Asianet Suvarna News Asianet Suvarna News

ವಿಜಯಪುರ: ಹಬ್ಬದ ದಿನವೇ ಭೀಮಾತೀರದಲ್ಲಿ ಡೆಡ್ಲಿ ಮರ್ಡರ್..!

ಕ್ಷುಲ್ಲಕ ಕಾರಣಕ್ಕೆ ಹೆಂಡತಿಯನ್ನ ಬರ್ಬರ ಹತ್ಯೆಗೈದ ಪತಿ| ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವಣಗಾಂವ ಗ್ರಾಮದಲ್ಲಿ ನಡೆದ ಘಟನೆ| ಈ ಸಂಬಂಧ ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು|

Woman Murder in Sindagi in Vijayapura District grg
Author
Bengaluru, First Published Oct 25, 2020, 12:10 PM IST

ವಿಜಯಪುರ(ಅ.25):  ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ದೇವಣಗಾಂವದಲ್ಲಿ ಇಂದು(ಭಾನುವಾರ) ನಡೆದಿದೆ. ಮಲ್ಲಕವ್ವ ಹರಗೋಲ(45) ಎಂಬಾಕೆಯೇ ಹತ್ಯೆಗೀಡಾದ ಮಹಿಳೆಯಾಗಿದ್ದಾಳೆ. 

ಶಿವಪ್ಪ ಹರಗೋಲ ಎಂಬುವನೇ ಪತ್ನಿಯನ್ನ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಸಾರಾಯಿ ಕುಡಿಯಲು ಹೆಂಡ್ತಿ ದುಡ್ಡು ಕೊಡದೇ ಇರುವುದಕ್ಕೆ ಕೊಡಲಿಯಿಂದ ಕೊಚ್ಚಿ ಹತ್ಯೆಗೈದಿದ್ದಾನೆ ಎಂದು ಹೇಳಲಾಗುತ್ತಿದೆ.

ಕೊಪ್ಪಳ: ಬಾಲಕನ ಕೈ ಕಾಲು ಕಟ್ಟಿ ಕಾಲುವೆಗೆ ಎಸೆದು ಕೊಲೆಗೈದ ದುಷ್ಕರ್ಮಿಗಳು

ಹೆಂಡತಿನ್ನ ಕೊಂದು ಆರೋಪಿ ಶಿವಪ್ಪ ಹರಗೋಲ ಪರಾರಿಯಾಗಿದ್ದಾನೆ. ಈ ಸಂಬಂಧ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದೆ. 
 

Follow Us:
Download App:
  • android
  • ios