ಪಟಿಯಾಲ(ನ.  08)  ಎಟಿಎಂ ಕಾರ್ಡ್ ಕೊಡಲು ನಿರಾಕರಿಸಿದ ಪತ್ನಿ ಮೇಲೆ ಗಂಡ ಸೇರಿ ಮೂವರು ಹಲ್ಲೆ ಮಾಡಿದ್ದಾರೆ.  ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಮಹಿಳೆ ಮೇಲೆ ಹಲ್ಲೆಯಾಗಿದೆ.

ಸದರ್ ನಾಭಾ  ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸ್ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದಾರೆ. ಹಲ್ಲೆ ಮಾಡಿದ ಪತಿಯನ್ನು ದಿಲ್ಬರ್ ಖಾನ್ ಎಂದು ಗುರುತಿಸಲಾಗಿದೆ. ಖಾನ್ ಪಟಿಯಾಲದ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾನೆ. ಖಾನ್ ಮತ್ತು ಅವರ ಪತ್ನಿ ಮದುವೆಯಾಗಿ ಎಂಟು ವರ್ಷಗಳಾಗಿವೆ. ಪ್ರಕರಣ ಬೆಳಕಿಗೆ ಬಂದ ನಂತರ ಆತನ ಸಹಚರರ ಮೇಲೂ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಎಟಿಎಂನಿಂದ ಇದಕ್ಕಿಂತ ಹೆಚ್ಚು ಸಾರಿ ಹಣ ತೆಗೆದರೆ ಶುಲ್ಕ ಕಟ್ಟಬೇಕು

ಮಾಡಿಕೊಂಡಿದ್ದ ಅನವಶ್ಯಕ ಸಾಲ ತೀರಿಸಲು ಪತ್ನಿಯ ಬಳಿ ಖಾನ್ ಎಟಿಎಂ ಕಾರ್ಡ್ ಕೇಳಿದ್ದಾನೆ.  ತಾನು ಕೊಡುವುದಿಲ್ಲ ಎಂದಾಗ ಗಂಡ-ಹೆಂಡತಿ ನಡುವೆ ವಾಗ್ವಾದ ಶುರುವಾಗಿದೆ. ವಿಕೋಪಕ್ಕೆ ಹೋದಾಗ ಗಂಡ ಪತ್ನಿಯನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾನೆ.

ಇಷ್ಟರಲ್ಲಿಯೇ ಸ್ಥಳಕ್ಕೆ ಆಗಮಿಸಿದ ಖಾನ್ ಸಹಚರರು ಮಹಿಳೆ ತಲೆಗೆ ಹೊಡೆದಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ  ನೀಡಲಾಗಿದೆ.