Asianet Suvarna News Asianet Suvarna News

ಬೆಂಗಳೂರು: ರೈಲಲ್ಲಿ ಸಂಬಂಧಿಯ ಚಿನ್ನ ಕದ್ದ ಮಹಿಳೆ ಜೈಲು ಪಾಲು!

ತಮ್ಮ ಸೋದರ ಸಂಬಂಧಿ ಮಹಿಳೆಯ ಚಿನ್ನದ ಸರ ಕಳ‍ವು ಮಾಡಿದ್ದ ಮಹಿಳೆಯೊಬ್ಬಳನ್ನು ದಂಡು ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಠದಹಳ್ಳಿ ನಿವಾಸಿ ಚಂದ್ರಶರ್ಮಾ ಬಂಧಿತಳು.

Woman arrested for stealing relatives gold in train at bengaluru rav
Author
First Published Feb 2, 2024, 4:41 AM IST

ಬೆಂಗಳೂರು (ಫೆ.2) : ತಮ್ಮ ಸೋದರ ಸಂಬಂಧಿ ಮಹಿಳೆಯ ಚಿನ್ನದ ಸರ ಕಳ‍ವು ಮಾಡಿದ್ದ ಮಹಿಳೆಯೊಬ್ಬಳನ್ನು ದಂಡು ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಠದಹಳ್ಳಿ ನಿವಾಸಿ ಚಂದ್ರಶರ್ಮಾ ಬಂಧಿತಳಾಗಿದ್ದು, ಆರೋಪಿಯಿಂದ ₹8.51 ಲಕ್ಷ ಮೌಲ್ಯದ ಚಿನ್ನದ ಸರ ಜಪ್ತಿ ಮಾಡಲಾಗಿದೆ. ಕೇರಳದಿಂದ ನಗರಕ್ಕೆ ಬರುವಾಗ ರೈಲಿನಲ್ಲಿ ತಮ್ಮ ಸಂಬಂಧಿ ನಾಗವಾರಪಾಳ್ಯದ ಲಲಿತಾ ಅವರ ಚಿನ್ನಾಭರಣವನ್ನು ಆರೋಪಿ ಕಳವು ಮಾಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಬೆಂಗಳೂರು: ಐಫೋನ್ ಎಂದು ನಕಲಿ ಫೋನ್ ಕೊಟ್ಟು ₹60,000 ವಂಚನೆ!

ಜ.25 ಕೇರಳ ರಾಜ್ಯದ ಪಾಲ್ಕಾಡ್‌ನಲ್ಲಿ ನಡೆದ ತಮ್ಮ ಸಂಬಂಧಿ ಮನೆಯ ಗೃಹ ಪ್ರವೇಶಕ್ಕೆ ನಾಗವಾರಪಾಳ್ಯದ ಲಲಿತಾ ಹೋಗಿದ್ದರು. ಎರಡು ದಿನಗಳ ಬಳಿಕ ಬಂಧುಗಳ ಜತೆ ಕೊಚ್ಚುವೇಲಿ-ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ ಲಲಿತಾ ನಗರಕ್ಕೆ ಮರಳಿದ್ದರು. ಕೆ.ಆರ್‌.ಪುರ ರೈಲ್ವೆ ನಿಲ್ದಾಣದಲ್ಲಿ ಇಳಿದು ಮನೆಗೆ ಮರಳಿದ ಬಳಿಕ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಚಿನ್ನಾಭರಣ ಕಳವಾಗಿರುವುದು ಅವರಿಗೆ ಗೊತ್ತಾಗಿದೆ.

ಸಾಲಗಾರರ ಕಾಟ ತಾಳಲಾರದೆ ಇಡೀ ಕುಟುಂಬ ನಾಪತ್ತೆ; ವಾರ ಕಳೆದರೂ ಪತ್ತೆಯಾಗಿಲ್ಲ!

ಆದರೆ ಲಲಿತಾ ಅವರ ಜತೆ ಕೇರಳದಿಂದ ಪ್ರಯಾಣಿಸಿದ್ದ ಸಂಬಂಧಿ ಚಂದ್ರಶರ್ಮಾ ದಂಡು ರೈಲು ನಿಲ್ದಾಣದಲ್ಲೇ ಇಳಿದು ಹೋಗಿದ್ದಳು. ಈ ಕಳ್ಳತನ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಶಂಕೆ ಮೇರೆಗೆ ಚಂದ್ರಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ.

Follow Us:
Download App:
  • android
  • ios