ಶಹಾಪೂರ(ಜ.20):  ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಡಗೇರಾ ತಾಲೂಕಿನ ಗುಂಡಗುರ್ತಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಶರಣಬಸವ(23), ಮತ್ತು ಶೇಖಮ್ಮ(18) ಆತ್ಮಹತ್ಯೆಗೆ ಶರಣಾದವರು.

ಗುಂಡಗುರ್ತಿ ಗ್ರಾಮದ ಶರಣಬಸವ ಮತ್ತು ಶೇಖಮ್ಮ ಕಳೆದರಡು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಶರಣಬಸವ ಸಂಕ್ರಾಂತಿ ಹಬ್ಬಕ್ಕೆಂದು ಗ್ರಾಮಕ್ಕೆ ಬಂದಿದ್ದ. ಮದುವೆಗೆ ಎರಡೂ ಮನೆಯವರು ವಿರೋಧ ವ್ಯಕ್ತಪಡಿಸಿದ್ದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. 

ಕೈ ಕೊಟ್ಟ ಪ್ರಿಯಕರ : ಡೆತ್ ನೋಟ್ ಬರೆದಿಟ್ಟು ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಶರಣು

ಘಟನಾ ಸ್ಥಳಕ್ಕೆ ಯಾದಗಿರಿ ಎಸ್‌ಪಿ ಋಷಿಕೇಶ್‌ ಭಾಗವಾನ್‌ ಸೋನವಣೆ, ಡಿವೈಎಸ್‌ಪಿ ವೆಂಕಟೇಶ್‌ ಹೊಗಿಬಂಡಿ, ಶಹಾಪೂರ ಇನ್ಸ್‌ಪೆಕ್ಟರ್‌ ಚೆನ್ನಯ್ಯ ಹಿರೇಮಠ ಭೇಟಿ ನೀಡಿ ಪರಿಶೀಲನಡ ನಡೆಸಿದ್ದಾರೆ.  ಇಬ್ಬರ ಶವಗಳನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ. ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ. ಈ ಸಂಬಂಧ ಶಹಾಪೂರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.