Asianet Suvarna News Asianet Suvarna News

ಭಕ್ತೆ ಸೋಗಲ್ಲಿ ಜೈನ ದೇಗುಲದಲ್ಲಿ ಬೆಳ್ಳಿ ಕದ್ದ ಕಳ್ಳಿ..!

*  ಬೆಳ್ಳಿ ಪೂಜಾ ಸಾಮಾಗ್ರಿ ಕದ್ದವಳ ಸೆರೆ
*  ಜೈಲಿಗೆ ಹೋಗಿ ಬಂದರೂ ಮತ್ತೆ ಕೃತ್ಯ
*  ಕೆ.ಪಿ.ಅಗ್ರಹಾರ ಪೊಲೀಸರ ಕಾರ್ಯಾಚರಣೆ
 

Woman Arrested For Theft Case in Bengaluru grg
Author
Bengaluru, First Published Oct 22, 2021, 10:12 AM IST
  • Facebook
  • Twitter
  • Whatsapp

ಬೆಂಗಳೂರು(ಅ.22):  ಜೈನ ದೇವಾಲಯಗಳಲ್ಲಿ(Jain Temple) ಭಕ್ತರ ಸೋಗಿನಲ್ಲಿ ಭಕ್ತಾದಿಗಳ(Devotees) ಬ್ಯಾಗ್‌ ಕಳವು ಮಾಡುತ್ತಿದ್ದ ಮಹಿಳೆಯನ್ನು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ. ಶಾಮಣ್ಣ ಗಾರ್ಡನ್‌ ನಿವಾಸಿ ಮುನ್ನಿ ಬಾನು(52) ಬಂಧಿತ(Arrest) ಮಹಿಳೆ. ಆಕೆಯಿಂದ ಸುಮಾರು 20 ಸಾವಿರ ಮೌಲ್ಯದ 379 ಗ್ರಾಂ ತೂಕದ ಬೆಳ್ಳಿ ಪೂಜೆ ಸಾಮಾನುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಜಸ್ಥಾನ(Rajasthan) ಮೂಲದ ಆರೋಪಿ(Accused) ಮುನ್ನಿಬಾನು ಮೂಲದಲ್ಲಿ ಜೈನ ಸಮುದಾಯಕ್ಕೆ(Jain community)  ಸೇರಿದ್ದಾಳೆ. ಹಲವು ವರ್ಷಗಳ ಹಿಂದೆ ಬೆಂಗಳೂರು(Bengaluru) ನಗರಕ್ಕೆ ಬಂದಿದ್ದು, ಮುಸ್ಲಿ(Muslim) ಸಮುದಾಯದ ವ್ಯಕ್ತಿಯನ್ನು ಪ್ರೀತಿಸಿ ವಿವಾಹವಾಗಿದ್ದಾಳೆ. ಆದರೆ, ಪತಿ ಮದ್ಯ ವ್ಯಸನಿಯಾಗಿದ್ದು, ಮಾರುಕಟ್ಟೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದಾನೆ. ಆತ ಕುಟುಂಬವನ್ನು ನಿರ್ಲಕ್ಷ್ಯಿಸಿದ್ದರಿಂದ ಮುನ್ನಿಬಾನು ಕಳವು(Theft) ಪ್ರವೃತ್ತಿ ಮೈಗೂಡಿಸಿಕೊಂಡಿದ್ದಳು.

ಲಾಕ್‌ಡೌನ್‌ ಸಂಕಷ್ಟಕ್ಕೆ ಕಂಗೆಟ್ಟು ಚಿನ್ನದಂಗಡಿಗೆ ಕನ್ನ: YouTube ನೋಡಿ ಕಳ್ಳತನ

ಜೈನ ದೇವಾಲಯ ಟಾರ್ಗೆಟ್‌:

ಮೂಲದಲ್ಲಿ ಮುನ್ನಿಬಾನು ಜೈನ ಸಮಯದಾಯಕ್ಕೆ ಸೇರಿರುವುದರಿಂದ ಧಾರ್ಮಿಕ ಆಚರಣೆಗಳ ಬಗ್ಗೆ ತಿಳಿದಿದ್ದಾಳೆ. ಹೀಗಾಗಿ ಕಳವಿಗೆ ಜೈನ ದೇವಾಲಯಗಳನ್ನೇ ಗುರಿಯಾಗಿಸಿಕೊಂಡು ಭಕ್ತರ ಸೋಗಿನಲ್ಲಿ ದೇವಾಲಯ ಪ್ರವೇಶಿಸಿ ಭಕ್ತರ ಬ್ಯಾಗ್‌ಗಳನ್ನು ಕಳವು ಮಾಡುತ್ತಿದ್ದಳು. ಈ ಹಿಂದೆ ಹಲವು ಬಾರಿ ಜೈನ ದೇವಾಲಯಗಳಲ್ಲಿ ಕಳವು ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಸೇರಿದ್ದಳು. ಬಳಿಕ ಜಾಮೀನಿನ(Bail) ಮೇಲೆ ಹೊರಬಂದರೂ ಕಳವು ಚಾಳಿ ಮುಂದುವರಿಸಿದ್ದಳು. ಈ ಹಿಂದೆ ಈಕೆಯ ವಿರುದ್ಧ ಅಶೋಕನಗರ, ಜಯನಗರ, ವಿಜಯನಗರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದರು.

ಅ.16ರಂದು ದುರ್ಗಾಷ್ಟಮಿ ಪ್ರಯುಕ್ತ ಮಾಗಡಿ ರಸ್ತೆ 8ನೇ ಕ್ರಾಸಿನ ಸಮತಿನಾಥನ್‌ ಜೈನ್‌ ದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಹೀಗಾಗಿ ಜೈನ್‌ ಸಾಂಪ್ರದಾಯದಂತೆ ಇಂದರ್‌ ಚಂದ್‌ ಜೈನ್‌ ಎಂಬುವವರು ಬೆಳ್ಳಿ ಪೂಜಾ ಸಾಮಗ್ರಿಗಳನ್ನು ಬ್ಯಾಗಿನಲ್ಲಿ ತಂದು ದೇವರ ವಿಗ್ರಹದ ಬಳಿ ಇರಿಸಿ ಪೂಜೆ ಸಲ್ಲಿಸಿದ್ದರು. ಬಳಿಕ ಬೆಳಗ್ಗೆ 11.30ರ ಸುಮಾರಿಗೆ ಪ್ರಸಾದ ಕೊಡಲು ದೇವಾಲಯದ ಹೊರಗೆ ಹೋಗಿದ್ದರು. ಒಂದು ತಾಸಿನ ಬಳಿಕ ದೇವಾಲಯದ ಒಳಗೆ ಬಂದು ದೇವರ ವಿಗ್ರಹದತ್ತ ನೋಡಿದಾಗ ಬ್ಯಾಗ್‌ ಇರಲಿಲ್ಲ. ಹೀಗಾಗಿ ಪೊಲೀಸ್‌ ಠಾಣೆಯಲ್ಲಿ ಕಳವು ದೂರು ದಾಖಲಿಸಿದ್ದರು.
 

Follow Us:
Download App:
  • android
  • ios