ನವದೆಹಲಿ ( ಜ.  12) ಇದೊಂದು  ವಿಚಿತ್ರ ಪ್ರಕರಣ... ತನ್ನ ಲಿವ್ ಇನ್ ಪಾರ್ಟನರ್  ಕೊಲೆ ಮಾಡಿದ್ದ ಪ್ರಕರಣ ಒಂದು ವಾರದ  ನಂತರ ಪತ್ತೆಯಾಗಿದೆ. 

 ವಾರದ ಹಿಂದೆ  35 ವರ್ಷದ ವಿಧವೆಯ ಶವ ಪತ್ತೆಯಾಗಿತ್ತು.  ಮಹಿಳೆಯ ತಲೆಗೆ  ಗಂಭೀರ ಗಾಯಗಳಾಗಿದ್ದವು. ಆಕೆಯ ಬಾಯಿಗೆ ಬಟ್ಟೆ ತುರುಕಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ  ಮುಕೇಶ್ ಅಲಿಯಾಸ್ ಬಚ್ಚು ಎಂಬಾತನನ್ನು ಬಂಧಿಸಲಾಗಿದೆ.

ಕ್ಲೀನರ್ ನಿಂದ ಚಲಿಸುವ ಬಸ್ ನಲ್ಲಿ ಮಹಿಳೆ ಮೇಲೆ ಎರಡು ಸಾರಿ ರೇಪ್

ಮಹಿಳೆ  ತಲೆಯಿಂದ ರಕ್ತ ಸುರಿಯುತ್ತಿದ್ದು ಕೊಲೆಯಾಗಿದೆ ಎಂದು ವಾರದ ಹಿಂದೆ ವ್ಯಕ್ತಿಯೊಬ್ಬ ಕರೆ  ಮಾಡಿದ್ದಾನೆ. ರಕ್ತಸಿಕ್ತವಾದ ಮಹಿಳೆ ದೇಹ ಬಿದ್ದಿದೆ ಎಂದು ತಿಳಿಸಿದ್ದಾನೆ. 
ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಮಹಿಳೆಯ ಶವ ಸಿಕ್ಕಿದೆ. ಕೊಲೆ ಮಾಡಲು ಬಳಸಿದ ಮರದ ತುಂಡು ಪತ್ತೆಯಾಗಿದೆ.

ಮೊದಲಿಗೆ ಮರದ ತುಂಡಿನಿಂದ ಹಲ್ಲೆ ಮಾಡಿ ನಂತರ ಬಾಯಿಗೆ ಬಟ್ಟೆ ತುರುಕಲಾಗಿದೆ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿದೆ..

ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯ ಮಕ್ಕಳನ್ನು ವಿಚಾರಣೆ ನಡೆಸಲಾಗಿದೆ. ಆರು ವರ್ಷಗಳ ಹಿಂದೆ ಮಹಿಳೆ  ಗಂಡ ಸಾವನ್ನಪ್ಪಿದ್ದು ಕಳೆದ ಆರು ತಿಂಗಳಿನಿಂದ ಈಕೆ ಬೇರೊಬ್ಬನೊಂದಿಗೆ ಲಿವ್ ಇನ್ ನಲ್ಲಿ ಇದ್ದಳು. ಮದುವೆಯಾಗು ಎಂದು ಸಂಗಾತಿಗೆ ಮಹಿಳೆ ಮೇಲಿಂದ ಮೇಲೆ ಒತ್ತಾಯ ಮಾಡುತ್ತಿದ್ದಳು. ಇದು ವಿಕೋಪಕ್ಕೆ ಹೋದ ಕಾರಣ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಸೆರೆಸಿಕ್ಕಿದ್ದಾನೆ.