* ಬೆಂಗಳೂರಿನಲ್ಲಿ ಮಹಿಳೆಯ ಸುಟ್ಟು ಮೃತದೇಹ ಪತ್ತೆ* ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ.* ಸಾಕಷ್ಟು ಅನುಮಾನ ಮೂಡಿಸಿದ ಮಹಿಳೆ ಕೊಲೆ
ಬೆಂಗಳೂರು, (ಜುಲೈ.03) : ಮಹಿಳೆಯೊಬ್ಬಳ ದೇಹ ಸಂಪೂರ್ಣವಾಗಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕೆಂಗೇರಿ ರಾಮಸಂದ್ರದಲ್ಲಿ ನಡೆದಿದೆ..ಮಹಿಳೆ ಕೊಲೆ ಸಾಕಷ್ಟು ಅನುಮಾನ ಮೂಡಿಸಿದೆ.ಸದ್ಯ ಕೊಲೆಯಾದ ಯಾರು ಅನ್ನೋದು ಗೊತ್ತಾಗ್ತಿಲ್ಲ.ಕೊಲೆ ಮಾಡಿದವರ್ಯಾರು ಅಂತಾನು ಗೊತ್ತಾಗ್ತಿಲ್ಲ.ಆದ್ರೆ ಕೊಲೆ ಮಾಡಿ ನಂತರ ಬೆಂಕಿ ಹಚ್ಚಿರೋದು ಸ್ಪಷ್ಟವಾಗ್ತಿದೆ.ಈ ಹತ್ಯೆಗೂ ಮೊದಲು ಅತ್ಯಾಚಾರ ಏನಾದ್ರೂ ನಡೆದಿದ್ಯಾ ಅನ್ನೋ ಶಂಕೆ ಇದ್ದು ಖಾಕಿ ತನಿಖೆಗೆ ಇಳಿದಿದ್ದಾರೆ.
ಅಷ್ಟಕ್ಕೂ ಆಗಿರೋದೇನಂದ್ರೆ ಇವತ್ತು ಬೆಳಗ್ಗೆ ಸ್ಥಳೀಯರೊಬ್ಬರು ಪೊಲೀಸ್ ಠಾಣೆಗೆ ಕರೆ ಮಾಡಿದ್ರು.ಒಂದು ಮೃತದೇಹ ಸುಟ್ಟ ಸ್ಥಿತಿಯಲ್ಲಿ ರಾಮಸಂದ್ರ ನೈಸ್ ರಸ್ತೆ ಪಕ್ಕದಲ್ಲಿ ಬಿದ್ದಿದೆ ಅಂತಾ ಹೇಳಿದ್ರು.ತಕ್ಷಣ ಸ್ಥಳಕ್ಕೆ ಬಂದ ಕೆಂಗೇರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಈ ವೇಳೆ ಅಲ್ಲಿ ಹೆಣವಾಗಿದ್ದು 25 ರಿಂದ 30 ವರ್ಷದ ಮಹಿಳೆ ಅನ್ನೋದು ಗೊತ್ತಾಗಿದೆ.24 ಗಂಟೆಗೂ ಮೊದಲು ಬೆಂಕಿ ಹಚ್ಚಿರೊ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.ಮೃತದೇಹ ಪತ್ತೆಯಾದ ಜಾಗದಲ್ಲಿ ಸಿಕ್ಕ ಮದ್ಯದ ಬಾಟಲಿಗಳು,ಚಪ್ಪಲಿಗಳನ್ನೆಲ್ಲ ವಶಕ್ಕೆ ಪಡೆದಿರುವ ಕೆಂಗೇರಿ ಪೊಲೀಸರು ತನಿಖೆ ನಡೆಸ್ತಿದ್ದಾರೆ .
ಡಾ.ಶರಣಪ್ಪ,ಡಿಸಿಪಿ,ಪಶ್ಚಿಮ ವಿಭಾಗ ಪ್ರಭಾರ
ಇನ್ನೂ ಮೃತದೇಹ ಸಿಕ್ಕ 50 ಮೀಟರ್ ದೂರದಲ್ಲಿ ಒಂದು ನಿರ್ಮಾಣ ಹಂತದ ಪಾಳು ಕಟ್ಟಡ ಇದ್ದು,ಅಲ್ಲಿಯೂ ಸುಟ್ಟ ಕುರುಹುಗಳು ಇದ್ದು ಇಲ್ಲಿ ಬೆಂಕಿ ಹಚ್ಚಿ ನಂತರ ಮರದ ಕೆಳಗೆ ಸುಟ್ಟಾಕಿರೊ ಅನುಮಾನ ಇದೆ.ಇದೇ ಜಾಗಕ್ಕೆ ಬಂದಿದ್ದ ಪೊಲೀಸರು ಪರಿಶೀಲನೆ ನಡೆಸಿದ್ದು,ಒಂದಷ್ಟು ಸಾಕ್ಷ್ಯ ಕಲೆ ಹಾಕಿದ್ದಾರೆ.ಅಷ್ಟೇ ಅಲ್ಲ ಬೇರೆ ಕಡೆ ಕೊಲೆ ಮಾಡಿ ಇಲ್ಲಿ ತಂದು ನಿರ್ಜನ ಪ್ರದೇಶದಲ್ಲಿ ಬಿಸಾಡಿಹೋಗಿರುವ ಅನುಮಾನ ಕೂಡ ಇದೆ.ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇಂತಹ ಘನಘೋರ ಘಟನೆ ನಡೆದಿದ್ದು ಸಿಟಿ ಜನ ಬೆಚ್ಚಿ ಬಿದ್ದಿದ್ದಾರೆ. ಪೊಲೀಸರು ರಾಜ್ಯದಾದ್ಯಂತ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ,ಕಾಣೆಯಾದ ಯುವತಿ ಅಥವಾ ಮಹಿಳೆ ಸಂಬಂಧ ದೂರು ದಾಖಲಾಗಿದ್ರೆ ಮಾಹಿತಿ ಕೊಡುವಂತೆ ಕೇಳಿಕೊಂಡಿದ್ದಾರೆ.ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ .
