ಯುವತಿಯೊಬ್ಬಳು ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯಲ್ಲಿ ಗಂಡ ಪ್ರಭಿನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ವರದಕ್ಷಿಣೆ ಕೇಳಿಲ್ಲ ಅಥವಾ ಪಡೆದಿಲ್ಲ ಎಂದು ಪ್ರಭಿನ್ ಕುಟುಂಬ ಹೇಳಿದೆ.
ತಿರುವನಂತಪುರ: ಕೇರಳದ ಮಲಪ್ಪುರಂನಲ್ಲಿ ಮಹಿಳೆಯೊಬ್ಬಳು ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯಲ್ಲಿ ಗಂಡ ಪ್ರಭಿನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಸಾವಿನ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಂಜೇರಿ ಪೊಲೀಸರು, ಮಹಿಳೆಯ ಗಂಡ ಪ್ರಭಿನ್‌ನನ್ನು ಬಂಧಿಸಿದ್ದಾರೆ. ಗುರುವಾರ ಪೂಕ್ಕೋಟ್ಟುಂಪಾಡಂ ಮೂಲದ ವಿಷ್ಣುಜಾ ಶವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 2023ರ ಮೇ ತಿಂಗಳಲ್ಲಿ ವಿಷ್ಣುಜಾ ಮತ್ತು ಎಳಂಕೂರು ಮೂಲದ ಪ್ರಭಿನ್‌ರ ವಿವಾಹ ನೆರವೇರಿತ್ತು. ಗಂಡನ ಕಿರುಕುಳದಿಂದಲೇ ಮಗಳ ಸಾವು ಆಗಿದೆ ಎಂದು ವಿಷ್ಣುಜಾ ಕುಟುಂಬ ಗಂಭೀರ ಆರೋಪವನ್ನು ಮಾಡಿದೆ. ಆದರೆ ಈ ಆರೋಪವನ್ನು ಪ್ರಭಿನ್ ಕುಟುಂಬ ನಿರಾಕರಿಸಿದೆ. ಪ್ರಭಿನ್ ಮತ್ತು ವಿಷ್ಣುಜಾ ನಡುವೆ ಕೆಲವು ಭಿನ್ನಾಭಿಪ್ರಾಯಗಳಿದ್ದವು. ಇದಕ್ಕೆ ಕಾರಣ ತಿಳಿದಿಲ್ಲ ಎಂದು ಪ್ರಭಿನ್ ಕುಟುಂಬ ಹೇಳಿದೆ. ವರದಕ್ಷಿಣೆ ಕೇಳಿಲ್ಲ ಅಥವಾ ಪಡೆದಿಲ್ಲ ಎಂದು ಪ್ರಭಿನ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಗಂಡನ ಮನೆಯಲ್ಲಿ ಮಗಳಿಗೆ ತೀವ್ರ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು. ಮದುವೆಯಾದ ಕೆಲವು ವಾರಗಳಲ್ಲೇ ಪ್ರಭಿನ್ ಕಿರುಕುಳ ನೀಡಲು ಪ್ರಾರಂಭಿಸಿದ. ಕೆಲಸವಿಲ್ಲದ ಕಾರಣಕ್ಕೆ ಕಿರುಕುಳ ನೀಡಲಾಗುತ್ತಿತ್ತು. ತಂದೆ-ತಾಯಿಗೆ ತೊಂದರೆ ಕೊಡಬಾರದು ಎಂದು ಮಗಳು ಎಲ್ಲವನ್ನೂ ಮುಚ್ಚಿಟ್ಟಳು. ಮಗಳನ್ನು ಬೈಯ್ಯುವ ವಾಯ್ಸ್ ನೋಟ್‌ಗಳು ನನ್ನ ಬಳಿ ಇವೆ. ದೈಹಿಕವಾಗಿಯೂ ಮಗಳಿಗೆ ಕಿರುಕುಳ ನೀಡಲಾಗುತ್ತಿತ್ತು, ಮಗಳ ದೇಹದ ಮೇಲಿನ ಗಾಯಗಳ ಬಗ್ಗೆ ಆಕೆಯ ಗೆಳತಿ ಹೇಳಿದ್ದಳು ಎಂದು ವಿಷ್ಣುಜಾಳ ತಂದೆ ಏಷ್ಯಾನೆಟ್ ನ್ಯೂಸ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಮದುವೆಯಾಗದ ಪುರುಷರೇ ಹುಷಾರ್; ಮದುವೆ ಹೆಸರಿನಲ್ಲಿ ಈ ವಂಚಕರ ಗ್ಯಾಂಗ್ ಬಲೆಗೆ ಬೀಳದಿರಿ!
ಸೌಂದರ್ಯ ಕಡಿಮೆ, ಕೆಲಸವಿಲ್ಲ, ವರದಕ್ಷಿಣೆ ಕಡಿಮೆ ಎಂದು ಹೇಳಿ ವಿಷ್ಣುಜಾಳಿಗೆ ಗಂಡ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬ ಆರೋಪಿಸಿದೆ. ಇದಕ್ಕೆಲ್ಲ ಗಂಡನ ಸಂಬಂಧಿಕರು ಸಹಕರಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಗಂಡ ಮತ್ತು ಆತನ ಕುಟುಂಬದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯುವತಿಯ ಕುಟುಂಬ ಒತ್ತಾಯಿಸಿತ್ತು. ಇದರ ಬೆನ್ನಲ್ಲೇ ಮಂಜೇರಿ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಪತಿಯ ಕಿಡ್ನಿ ಮಾರಿ, ಲವರ್ ಜೊತೆ ಪರಾರಿಯಾದ ಕಿರಾತಕಿ! ಮಗಳ ಹೆಸರಲ್ಲಿ ಗಂಡನ ಬಲಿ...

