ಪ್ರಕರಣವನ್ನು ದಾಖಲಿಸಿಕೊಂಡಿರುವ ಎಪಿಎಂಸಿ ಠಾಣೆಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಕೊಲೆಯೋ ಆತ್ಮಹತ್ಯೆಯೋ ಎಂಬುದು ಗೊತ್ತಾಗಲಿದೆ.

ಹುಬ್ಬಳ್ಳಿ(ಆ.13): ಗಾರ್ಮೆಂಟ್‌ನಲ್ಲೇ ಅದರ ಮಾಲೀಕರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನವನಗರದಲ್ಲಿ ನಡೆದಿದೆ. ಇದನ್ನು ಪೂರ್ವನಿಯೋಜಿತ ಕೊಲೆ ಎಂದು ಮೃತಳ ತವರು ಮನೆಯವರು ಆರೋಪಿಸಿದ್ದಾರೆ. ಪ್ರಿಯಾ ಬೊಂಗಾಳೆ ಮೃತಪಟ್ಟ ಮಹಿಳೆ. 

ಗಾರ್ಮೆಂಟ್ಸ್‌ ನಡೆಸುತ್ತಿದ್ದ ಇವರ ಶವ ಗಾರ್ಮೆಂಟ್‌ ಅಂಗಡಿಯಲ್ಲೇ ಪತ್ತೆಯಾಗಿದೆ. ಈಕೆಯ ಸಾವಿನ ಬಗ್ಗೆ ಅನುಮಾನ ಉಂಟಾಗಿದ್ದು, ಈಕೆಯನ್ನು ಗಂಡನ ಮನೆಯವರು ಕೊಲೆ ಮಾಡಿದ್ದಾರೆ. ಇದು ಆತ್ಮಹತ್ಯೆಯಲ್ಲಾ ಇದು ಪ್ರಿ ಪ್ಲಾನ್‌ ಮರ್ಡರ್‌. ಪ್ರಿಯಾ ಗಂಡ ವಿನೋದ್‌ನಿಂದ ಸಾಕಷ್ಟು ಕಿರುಕುಳಕ್ಕೆ ಒಳಗಾಗಿದ್ದರು. ವಿನೋದ್‌ ಹಾಗೂ ಪ್ರಿಯಾ ಅವರ ಸಂಬಂಧ ಡೈವೋರ್ಸ್‌ ಮಟ್ಟಕ್ಕೆ ಹೋಗಿತ್ತು ಎಂದು ಪ್ರಿಯಾಳ ಸಹೋದರ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ.

ಬೇಡವೆಂದು ಬೇಡಿಕೊಂಡರೂ ಬಿಡದೇ ಹೆತ್ತ ಮಕ್ಕಳನ್ನೇ ಬಾವಿಗೆ ತಳ್ಳಿದ ತಾಯಿ, ತಾನೂ ಹಾರಿ ಸಾವು

ಪ್ರಕರಣವನ್ನು ದಾಖಲಿಸಿಕೊಂಡಿರುವ ಎಪಿಎಂಸಿ ಠಾಣೆಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಕೊಲೆಯೋ ಆತ್ಮಹತ್ಯೆಯೋ ಎಂಬುದು ಗೊತ್ತಾಗಲಿದೆ.