ಭಟ್ಕಳ(ಜ.25):  ಮಹಿಳೆಯೊಬ್ಬಳಿಗೆ ತಲೆ ಮೇಲೆ ಹೊಡೆದಿದ್ದಲ್ಲದೆ ಅವರ ಸೀರೆಯನ್ನೇ ಕೊರಳಿಗೆ ಬಿಗಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ತಾಲೂಕಿನ ಉತ್ತರ ಕೊಪ್ಪದ ಕೊಂಕಣತಿಬೈಲ್‌ನಲ್ಲಿ ಶನಿವಾರ ರಾತ್ರಿ ನಡೆದಿದೆ.

ಉತ್ತರಕೊಪ್ಪದ ಕೊಂಕಣತಿಬೈಲ್‌ ನಿವಾಸಿ ಲಕ್ಷ್ಮೀ ಕೃಷ್ಣಾ ನಾಯ್ಕ(45) ಎಂಬುವರೇ ಕೊಲೆಯಾದ ಮಹಿಳೆಯಾಗಿದ್ದಾರೆ. ಶನಿವಾರ ರಾತ್ರಿ ಅವರು ಮನೆಯಲ್ಲಿ ಒಬ್ಬಳೇ ಇರುವಾಗ ಕೊಲೆ ನಡೆದಿದೆ. ಮಹಿಳೆಯ ಕೈಗೆ ಸುಟ್ಟಗಾಯವಾಗಿದ್ದು, ತಲೆಯ ಹಿಂಭಾಗಕ್ಕೆ ಮಾರಕಾಯುಧದಿಂದ ಬಲವಾಗಿ ಹೊಡೆದಿರುವುದು ಮತ್ತು ಕುತ್ತಿಗೆಗೆ ಬಿಗಿದಿರುವುದು ಕಂಡುಬಂದಿದೆ. ಇವರಿಗೂ ಮತ್ತು ಕೆಲವರಿಗೆ ಇತ್ತೀಚೆಗೆ ದಾರಿಯಲ್ಲಿ ಮರದ ಕೊಂಬೆ ಬಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಆಗಿದೆ ಎನ್ನಲಾಗಿದ್ದು, ಕೊಲೆಗೆ ಈ ಘಟನೆ ಕಾರಣವೇ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. 

ಬೆಳಗಾವಿ: ಆಸ್ತಿ ವಿವಾದಕ್ಕೆ ಏನೂ ಅರಿಯದ ನಾಲ್ಕು ವರ್ಷದ ಬಾಲಕ ಬಲಿ

ಕೊಲೆಗೀಡಾದ ಮಹಿಳೆಯ ಪುತ್ರ ಗಣಪತಿ ನಾಯ್ಕ ಮುರ್ಡೇಶ್ವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಸಿಪಿಐ ದಿವಾಕರ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮುರ್ಡೇಶ್ವರ ಠಾಣೆಯ ಪಿಎಸ್‌ಐ ರವೀಂದ್ರ ಬಿರಾದಾರ ತನಿಖೆ ನಡೆಸುತ್ತಿದ್ದಾರೆ.