ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳೆ| ಬೆಂಗಳೂರಿನ ವರ್ತೂರು ಠಾಣಾ ವ್ಯಾಪ್ತಿ​ಯಲ್ಲಿ ನಡೆದ ಘಟನೆ| ಮಹಿಳೆಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಪತಿ ಮನೆಯವರು| ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀ​ಸರು| 

ಬೆಂಗಳೂರು(ಫೆ.01): ವರ​ದಕ್ಷಿಣೆ ಕಿರು​ಕುಳ ಹಿನ್ನೆ​ಲೆ​ಯಲ್ಲಿ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರ್ತೂರು ಠಾಣಾ ವ್ಯಾಪ್ತಿ​ಯಲ್ಲಿ ನಡೆ​ದಿ​ದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವರ್ತೂರು ನಿವಾಸಿ ಉಷಾ(26) ಆತ್ಮಹತ್ಯೆಗೆ ಶರಣಾದ ಮಹಿಳೆ. ಐದು ವರ್ಷಗಳ ಹಿಂದೆ ಉಷಾ ರಂಜಿತ್‌ನನ್ನು ವಿವಾಹವಾಗಿದ್ದರು. ದಂಪತಿಗೆ ಒಂದು ಮಗುವಿದೆ. ಶನಿವಾರ ರಾತ್ರಿ ಉಷಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದನ್ನು ಗಮನಿಸಿದ ಪತಿ ರಂಜಿತ್‌ಆಕೆಯ ಪಾಲಕರಿಗೆ ವಿಷಯ ತಿಳಿಸಿದ್ದಾರೆ. 

ಮದುವೆಗೆ ವಿರೋಧ: ನೇಣಿಗೆ ಕೊರಳೊಡ್ಡಿದ ಯುವ ಪ್ರೇಮಿಗಳು

ಈ ಸಂಬಂಧ ಪತಿ ರಂಜಿತ್‌ಹಾಗೂ ಆತನ ಮನೆಯವರು ಉಷಾಳಿಗೆ ವರದಕ್ಷಿಣೆ ತರುವಂತೆ ಕಿರುಕುಳ ಕೊಡುತ್ತಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀ​ಸರು ಹೇಳಿ​ದ​ರು.