Crime News: ಗಂಡನ ಕಿರುಕುಳದಿಂದ ಬೇಸತ್ತು ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಚೆಕ್‌ಡ್ಯಾಂಗೆ ಬಿದ್ದು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಹೊಸದುರ್ಗದಲ್ಲಿ ನಡೆದಿದೆ

ಹೊಸದುರ್ಗ (ನ. 01): ಗಂಡನ ಕಿರುಕುಳದಿಂದ ಬೇಸತ್ತು ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಚೆಕ್‌ಡ್ಯಾಂಗೆ ಬಿದ್ದು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ. ಹೊಸದುರ್ಗ (Hosadurga) ತಾಲೂಕಿನ ಕೊಂಡಜ್ಜಿ ಲಂಬಾಣಿಹಟ್ಟಿ ಗ್ರಾಮದ ಅರ್ಪಿತಾ (27) ಮಕ್ಕಳಾದ ಮಾನಸ (7) ಮದನ್‌ (4) ಮೃತಪಟ್ಟವರು. ಮೂಲತಃ ಜಾನಕಲ್‌ ಸೇವಾನಗರದ ನಿವಾಸಿಯಾದ ಅರ್ಪಿತಾಳನ್ನು ತಂದೆಯ ಸಂಬಂಧಿಕ ಕೊಂಡಜ್ಜಿ ಲಂಬಾಣಿಹಟ್ಟಿ ಗ್ರಾಮದ ಮಂಜಾನಾಯ್ಕ ಎನ್ನುವವರಿಗೆ 8 ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಈಕೆ ಗಂಡನ ಕಿರುಕುಳದಿಂದ ನೊಂದು ತಾಲೂಕಿನ ಮಳಲಿ- ಪೀಲಾಪುರ ಪೆಟ್ರೋಲ್‌ ಬಂಕ್‌ ಹಿಂಭಾಗದ ಚೆಕ್‌ಡ್ಯಾಂಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಕಳೆದ ಎರಡು ವರ್ಷಗಳಿಂದ ಮಂಜಾನಾಯ್ಕನು ನನ್ನ ಮಗಳಾದ ಅರ್ಪಿತಾಳೊಂದಿಗೆ ಜಗಳ ಮಾಡುತ್ತಿದ್ದನು. ಸಂಬಂಧಿಕರು ಹಾಗೂ ಮುಖಂಡರ ಸಮಕ್ಷಮದಲ್ಲಿ ರಾಜಿ ಮಾಡಿಸಿದ್ದೆವು ಎಂದು ಮೃತಳ ತಾಯಿ ವಿನೋಧಬಾಯಿ ದೂರು ನೀಡಿದ್ದಾರೆ.

ವಿಡಿಯೋ ಮಾಡಿ ಆತ್ಮಹತ್ಯೆ: ನಾನು ನನ್ನ ಮಕ್ಕಳೊಂದಿಗೆ ಸಾಯುತ್ತೇನೆ. ಆಗ ನಿನಗೆ ಹೇಳುವವರು ಕೇಳುವವರು ಇರುವುದಿಲ್ಲ. ನಿನ್ನಷ್ಟದಂತೆ ಇರಬಹುದು. ಪ್ರತಿನಿತ್ಯ ಕುಡಿದು ಬಂದು ಜಗಳವಾಡುತ್ತಿದ್ದೆ. ನನಗೆ ಯಾರ ಜೊತೆಯೂ ಸ್ನೇಹ, ಸಹವಾಸ ಇಲ್ಲ. ನನ್ನ ಮೇಲೆ ಅನುಮಾನ ಪಡುತ್ತಿದ್ದೆ. ನನಗೆ ನಿನೇ ಎಲ್ಲಾ, ನನ್ನಷ್ಟುನಿನ್ನನ್ನುಪ್ರೀತಿ ಮಾಡುವವರು ಮತ್ಯಾರು ಸಿಗುವುದಿಲ್ಲ. ನಿನ್ನನ್ನು ಬಿಟ್ಟು ದೂರು ಹೋಗುತ್ತಿದ್ದೇನೆ ಎಂದು ಮೃತ ಮಹಿಳೆ ಅರ್ಪಿತಾ ವಿಡಿಯೋ ಮಾಡಿ ಇಬ್ಬರು ಮಕ್ಕಳೊಂದಿಗೆ ಆತ್ಮಹತೆಗೆ ಶರಣಾಗಿದ್ದಾಳೆ.

ಇದನ್ನೂ ಓದಿರಾಮನಗರ: ಕೌಟುಂಬಿಕ ಕಲಹ, ಕೆರೆಗೆ ಹಾರಿ ಗೃಹಿಣಿ ಆತ್ಮಹತ್ಯೆ

ಈ ವಿಡಿಯೋವನ್ನು (Video) ತನ್ನ ಸಹೋದರ ಶಿವನಾಯ್ಕನಿಗೆ ಕಳುಹಿಸಿದ್ದಾಳೆ. ಇದರ ಆಧಾರದ ಮೇಲೆ ಪೀಲಾಪುರ ಚೆಕ್‌ ಡ್ಯಾಂ ಬಳಿ ಶನಿವಾರ ಹುಡುಕಿದರೂ ಪತ್ತೆಯಾಗಿಲ್ಲ. ನಂತರ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಮೃತದೇಹ ಪತ್ತೆಹಚ್ಚಿದ್ದಾರೆ. ಈ ಸಂಬಂಧ ಹೊಸದುರ್ಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.