ಮ್ಯಾನ್ ಹೋಲ್ ಗೆ ಬಿದ್ದು ಗೃಹಿಣಿ ಸಾವು/ ಮತ್ತೊಂದು ಘೋರ ದುರಂತ/ ಮತ್ತೆ ಮತ್ತೆ ಇಂಥದ್ದೆ ಘಟನೆಗಳು/ ಸಮುದ್ರದಲ್ಲಿ ಪತ್ತೆಯಾದ ಶವ

ಮುಂಬೈ(ಅ. 06) ಮ್ಯಾನ್ ಹೋಲ್ ಸಾವುಗಳು ಪ್ರತಿ ಸರಿ ಘಟಿಸಿದಾಗ ಇನ್ನು ಮುಂದೆ ಹೀಗೆ ಆಗುವುದಿಲ್ಲ ಎಂದು ನಮ್ಮಷ್ಟಕ್ಕೆ ನಾವು ಅಂದುಕೊಳ್ಳುತ್ತೇವೆ. ಆದರೆ ದುರಂತಗಳು ಮತ್ತೆ ಮತ್ತೆ ಘಟಿಸುತ್ತಲೇ ಇರುತ್ತವೆ.

ನೀರು ತುಂಬಿದ ರಸ್ತೆಯ ಮ್ಯಾನ್ ಹೋಲ್ ಗೆ ಬಿದ್ದು 35 ವರ್ಷದ ಗೃಹಿಣಿ ಮೃತಪಟ್ಟಿದ್ದು 24 ಗಂಟೆಗೂ ಅಧಿಕ ಕಾಲದ ಮೇಲೆ ಶವ ಪತ್ತೆಯಾಗಿದೆ. ಶನಿವಾರ ಸುರಿದ ಮಳೆಗೆ ನೀರು ತುಂಬಿಕೊಂಡಿದ್ದರ ಪರಿಣಾಮ ಅವಘಡ ಸಂಭವಿಸಿದೆ.

ಬಿಜೆಪಿ ಶಾಸಕನ ಸೊಸೆಯರಿಗೆ ಹೈವೆಯಲ್ಲಿ ಪುಂಡರ ಕಾಟ, ಎಂತೆಂಥಾ ಕಮೆಂಟ್ಸ್!

ಘಟಕೋಪರ್ ಅಸಲ್ಫಾದಲ್ಲಿ ದುರ್ಘಟನೆ ಸಂಭವಿಸಿದೆ. ಸಮುದ್ರದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಮ್ಯಾನ್ ಹೋಲ್ ನಲ್ಲಿ ಬಿದ್ದ ಜಾಗದಿಂದ ಸುಮಾರು 20 ಕಿಮೀ ದೂರದಲ್ಲಿ ಶವ ಪತ್ತೆಯಾಗಿದೆ. 

ಇಬ್ಬರು ಮಕ್ಕಳ ತಾಯಿಯಾಗಿದ್ದ ಶೀತಲ್ ಮನೆಗೆ ಹಿಂದಿರುಗುತ್ತಿದ್ದರು. ತಾನು ಮನೆಗೆ ಬರುತ್ತಿದ್ದೇನೆ ಎಂದು ಕರೆ ಮಾಡಿ ಮಗನಿಗೆ ಹೇಳಿದ್ದರು. ಶೀತಲ್ ಭನ್ಸುಶಾಲಿ ಎಂಬುವರು ದುರ್ಮರಣಕ್ಕೆ ಗುರಿಯಾಗಿದ್ದಾರೆ. 2017 ರಲ್ಲಿಯೂ ದೀಪಕ್ ಅಮರಾಪುರ್ಕರ್ ಎಂಬುವರು ಇದೇ ರೀತಿ ಸಾವನ್ನಪ್ಪಿದ್ದರು.