ಕ್ಲೀನರ್ ನಿಂದ ಚಲಿಸುವ ಬಸ್ ನಲ್ಲಿ ಮಹಿಳೆ ಮೇಲೆ ಎರಡು ಸಾರಿ ರೇಪ್
ಚಲಿಸುವ ಬಸ್ ನಲ್ಲಿ ಅತ್ಯಾಚಾರ/ ದೂರು ದಾಖಲಿಸಿದ ಯುವತಿ/ ನಿರ್ಭರಾ ರೀತಿಯದ್ದೇ ಪ್ರಕರಣ/ ಅತ್ಯಾಚಾರ ಮಾಡಿದ ಬಸ್ ಕ್ಲೀನರ್ ಗಾಗಿ ಹುಡುಕಾಟ
ಪುಣೆ (ಜ. 12) ನಿರ್ಭಯಾ ರೀತಿಯದ್ದೇ ಘೋರ ಪ್ರಕರಣ ಈ ಬಾರಿ ಮಹಾರಾಷ್ಟ್ರದಿಂದ ವರದಿಯಾಗಿದೆ. ನಾಗಪುರಕ್ಕೆ ಆಗಮಿಸುತ್ತಿದ್ದ ವೇಳೆ ಈ ದುರಂತ ನಡೆದಿದೆ.
ಖಾಸಗಿ ಐಷಾರಾಮಿ ಬಸ್ ನಲ್ಲಿ ಎರಡು ಸಾರಿ ಮಹಿಳೆ ಮೇಲೆ ಅತ್ಯಾಚಾರ ಆಗಿದೆ. ಬಸ್ ನ ಕ್ಲೀನರ್ ಬೆದರಿಕೆ ಹಾಕಿ ಎರಡು ಸಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾಳೆ. ಪುಣೆಯ ರಂಜಂಗಾಂವ್ ಪೊಲೀಸ್ ಸ್ಟೇಶನ್ ದೂರು ನೀಡಿದ್ದಾಳೆ.
ನೀರು ಕೊಡದ್ದಕ್ಕೆ ಗುಪ್ತಾಂಗದೊಳಗೆ ರಾಡ್ ನುಗ್ಗಿಸಿದರು
ವರದಿ ಮಾಡಿದ್ದಾಳೆ, ಆದರೆ ವಾಶಿಮ್ ಜಿಲ್ಲೆಯಲ್ಲಿ ಈ ಘಟನೆ ನಡೆಯುತ್ತಿದ ಕಾರಣ ಪುಣೆ ಪೊಲೀಸರು ದೂರನ್ನು ವಾಶಿಮ್‌ನ ಮಾಲೆಗಾಂವ್ ಪೊಲೀಸರಿಗೆ ವರ್ಗಾಯಿಸಿದ್ದಾರೆ.
ಸಂತ್ರಸ್ತೆಯ ಹೇಳಿಕೆಯ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ರಂಜಂಗಾಂವ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಬಸ್ ಕ್ಲೀನರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಪತ್ತೆಗೆ ಬಲೆ ಬೀಸಲಾಗಿದೆ.