ಬೆಂಗಳೂರು (ನ. 12)   ಮಾಜಿ ಗೆಳೆಯನ ಜತೆ ಇದ್ದ ಪೋಟೋ ಬೇಕಾದ ಹಾಗೆ ತಿರುಚಿ ಬ್ಲಾಕ್ ಮೇಲ್ ಮಾಡಿ  ಒಂದು ಕೋಟಿ ರೂ.  ವಂಚಿಸಲಾಗಿದೆ ಎಂದು ದಂಪತಿ ಪೊಲೀಸ್ ಮೊರೆ  ಹೋಗಿದ್ದಾರೆ.

ಶಾಲಿನಿ( ಹೆಸರು ಬದಲಾಯಿಸಲಾಗಿದೆ)ಸುಮಾರು 11 ವರ್ಷಗಳ ಹಿಂದೆ ಬೆಂಗಳೂರು ಮೂಲದ ಉದ್ಯಮಿ  ಮದುವೆಯಾಗಿದ್ದರು.  ಪತಿಯೊಂದಿಗೆ  ಬೆಂಗಳೂರಿನಲ್ಲಿ ಸೂಪರ್ಮಾರ್ಕೆಟ್ ನಡೆಸುತ್ತಿದ್ದಾರೆ. ದಂಪತಿಗೆ ಎಂಟು ವರ್ಷದ ಮಗು ಇದೆ.

ಬೆಂಗಳೂರು ಮೂಲದ ಉದ್ಯಮಿ ಯನ್ನು ಮದುವೆಯಾಗುವ ಮೊದಲು ಶಾಲಿನಿ ತನ್ನ ಕಾಲೇಜು ದಿನಗಳಲ್ಲಿ ಮಹೇಶ್ (ಹೆಸರು ಬದಲಿಸಲಾಗಿದೆ) ಜತೆ ಪ್ರೀತಿಯಲ್ಲಿದ್ದರು.  ಇತ್ತ ಶಾಲಿನಿಗೆ ಮದುವೆಯಾದ ಮೇಲೆ ಇಬ್ಬರ ನಡುವೆ ಲಿಂಕ್  ತಪ್ಪಿದೆ. ಕಳೆದ ವರ್ಷ ಜುಲೈನಲ್ಲಿ, ಮಹೇಶ್ ವಾಟ್ಸಾಪ್ನಲ್ಲಿ ಶಾಲಿನಿಗೆ ಸಂದೇಶ ಕಳಿಸಿದ್ದಾನೆ. ಅದರ ನಂತರ ಇಬ್ಬರೂ ಭೇಟಿ ಮಾಡಿದ್ದಾರೆ.  ಇದಾದ ಸರಿಯಾಗಿ ಎರಡು ದಿನಕ್ಕೆ  ಅನುಶ್ರೀ ಎಂದು ಪರಿಚಯಿಸಿಕೊಂಡ ಮಹಿಳೆ ನಾನು ಮಹೇಶ್ ಗೆಳತಿ ಎಂದಿದ್ದಾಳೆ. ಮೂವರ ನಡುವೆ ಸ್ನೇಹ ಬೆಳೆದಿದೆ.

ಶಿವಮೊಗ್ಗ; ಮಾವನೊಂದಿಗೆ ಮಂಚ ಏರಿದ್ದಳು..  ಕಾಮದಾಟ ಕಣ್ಣಾರೆ ಕಂಡ ಗಂಡ!

ಗೆಳೆತನದಲ್ಲಿಯೇ ಅನುಶ್ರೀ ನಿನ್ನ ಕೆಲ ಪೋಟೋ ಕಳಿಸಿಕೊಡು ಎಂದು ಶಾಲಿನಿ ಬಳಿ ಹೇಳಿದಾಗ ಆಕೆ ನಿರಾಕರಿಸಿದ್ದಾಳೆ.  ಇಲ್ಲಿಂದ ಬ್ಲಾಕ್ ಮೇಲ್ ಶುರುವಾಗಿದೆ. ಮಹೇಶ್ ನೊಂದಿಗೆ ನೀನು ಕಳೆದ ಖಾಸಗಿ ಕ್ಷಣಗಳ ಪೋಟೋ ಮತ್ತು ವಿಡಿಯೋ ನನ್ನ ಬಳಿ ಇದ್ದು ಸೋಶಿಯಲ್ ಮೀಡಿಯಾಕ್ಕೆ ಹಾಕಬಾರದು ಎಂದಾದರೆ ಹಣ ಕೊಡು ಎಂದು ಬೆನ್ನು ಬಿದ್ದಿದ್ದಾಳೆ.

ಕಳೆದ ಒಂದುವರೆ ವರ್ಷದಿಂದಲೂ ಇದು ನಡೆಯುತ್ತಲೇ ಇದ್ದು ಸುಮಾರು  1.3  ಕೋಟಿ ರೂ. ಹಣವನ್ನು ಶಾಲಿನಿ ಅನುಶ್ರೀಗೆ ನೀಡಿದ್ದಾಳೆ.

ಕಳೆದ ತಿಂಗಳು ಅನುಶ್ರೀ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ಶಾಲಿನಿ ಸಾಧ್ಯ ಇಲ್ಲ ಎಂದಿದ್ದಾರೆ.  ಅತ್ತ ಉದ್ಯಮಿ ಪತಿಗೂ ಹಣ ಟ್ರಾನ್ಸ್ ಫರ್ ಆಗಿದ್ದು ಗೊತ್ತಾಗಿದೆ. ಪ್ರಶ್ನೆ ಮಾಡಿದಾಗ ಎಲ್ಲ ವಿಚಾರ ಬಹಿರಂಗವಾಗಿದೆ.  ನಂತರ ದಂಪತಿ ಪೊಲೀಸರ ಮೊರೆ ಹೋಗಿದ್ದಾರೆ.