Asianet Suvarna News Asianet Suvarna News

ಹೆಣ್ಣು ಮಕ್ಕಳೇ ಹುಷಾರ್! ಕೆಲಸ ಕೊಡಿಸೊದಾಗಿ ನಂಬಿಸಿ ಯುವತಿಯ ಅತ್ಯಾಚಾರ ಎಸಗಿದ ಕಾಮುಕ ಟೆಕ್ಕಿ!

ಮೂರು ನಕಲಿ ಇನ್ಸ್ಟಾಗ್ರಾಮ್ ಖಾತೆಗಳನ್ನು ಬಳಸಿ ಕಳ್ಳಾಟವಾಡುತಿದ್ದ ಟೆಕ್ಕಿಯನ್ನು ಬೆಂಗಳೂರು ಸೈಬರ್ ಪೊಲೀಸರು ಬಂದಿಸಿದ್ದಾರೆ. ಈತ ಯುವತಿಯರಿಗೆ ಕೆಲಸ ಕೊಡಿಸೊದಾಗಿ ನಂಬಿಸುತಿದ್ದ. ಈತನ ಜಾಲಕ್ಕೆ ಸಿಲುಕಿದ ಹೆಣ್ಣು ಮಕ್ಕಳು ಅತ್ಯಾಚಾರ ಹಾಗೂ ಬಲವಂತದ ಸಂಭೋಗಕ್ಕೆ ಸಿಲುಕಿ ನಲುಗಿದ್ದಾರೆ.

Techie arrested who poses as woman on Insta to befriend student and rapes her gow
Author
First Published Feb 3, 2023, 9:26 PM IST

ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು (ಫೆ.3): ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರುವ ಹೆಣ್ಣು ಮಕ್ಕಳು ಈ ಸ್ಟೋರಿ ನೋಡಲೇ ಬೇಕು. ಅಪರಿಚಿತರು ಮೆಸೇಜ್ ಮೂಲಕ ತಮ್ಮ ವಂಚನೆಗೆ ಗಾಳ ಹಾಕಿ ಹೆಣ್ಣು ಮಕ್ಕಳನ್ನೇ ಹೇಗೆಲ್ಲಾ ಬಳಸಿಕೊಳ್ತಾರೆ ಅನ್ನೊದಕ್ಕೆ ಬೆಸ್ಟ್ ಎಕ್ಸಾಂಪಲ್. ದಿಲ್ಲಿ ಪ್ರಸಾದ್ ಮೂಲತಃ ಆಂಧ್ರದವನಾದ ಈತ ಖಾಸಗಿ ಕಂಪನಿಯ ಟೆಕ್ಕಿ. ಕೈತುಂಬ ಸುಂಬಳ. ಓಳ್ಳೆ ಕೆಲಸ.‌ ಆದರೆ ಈತನಿಗಿದ್ದ ಮಾದ ತೀಟಿಗೆ ಯುವತಿಯರ ಜೊತೆ ಚೆಲ್ಲಾಟವಾಡಿದ್ದಾನೆ.  ಮೂರು ನಕಲಿ ಇನ್ಸ್ಟಾಗ್ರಾಮ್ ಖಾತೆಗಳನ್ನು ಬಳಸಿ ಕಳ್ಳಾಟವಾಡುತಿದ್ದ ಈತ ಯುವತಿಯರಿಗೆ ಕೆಲಸ ಕೊಡಿಸೊದಾಗಿ ನಂಬಿಸುತಿದ್ದ. ಈತನ ಜಾಲಕ್ಕೆ ಸಿಲುಕಿದ ಹೆಣ್ಣು ಮಕ್ಕಳು ಅತ್ಯಾಚಾರ ಹಾಗೂ ಬಲವಂತದ ಸಂಭೋಗಕ್ಕೆ ಸಿಲುಕಿ ನಲುಗಿರುವ ಘಟನೆ ಆಗ್ನೇಯ ವಿಭಾಗದ ಸಿಇಎನ್ ಪೊಲೀಸರ ತನಿಖೆ ವೇಳೆ ಬಯಲಾಗಿದೆ.

 ಈ ಪ್ರಸಾದ್ ಇನ್ಸ್ಟಾಗ್ರಾಮ್ ನಲ್ಲಿ ಮೂರು ಖಾತೆ ತೆರೆಯುತಿದ್ದನಂತೆ ಮೊನಿಕಾ, ಮ್ಯಾನೇಜರ್ ಹಾಗೂ ಪ್ರಸಾದ್. ಇದರಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಳ್ಳಲು ಹಾಗೂ ಅವರ ಜೊತೆ ಆತ್ಮೀಯತೆ ಬೆಳೆಸಿಕೊಳ್ಳಲು ಮೊನಿಕಾ ಅಕೌಂಟ್ ಬಳಸುತಿದ್ದನಂತೆ. ಬಳಿಕ ಯುವತಿಯ ಆರ್ಥಿಕ ಸಮಸ್ಯೆಗಳನ್ನು ತಿಳಿದುಕೊಂಡು ಒಳ್ಳೆಯ ಕಡೆ ಕೆಲಸ ಕೊಡಿಸೊದಾಗಿ ನಂಬಿಸುತಿದ್ದನಂತೆ. ಆಗ ಆ ಕೆಲಸ ಪಡೆಯಲು ಕೆಲವು ಕಾಂಪ್ರಮೌಸ್ ಆಗ ಬೇಕು ನಾನು ಸಹ ಆಗಿದ್ದೆ ಎಂದು ಯುವತಿ ರೀತಿ ಮೆಸೆಜ್ ಮಾಡಿ ಕೆಡ್ಡಾಕೆ ತೊಡುತಿದ್ದ. ನಂತರ ಆಕೆಯ ಕೆಲ ನಗ್ನ ಚಿತ್ರಗಳನ್ನು ಪಡೆದು ತನ್ನ ಅಸಲಿ ಅಕೌಟ್ ನಿಂದ ಆಕೆಗೆ ಕೆಲಸ ಕೊಡೊದಾಗಿ ಹೇಳುತಿದ್ದ ಕೊನೆ ಮ್ಯಾನೇಜರ್ ಜೊತೆ ಮಾತಾಡಿ ಎಂದು ಮತ್ತೊಂದು ನಕಲಿ ಅಕೌಂಟ್ ನಿಂದ ಆಕೆಗೆ ಮೆಸೆಜ್ ಮಾಡುತಿದ್ದ.

ಇದೆಲ್ಲಾ ಆದ ಬಳಿಕ ಕೆಲಸ ಸಿಗಬೇಕು ಎಂದರೇ ತನ್ನೊಂದಿಗೆ ಲೈಂಗಿಕ ಕ್ರಿಯೆ ಮಾಡಬೇಕೆನ್ನುತಿದ್ದ. ವಿರೋಧಿಸಿದರೇ ತನ್ನ ಬಳಿ ಇದ್ದ ಆಕೆಯ ನಗ್ನ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹಂಚಿದಾಗಿ ಬೆದರಿಸುತಿದ್ದ. ಬಳಿಕ ನಗರದ ಖಾಸಗಿ ಹೋಟೆಲ್ ನಲ್ಲಿ ಕರೆಸಿ ಅತ್ಯಾಚಾರ ಮಾಡುತಿದ್ದ ಆತ ಆಗ ಕೆಲ ವಿಡಿಯೋಗಳನ್ನು ಮಾಡಿಕೊಂಡು ಮತ್ತೆ ಮತ್ತೆ ಕರೆದು ಬಲವಂತವಾಗಿ ಸಂಭೋಗ ನಡೆಸುತಿದ್ದನಂತೆ. ಇನ್ನು ಇದೇ ರೀತಿ ಹಲವು ಬಾರಿ ಈತನಿಂದ ಅತ್ಯಾಚಾರಕ್ಕೊಳಗಾದ ಯುವತಿಯೋರ್ವಳು ಆಗ್ನೇಯ ವಿಭಾಗದ ಪೊಲೀಸರ ಬಳಿ ತೆರಳಿದ್ಲು. ಅಲ್ಲಿ ತನಾಗದ ಅತ್ಯಾಚಾರದ ವಿಚಾರ ಹೇಳಿಕೊಂಡಿದ್ದಳು. ಕೊನೆಗೆ ತನಿಖೆಗಿಳಿದ ಪೊಲೀಸರಿಗೆ ಶಾಕ್ ಕಾದಿತ್ತು.

ಚಾರ್ಮಾಡಿ ಘಾಟ್ ಭಯಾನಕತೆ ಸ್ವರೂಪ, ಸುಂದರ ಬೆಟ್ಟದ ಪ್ರಪಾತ ಕೊಲೆಯಾದ ಶವಗಳಿಗೆ ಆಶ್ರಯವೇ!

ಕಾರಣ ಈ ಕಾಮ ಪಿಶಾಚಿ ತನ್ನ ಐಟಿ ಕೆಲಸದ ಜೊತೆ ಇದನ್ನು ಸಹ ಕೆಲಸ ಮಾಡಿಕೊಂಡಿದ್ದ. ಹಲವು ಯುವತಿಯರನ್ನು ಸಾಮಾಜಿಕ ಜಾಲತಾಣದಲ್ಲಿ ಬೆದರಿಸಿ ವಿಡಿಯೋ ಕಾಲ್ ನಲ್ಲೇ ಕಿರುಕುಳ ಕೊಟ್ಟು ಬೆದರಿಸಿ ಅವರ ನಗ್ನ ವಿಡಿಯೋಗಳ ಮೂಲಕ ಆನಂದಿಸುತಿದ್ದ. ಜೊತೆಗೆ ಕೆಲಸ ಕೊಡಿಸೊದಾಗಿ ನಂಬಿಸಿ ಅದೇ ಮಾದರಿ ಮೂವರು ಯುವತಿಯರ ಜೊತೆ ಲೈಂಗಿಕ ಕೃತ್ಯ ಎಸಗಿರೊದು ಸಹ ತನಿಕೆ ವೇಳೆ ಬಯಲಾಗಿದೆ. ಇನ್ನು ಈತನ ಮೊಬೈಲ್ ವಶಕ್ಕೆ ಪಡೆದ ಪೊಲೀಸರಿಗೆ ಮತ್ತಷ್ಟು ಕೃತ್ಯಗಳ ಎಸಗಿರೋ ವಾಸನೆ ಬಡೆದಿದ್ದು ತನಿಖೆ ಮುಂದುವರೆಸಿದ್ದಾರೆ.

GANJA CASE: ಬೆಳಗಾವಿಯ ಟಿಳಕವಾಡಿ ಸಿಪಿಐ, ಇಬ್ಬರು ಸಿಬ್ಬಂದಿ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು

 ಸದ್ಯ ಆರೋಪಿಯನ್ನು ಬಂಧಿಸಿರುವ ಆಗ್ನೇಯ ವಿಭಾಗ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಮತ್ತೊಂದೆಡೆ ಈತನ ಕಾಮ ಪಿಶಾಚಿ ಕೃತ್ಯಕ್ಕೆ ವಂಚನೆಗೊಳಗಾದ ಮಹಿಳೆಯರ ಸಂಪರ್ಕಿಸಿ ಈತನ ವಿರುದ್ಧ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.  ಆದ್ರೆ ಅದೇನೆ ಇದ್ರು ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಇದ್ದು ಕೆಲಸ ಹುಡುಕುವ ಹೆಣ್ಣು ಮಕ್ಕಳು ಇಂತಹ ಮಂದಿಯಿಂದ ದೂರ ಇರೊದು ಒಳ್ಳೆಯದು. ಸದ್ಯ ಆಗ್ನೇಯ ವಿಭಾಗ ಸೈಬರ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Follow Us:
Download App:
  • android
  • ios