Asianet Suvarna News Asianet Suvarna News

ಅಂಕೋಲಾ: ಮೈದುನ ಮೇಲೆ ಮಾನಭಂಗ ಆರೋಪ, ದೂರು

ಆರೋಪಿ ಉಮರ್‌ ಅಹ್ಮದ ಶೇಖ ವಿರುದ್ದ ಪಿಎಸೈ ಉದ್ದಪ್ಪ ಧರೆಪ್ಪನವರ್ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ. ಆರೋಪಿಯ ಮೇಲೆ ಐಪಿಸಿ 506,504,323,354 ಕಲಂಅಡಿ ಪ್ರಕರಣ ದಾಖಲಾಗಿದೆ.

Woman Register Rape Complaint at Ankola in Uttara Kannada grg
Author
First Published Feb 8, 2024, 1:00 AM IST

ಅಂಕೋಲಾ(ಫೆ.08): ಗಂಡನ ತಮ್ಮನೆ ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ, ಮಾನಭಂಗ ನಡೆಸಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬಳು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪಟ್ಟಣದ ಕಾಕರಮಠದ ಮಹಿಳೆಯೊಬ್ಬಳು ಈ ಬಗ್ಗೆ ಪೊಲೀಸ್ ದೂರು ನೀಡಿ ಫೆ. 4ರಂದು ಸಂಜೆ 4.50ರಿಂದ 5.15ರ ಅವಧಿಯಲ್ಲಿ ನಾನು ಅಂಗಡಿಯಿಂದ ಮನೆಗೆ ಬಂದಾಗ ಗಂಡನ ತಮ್ಮ ಉಮರ ಅಹ್ಮದ್‌ ಶೇಖ ಅವಾಚ್ಯವಾಗಿ ಬೈದು, ನಿನ್ನ ಗಂಡ ಎಲ್ಲಿ ಹೋಗಿದ್ದಾನೆ. ಈಗ ಎಲ್ಲಿದ್ದಾನೆ. ಆತನ ಮೇಲೆ ನಾವು ಪೊಲೀಸ್ ಠಾಣೆಯಲ್ಲಿ ಕೇಸ್ ಕೊಟ್ಟಿದ್ದೇವೆ. ಆತನಿಗೆ ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳುತ್ತಲೆ. ನನ್ನ ಹಿಂಬಾಲಿಸಿ ಕೈ ಹಿಡಿದು ಎಳೆದು, ಹೊಡೆದಿದ್ದಾನೆ. ಜತೆಗೆ ಬಟ್ಟೆ ಹರಿದು ಹಾಕಿ, ಮಾನಕ್ಕೆ ಕುದುಂಟು ಮಾಡಿದ್ದಾನೆ. ಆಗ ನಾನು ಜೋರಾಗಿ ಕೂಗಿದಾಗ ಬೆಡ್‌ ರೂಮ್‌ನಿಂದ ಹೊರ ಬಂದು, ಮತ್ತೆ ಅವಾಚ್ಯವಾಗಿ ನಿಂದಿಸಿ ನಿನಗೆ ಹಾಗೂ ನಿನ್ನ ಗಂಡನನ್ನು ನಾನು ಸುಮ್ಮನೆ ಬಿಡುವುದಿಲ್ಲ. ಇಬ್ಬರನ್ನು ಕೊಂದು ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕಲಬುರಗಿ: ಅಪ್ರಾಪ್ತೆಯರ ಮೇಲೆ ಅತ್ಯಾಚಾರ, ಇಬ್ಬರು ಕಾಮುಕರಿಗೆ 20 ವರ್ಷ ಜೈಲು ಶಿಕ್ಷೆ

ಆರೋಪಿ ಉಮರ್‌ ಅಹ್ಮದ ಶೇಖ ವಿರುದ್ದ ಪಿಎಸೈ ಉದ್ದಪ್ಪ ಧರೆಪ್ಪನವರ್ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ. ಆರೋಪಿಯ ಮೇಲೆ ಐಪಿಸಿ 506,504,323,354 ಕಲಂಅಡಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios