ಗಾಜಿಯಾಬಾದ್ (ಅ. 06) ಉತ್ರರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ 19 ವರ್ಷದ ಯುವತಿ ಮೇಲೆ ನಡೆದ ಗ್ಯಾಂಗ್ ರೇಪ್ ಇಡೀ ದೇಶದಲ್ಲಿ ಪ್ರತಿಟನೆಯ ಜ್ವಾಲೆ ಹಬ್ಬಿಸಿದೆ. ಆದರೆ ಮತ್ತೆ ಮತ್ತೆ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಅಲ್ಲಿಂದಲೇ ವರದಿಯಾಗುತ್ತಿವೆ.

ಆಘಾತಕಾರಿ ಘಟನೆಯೊಂದರಲ್ಲಿ, ಮೂವರು ಎಂಎನ್‌ಸಿ ಉದ್ಯೋಗಿಗಳು ಇಬ್ಬರು ಸಹೋದರಿಯರನ್ನು  ಹೈವೆಯಲ್ಲಿ ಮೀರತ್‌ನಿಂದ ಎನ್‌ಎಚ್ -34 ಮೂಲಕ ನೋಯ್ಡಾಕ್ಕೆ ಹಿಂದಿರುಗುತ್ತಿದದ್ದ ಯುವತಿಯರನ್ನು ಎರಡು ಗಂಟೆ ಕಾಲ ಫಾಲೋ ಮಾಡಿದ್ದು ಅಲ್ಲದೇ ಅಶ್ಲೀಲ ಕಮೆಂಟ್ ಗಳನ್ನು  ಮಾಡುತ್ತಲೇ ಬಂದಿದ್ದಾರೆ.

50  ವರ್ಷದ ಅತ್ತೆಯನ್ನೇ ರೇಪ್ ಮಾಡಿದ ಕಾಮಾಂಧ ಅಳಿಯ

ಮೂವರು ಆರೋಪಿಗಳಲ್ಲಿ ಇಬ್ಬರು ಎಂಜಿನಿಯರ್‌ಗಳು ಮತ್ತು ಗುರುಗ್ರಾಮ್‌ನ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯ ಉದ್ಯೋಗಿಯೊಬ್ಬರು ಸೇರಿದ್ದಾರೆ. ಹಿಂಬಾಲಿಸಿದ ಆರೋಪದ ಮೇಲೆ ಗಾಜಿಯಾಬಾದ್‌ನ ಸಿಹಾನಿ ಗೇಟ್ ಬಳಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಮೀರತ್‌ನಲ್ಲಿ ಹೆದ್ದಾರಿಯಲ್ಲಿ ಆರೋಪಿಗಳು ಇಬ್ಬರು ಸಹೋದರಿಯರನ್ನು ಸುಮಾರು 46 ಕಿ.ಮೀ. ಹಿಂಬಾಲಿಸಿದ್ದಾರೆ. ಮೀರತ್‌ನಲ್ಲಿರುವ ತಮ್ಮ ಅಜ್ಜಿ ಮನೆಗೆ ಭೇಟಿ ನೀಡಿದ ನಂತರ ಬಿಜೆಪಿ ಶಾಸಕರೊಬ್ಬರ ಸೊಸೆಯಂದಿರು ಎಂದು ಹೇಳಲಾದ ಇಬ್ಬರು ಯುವತಿಯರು ನೋಯ್ಡಾದ ತಮ್ಮ ಮನೆಗೆ ಮರಳುತ್ತಿದ್ದರು.  ಯುವತಿಯರ ಜಕತೆಗೆ ಭದ್ರತಾ ಅಧಿಕಾರಿ ಇದ್ದರೂ ಪುಂಡಾಟ ಮೆರೆದಿದ್ದಾರೆ.

ಮೂವರು ಆರೋಪಿಗಳನ್ನು ರಾಜಸ್ಥಾನ ಮೂಲದ ರೊಮಿಲ್, ಗಾಜಿಯಾಬಾದ್ ನಿವಾಸಿ ರಜತ್ ರಾಣಾ ಮತ್ತು ಗುರುಗ್ರಾಮ್ನಲ್ಲಿ ವಾಸಿಸುವ ಶುಭಮ್ ಪಾಂಡೆ ಎಂದು ಗುರುತಿಸಲಾಗಿದೆ.

ರೊಮಿಲ್ ಮತ್ತು ರಾಣಾ ಎಂಜಿನಿಯರ್ ಆಗಿ, ನೋಯ್ಡಾ ಮೂಲದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಶುಭಮ್ ಗುರುಗ್ರಾಮಲ್ಲಿ ಮೊಬೈಲ್  ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾರೆ.

ಹುಡುಗಿಯರನ್ನು ಕಂಡ ತಕಲ್ಷಣ ಅಶ್ಲೀಲ ಕಮೆಂಟ್ ಮಾಡುತ್ತ  ಯುವತಿಯರಿದ್ದ ವಾಹನ ಓವರ್ ಟೇಕ್ ಮಾಡಲು ಯತ್ನಿಸಿದ್ದಾರೆ. ಮುರಾದ್ ನಗರ್ ತಲುಪಿದಾಗ ಯುವತಿಯರ ಪೋಟೋ ಮಮತ್ತು ವಿಡಿಐಒ ತೆಗೆದುಕೊಳ್ಳುವ ಯತ್ನ ಮಾಡಿದ್ದಾರೆ.  ಭದ್ರತಾ ಅಧಿಕಾರಿ ಟ್ರಾಫಿಕ್ ಪೊಲೀಸರಿಗೆ ಪುಂಡಾಟದ ಮಾಹಿತಿ ನೀಡಿದ್ದಾರೆ. ಎಸ್‌ಯುವಿಯಲ್ಲಿ ಬರುತ್ತಿದ್ದ ಯುವಕರು ಅಶ್ಲೀಲ ಸನ್ನೆ ಮಾಡುತ್ತಲೇ ಬಂದಿದ್ದಾರೆ.