ಆಗ್ರಾ(ಆ. 20) ಎಸ್‌ಎನ್ ಮೆಡಿಕಲ್ ಕಾಲೇಜಿನ ಸ್ತ್ರೀರೋಗ ತಜ್ಞ ವಿಭಾಗದ  25  ವರ್ಷದ ವೈದ್ಯ ವಿದ್ಯಾರ್ಥಿನಿ ದಾರುಣವಾಗಿ ಕೊಲೆಯಾಗಿದ್ದಾರೆ.  ಮೆಡಿಕಲ್ ಕಾಲೇಜಿನಿಂದ ಸ್ವಲ್ಪ ದೂರದಲ್ಲಿ ಯೋಗಿತಾ ಗೌತಮ್ ಶವ ಪತ್ತೆಯಾಗಿದೆ.

ಬುಧವಾರ ವೈದ್ಯೆ ನಾಪತ್ತೆಯಾಗಿದ್ದಾರೆ ಎಂದು ಹೇಳಿ ಕೆಲವೇ ಗಂಟೆ ಅಂತರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.  ಆಕೆಯನ್ನು ಅಪಹರಣ ಮಾಡಿ ಕೊಲೆ ಮಾಡಲಾಗಿದೆ ಎಂದು ವೈದ್ಯೆ ಕುಟುಂಬದವರು ದೂರು ದಾಖಲಿಸಿದ್ದಾರೆ.

ಸಲ್ಮಾನ್ ಖಾನ್ ಹತ್ಯೆಗೆ ಮಾಡಿದ್ದ ಸಂಚು ಬಟಾಬಯಲು

ಮೋರಾದಾಬಾದ್ ನ ಖಾಸಗಿ ಕಾಲೇಜಿನಲ್ಲಿ ಎಂಬಿಬಿಎಸ್ ಅಧ್ಯಯನ ಮಾಡಿದ್ದ ಯೋಗಿತಾಗೆ ಕಾನ್ಪುರದ ನಿವಾಸಿ, ಮೆಡಿಕಲ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ ವೀವೆಕ್ ತಿವಾರಿ ಮದುವೆಯಾಗುವಂತೆ ಪೀಡಿಸುತ್ತಿದ್ದ ಎಂದು ಆರೋಪಿಸಿದ್ದಾರೆ. ಇತ್ತ ಕಡೆ ತಿವಾರಿ ತನಗೆ ಕುಟುಂಬದವರೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು.

ತಿವಾರಿ ಮೇಲೆ ಎಫ್ ಐಆರ್ ದಾಖಲಾಗಿದ್ದು ಅವರನ್ನು ಬಂಧಿಸಲಾಗಿದೆ.  ಆಗ್ರಾದ ರಾಜಮಂಡಿಯಲ್ಲಿ ಬಾಡಿಗೆ ಮನೆ ಪಡೆದು ಯೋಗಿತಾ ವಾಸ ಮಾಡುತ್ತಿದ್ದರು. 

ಬೆದರಿಕೆ ಕರೆ ಕಾರಣಕ್ಕೆ ಯೋಗಿತಾ ಅವರನ್ನು ವಾಪಸ್ ಮನೆಗೆ ಕರೆದುಕೊಂಡು ಹೋಗಲು ಕುಟುಂಬ ಬಂದಿತ್ತು. ಆದರೆ ಕೊಲೆ ಸುದ್ದಿ ಕೇಳಬೇಕಾಗಿ ಬಂದಿದೆ. ತಲೆ ಮೇಲೆ ಗಂಭೀರ ಗಾಯಗಳಾಗಿರುವ ಸ್ಥಿತಿಯಲ್ಲಿ ಯೋಗಿತಾ ಶವ ಪತ್ತೆಯಾಗಿದೆ.

ವಿದ್ಯಾರ್ಥಿನಿ ಯೋಗಿತಾ ಗೌತಮ್ ದೆಹಲಿಯ ಶಿವಪುರಿಯ ನಿವಾಸಿಯಾಗಿದ್ದು, ಆಗ್ರಾದಲ್ಲಿ ವಾಸವಾಗಿದ್ದರು. ಯುವತಿಯ ದೇಹದ ಮೇಲೆ ಗಾಯದ ಗುರುತುಗಳು ಕಂಡು ಬಂದಿದ್ದು, ಕೊಲೆ ಎಂದು ಶಂಕಿಸಲಾಗಿದೆ.