ಮುಂಬೈನ ಅಂಧೇರಿಯ ಸಹರ್ ರಸ್ತೆಯ ನೆರೆಹೊರೆಯಲ್ಲಿರುವ ವಸತಿ ಕಟ್ಟಡದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬುಧವಾರ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈ (ಜೂ. 17): ತಾಯಿಯೊಬ್ಬಳು ತನ್ನ ಮಾನಸಿಕ ಅಸ್ವಸ್ಥ ಮಗಳ ಸ್ಥಿತಿಯಿಂದ ಕಂಗಾಲಾಗಿ ಕತ್ತು ಹಿಸುಕಿ ಕೊಂದಿರುವ ಘಟನೆ ಮುಂಬೈನ ಪಶ್ಚಿಮ ಭಾಗದ ಅಂಧೇರಿಯಲ್ಲಿ ನಡೆದಿದೆ. ಅಂಧೇರಿಯ ಸಹರ್ ರಸ್ತೆಯ ನೆರೆಹೊರೆಯಲ್ಲಿರುವ ವಸತಿ ಕಟ್ಟಡದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬುಧವಾರ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ಆಗಮಿಸಿದಾಗ ವೈಷ್ಣವಿ ಸುರೇಶ್ (19), ಆಕೆಯ ತಾಯಿ ಶ್ರದ್ಧಾ ಮತ್ತು ಕೆಲವು ಸಂಬಂಧಿಕರು ಶವದ ಬಳಿ ಕುಳಿತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಶವವನ್ನು ಕೂಪರ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಆಕಸ್ಮಿಕ ಸಾವಿನ ವರದಿಯನ್ನು (ಎಡಿಆರ್) ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆ ವೇಳೆ ಯುವತಿಯ ಕುತ್ತಿಗೆ ಭಾಗದಲ್ಲಿ ಗುರುತುಗಳು ಪತ್ತೆಯಾದ ನಂತರ ಪೊಲೀಸರು ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಯುವತಿಯ ತಾಯಿ ಮೊದಲು ತನ್ನ ಮಗಳನ್ನು ಕೊಂದಿರುವುದನ್ನು ನಿರಾಕರಿಸಿದ್ದರು, ಆದರೆ ನಂತರ ಅವಳನ್ನು ಕತ್ತು ಹಿಸುಕಿ ಸಾಯಿಸಿರುವುದಾಗಿ ಮತ್ತು ಆತ್ಮಹತ್ಯೆಯ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಹೊತ್ತು ಊಟಕ್ಕಾಗಿ ಮೃತ ಸಹೋದರನನ್ನು ಕೊಂದೆ ಎಂದ ನಿರುದ್ಯೋಗಿ ತಮ್ಮ
ಆರೋಪಿ ಮಹಿಳೆ ತನ್ನ ಮಗಳು ಹುಟ್ಟಿನಿಂದಲೇ ಮಾನಸಿಕವಾಗಿ ಅಸ್ವಸ್ಥಳಾಗಿದ್ದಳು ಮತ್ತು ಆಕೆಯ ಸ್ಥಿತಿಯಿಂದ ಅವಳು ಕಂಗಾಲಾಗಿದ್ದಳು ಎಂದು ಹೇಳಿದ್ದಾರೆ ಎಂದು ಪೊಲೀಸರ ತಿಳಿಸಿದ್ದಾರೆ. ಆಕೆಯನ್ನು ಬಂಧಿಸಿ ಐಪಿಸಿಯ ಸೆಕ್ಷನ್ 302 (ಕೊಲೆ) ಅನ್ವಯ ಪ್ರಕರಣ ದಾಖಲಿಸಲಾಗಿದೆ.
