂದಿದ್ದಾನೆ ಎಂದು ಕತೀಜಾ ತಂದೆ ಆರೋಪಿಸಿದ್ದಾರೆ. ಇದು ಆತ್ಮಹತ್ಯೆಯಲ್ಲ ಕೊಲೆಯಾಗಿದ್ದುಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
Bengaluru Crime: ಸೆಕ್ಸ್‌ಗೆ ಸಮ್ಮತಿಸಿ, ಬ್ಲ್ಯಾಕ್‌ಮೇಲ್ ಮಾಡಿ ₹43 ಲಕ್ಷ ಪೀಕಿದ ಕೆಲಸದಾಕೆ: ದೂರು
ಕತೀಜಾಳ ತಂದೆ ಗಂಭೀರ ಆರೋಪ ಮಾಡಿರುವ ಹಿನ್ನೆಲೆ ಮೃತ ಕತೀಜಾ ಅವ್ರ ಗಂಡ ಮಾವ ಮತ್ತು ನಾದಿನಿಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸದುಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಪನ್ನಪಾಳ್ಯದಲ್ಲಿ ಘಟನೆ ನಡೆದಿದೆ.
2ನೇ ಮದುವೆಗೆ ಒಪ್ಪದ ಮಾಜಿ ಪ್ರೇಯಸಿಗೆ ಚೂರಿ ಇರಿತ
ಬೆಂಗಳೂರು: ಎರಡನೇ ವಿವಾಹಕ್ಕೆ ನಿರಾಕರಿಸಿದ ವಿವಾಹಿತ ಮಾಜಿ ಪ್ರೇಯಸಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಂದಿರಾನಗರದ ಕದಿರಯ್ಯನಪಾಳ್ಯ ನಿವಾಸಿ ಅಮುದಾ ಚಾಕು ಇರಿತಕ್ಕೆ ಒಳಗಾದವರು. ನ.25ರಂದು ರಾತ್ರಿ 10.30ರ ಸುಮಾರಿಗೆ ಕದಿರಯ್ಯನಪಾಳ್ಯದಲ್ಲಿ ಈ ಘಟನೆ ನೀಡಿದೆ. ಗಾಯಾಳು ಅಮುದಾ ನೀಡಿದ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಅಂಬೇಡ್ಕರ್ ನಗರ ನಿವಾಸಿಯಾದ ಆಟೋ ಚಾಲಕ ನವಾಜ್ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಆರೋಪಿ ನವಾಜ್ ಮತ್ತು ಅಮುದಾ ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ನವಾಜ್ ಬೇರೆ ಹುಡುಗಿ ಜತೆಗೆ ವಿವಾಹವಾಗಿದ್ದ. ಹೀಗಾಗಿ ಅಮುದಾ ಏಳುಮಲೈ ಎಂಬಾತನನ್ನು ವರಿಸಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ಮತ್ತೆ ಅಮುದಾ ಸಂಪರ್ಕಕ್ಕೆ ಬಂದ ನವಾಜ್, ‘ನಿನ್ನ ಗಂಡ ಸರಿಯಿಲ್ಲ. ನಿನ್ನನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ನನ್ನನ್ನು ಎರಡನೇ ಮದುವೆಯಾಗು’ ಎಂದು ಒತ್ತಾಯಿಸುತ್ತಿದ್ದ. ಇದಕ್ಕೆ ಅಮುದಾ ನಿರಾಕರಿಸಿದ್ದಳು. ಆದರೂ ಆರೋಪಿ ನವಾಜ್ ಆಗಾಗ ಮನೆ ಬಳಿ ಬಂದು ತನ್ನನ್ನು ಎರಡನೇ ಮದುವೆಯಾಗುವಂತೆ ಅಮುದಾಗೆ ಕಿರುಕುಳ ನೀಡುತ್ತಿದ್ದ.
Bengaluru: ಸ್ನೇಹಿತನನ್ನೇ ಬ್ಲ್ಯಾಕ್‌ಮೇಲ್ ಮಾಡಿ 16 ಲಕ್ಷ ಸುಲಿಗೆ!
ಮತ್ತೊಂದೆಡೆ ನವಾಜ್ ಹಾಗೂ ಪತ್ನಿಯ ಗಲಾಟೆ ನೋಡಿ ರೋಸಿ ಹೋಗಿದ್ದ ಏಳಮಲೈ, ಪತ್ನಿ ಹಾಗೂ ಮಕ್ಕಳಿಂದ ದೂರವಾಗಿ ಪ್ರತ್ಯೇಕವಾಗಿ ನೆಲೆಸಿದ್ದ. ಹೀಗಾಗಿ ಅಮುದಾ ಕದಿರಯ್ಯನಪಾಳ್ಯದ ತವರು ಮನೆ ಸೇರಿದ್ದಳು. ಆದರೆ, ಇಲ್ಲಿಗೂ ಬರುತ್ತಿದ್ದ ಆರೋಪಿ ನವಾಜ್, ಅಮುದಾಗೆ ಎರಡನೇ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ನ.25ರಂದು ಅಮುದಾ ಮಕ್ಕಳ ಜತೆ ಅಂಗಡಿಗೆ ತೆರಳಿ ಮನೆಗೆ ವಾಪಾಸಾಗುವಾಗ ಎದುರಾದ ಆರೋಪಿ ನವಾಜ್, ಚಾಕು ತೆಗೆದು ಅಮುದಾಗೆ ಹಲವು ಬಾರಿ ಇರಿದು ಪರಾರಿಯಾಗಿದ್ದಾನೆ. ಈ ಸಂಬಂಧ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.