Asianet Suvarna News Asianet Suvarna News

30 ವರ್ಷದ ಹಿಂದೆ ರೇಪ್, ಮಗನ ನೆರವಿನಿಂದ ಅತ್ಯಾಚಾರಿಗಳ ಜೈಲಿಗೆ ಕಳುಹಿಸಿದ ತಾಯಿ!

ಬರೋಬ್ಬರಿ 30 ವರ್ಷದ ಹಿಂದೆ ಇಬ್ಬರು ಭೀಕರ ಅತ್ಯಾಚಾರ ಎಸಗಿದ್ದರು. ಆದರೆ ನೋವು, ಆಕ್ರೋಶ, ಗಾಯ ಮಾಸಿರಲಿಲ್ಲ. ಇದೀಗ ಮಗನ ನೆರವಿನಿಂದ ತನ್ನ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಕಾಮುಕರನ್ನು ಮಹಿಳೆ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾಳೆ.
 

Woman sends rapist into jail after 30 years with help of Son in Uttar Pradesh ckm
Author
First Published May 23, 2024, 11:58 PM IST

ಬರೇಲಿ(ಮೇ.23) ಅರಳುವ ವಯಸ್ಸಿನಲ್ಲಿ ಅತ್ಯಾಚಾರದ ಶಾಕ್. ಇಬ್ಬರು ಕಾಮುಕರು 12ರ ಬಾಲೆಯನ್ನು ಮುಕ್ಕಿದ್ದರು. ಈ ಘಟನೆಯಿಂದ ಬಾಲಕಿ ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಈ ಘಟನೆ ನಡೆದು 30 ವರ್ಷಗಳು ಉರುಳಿತ್ತು. ಇದೀಗ ಮಗನ ನೆರವಿನಿಂದ ಇಬ್ಬರು ಅತ್ಯಾಚಾರಿಗಳನ್ನು ಮಹಿಳೆ ಜೈಲಿಗೆ ಕಳುಹಿಸಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಅದು 1994ರಲ್ಲಿ ನಡೆದ ಘಟನೆ. ಆಕೆಗೆ 12 ವರ್ಷ ವಯಸ್ಸು. ಇಬ್ಬರು ಕಾಮುಕರು ಈ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದರು. ಅದು ಇಬ್ಬರು ಅತ್ಯಾಚಾರದ ಆಘಾತಕ್ಕೆ ಬಾಲಕಿ ನಲುಗಿ ಹೋಗಿದ್ಧಳು. ಮಾನಸಿಕ ಆಘಾತ, ದೈಹಿಕ ಹಲ್ಲೆ, ಸಮಾಜದ ಮುಂದೆ ಮಾನ ಹೋದ ಅವಮಾನ, ಪೋಷಕರ ಕಣ್ಣೀರು, ಕುಟುಂಬಸ್ಥರು ಸಲಹೆ. ಹೀಗೆ 12ನೇ ವಯಸ್ಸಿನಲ್ಲಿ ಬಾಲಕಿ ಎದುರಿಸಿದ ಯಾತನೆ ಅಷ್ಟಿಷ್ಟಲ್ಲ. ಇಷ್ಟಕ್ಕೆ ಈ ಘಟನೆ ಮುಗಿದು ಹೋಗಿಲ್ಲ. ಅತ್ಯಾಚಾರದಿಂದ ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿದ್ದಳು.

ಜೊತೆಯಾಗಿ ಅಶ್ಲೀಲ ವಿಡಿಯೋ ನೋಡಿ ಸೆಕ್ಸ್; ಅಕ್ಕ ಗರ್ಭಿಣಿ, 13 ವರ್ಷದ ತಮ್ಮ ಪೊಲೀಸ್ ವಶಕ್ಕೆ!

ಗಂಡು ಮಗುವಿಗೆ ಜನ್ಮ ನೀಡಿದ ಬಾಲಕಿ ಮತ್ತೆ ಇಲ್ಲದ ನೋವು ಅನುಭವಿಿದರು.ಕುಟುಂಬಸ್ಥರ ಸಲಹೆಯಿಂದ ಗಂಡು ಮಗುವನ್ನು ದತ್ತು ನೀಡಲಾಗಿತ್ತು. ಬಳಿಕ ಈ ಬಾಲಕಿ ದೊಡ್ಡವಳಾಗುತ್ತಿದ್ದಂತೆ ದತ್ತು ನೀಡಿದ ಮಗು ಎಲ್ಲಿದೆ ಅನ್ನೋ ಮಾಹಿತಿಯೂ ಈಕೆಗೆ ಇರಲಿಲ್ಲ. ಆದರೆ ದತ್ತು ನೀಡಿದ ಮಗು ಸತತ ಹೋರಾಟ, ಹುಡುಕಾಟದ ಬಳಿಕ ಜನ್ಮ ನೀಡಿದ ಈಕೆಯನ್ನು ಭೇಟಿ ಮಾಡಿದ್ದಾನೆ. 

ಅತ್ಯಾಚಾರ ಎಸಗಿದ ರೇಪಿಸ್ಟ್‌ಗಳ ವಿರುದ್ಧ ಕಾನೂನು ಹೋರಾಟಕ್ಕೆ ಈ ಮಗ ಹುರಿದುಂಬಿಸಿದ್ದಾನೆ. ಇದಕ್ಕೆ ಬೇಕಾದ ಎಲ್ಲಾ ನೆರವನ್ನು ಆತ ಮಾಡಿದ್ದಾನೆ. ಮಗನ ನೆರವು, ಸಲಹೆಯಂತೆ ಈ ಮಹಿಳೆ ಕಾನೂನು ಹೋರಾಟ ಆರಂಭಿಸಿದ್ದಾಳೆ.  ಕಳೆದ ವಾರ ಶಹಜಾನ್ಪುರದ ಕೋರ್ಟ್ ಇಬ್ಬರು ಆರೋಪಿಗಳಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ತಲಾ 30 ,000 ರೂಪಾಯಿ ದಂಡ ವಿಧಿಸಿದೆ. ಅತ್ಯಾಚಾರ ನಡೆದು 30 ವರ್ಷದ ಬಳಿಕ ಇದೀಗ ಅತ್ಯಾಚಾರಿಗಳು ಜೈಲು ಸೇರಿದ್ದಾರೆ.

ಮಹಿಳೆಯ ಎಳೆದೊಯ್ದು ಕಾರು ಪಾರ್ಕಿಂಗ್‌ನಲ್ಲಿ ಅತ್ಯಾಚಾರ, ಸಿಸಿಟಿವಿಯಲ್ಲಿ ಭೀಕರ ದೃಶ್ಯ ದಾಖಲು!

ನನ್ನ ಮೇಲೆ ನಡೆದ  ಅತ್ಯಾಚಾರದಿಂದ ನಾನು ಜರ್ಝರಿತನಾಗಿದ್ದೆ. ಆದರೆ ನನ್ನ ಮಗ ಹೋರಾಟಕ್ಕೆ ಬೆಂಬಲ ನೀಡಿ ಧೈರ್ಯ ತುುಂಬಿದ್ದ. ಇದೀಗ ನಾನು ಹೆಚ್ಚು ಸಂಭ್ರಮಿಸುವ ದಿನ ಬಂದಿದೆ. ಇಬ್ಬರು ಜೈಲು ಸೇರಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios