ಕೊಪ್ಪಳ(ಅ.25): ದುಷ್ಕರ್ಮಿಗಳ ತಂಡವೊಂದು ಹತ್ತು ವರ್ಷದ ಬಾಲಕನ ಕೈ ಕಾಲು ಕಟ್ಟಿ ಕಾಲುವೆಗೆ ಹಾಕಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಇಂದು(ಭಾನುವಾರ) ನಡೆದಿದೆ. ಮಲ್ಲಿಕಾರ್ಜುನ ಎಂಬಾತನೇ ಕೊಲೆಗೀಡಾದ ಬಾಲಕನಾಗಿದ್ದಾನೆ.

ಮೃತ ಮಲ್ಲಿಕಾರ್ಜುನ ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದ ನಜೀರ್ ಕಾಲೋನಿ‌ ನಿವಾಸಿಯಾಗಿದ್ದು, ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದನು. ಈ ಸಂಬಂಧ ಬಾಲಕನ ಪೋಷಕರು ಪೊಲೀಸ್‌ ಠಾಣೆಯಲ್ಲಿನ ದೂರು ನೀಡಿದ್ದರು. 

ಕೊಪ್ಪಳ: ಕೊಲೆ ಪ್ರಕ​ರಣ ಭೇದಿಸುವ ನೆಪ​ದಲ್ಲಿ ಅಮಾ​ಯ​ಕ​ರಿಗೆ ಥಳಿ​ತ?

ಇದೀಗ ರಾಯಚೂರು ಜಿಲ್ಲೆಯ ಸಿಂಧನೂರು ಸಮೀಪ ಮಲ್ಲಿಕಾರ್ಜುನ ಮೃತ ದೇಹ ಪತ್ತೆಯಾಗಿದೆ. ಬಾಲಕನಿಗೆ ಈಜು ಬರುತ್ತೆ ಅನ್ನೋದು ಗೊತ್ತಿದ್ದ ದುಷ್ಕರ್ಮಿಗಳು ಕೈ ಕಾಲು ಕಟ್ಟಿ ಕಾಲುವೆಗೆ ಎಸೆದು ಕೊಲೆ ಮಾಡಿದ್ದಾರೆ. ಬಾಲಕನ ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.