ಮಂಗ್ಳೂರು ವಿಮಾನ ನಿಲ್ದಾಣದಲ್ಲಿ ಕೋಟಿ ರು. ಮೌಲ್ಯದ ಚಿನ್ನ ಸಾಗಾಟ ಪತ್ತೆ| ಕೇರಳದ ಕಾಸರಗೋಡಿನ ಸಮೀರಾ ಮಹಮ್ಮದ್‌ ಆಲಿ ಎಂಬಾಕೆಯ ಬಂಧನ| ಕೋಟ್ಪಾ ಕಾಯ್ದೆ ಉಲ್ಲಂಘಿಸಿ ವಿದೇಶಿ ಸಿಗರೇಟ್‌ ಬಾಕ್ಸ್‌ ಸಾಗಾಟ|  

ಮಂಗಳೂರು(ಮಾ.12): ಇಲ್ಲಿನ ಕೆಂಜಾರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಮಹಿಳೆಯೊಬ್ಬರು ಒಳ ಉಡುಪಿನಲ್ಲಿ ಬಚ್ಚಿಟ್ಟು ಕೋಟಿ ರು. ಮೌಲ್ಯದ ಚಿನ್ನ ಅಕ್ರಮ ಸಾಗಾಟ ಮಾಡುತ್ತಿರುವುದನ್ನು ಕಸ್ಟಮ್ಸ್‌ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿ ಕಾಸರಗೋಡಿನ ಸಮೀರಾ ಮಹಮ್ಮದ್‌ ಆಲಿ ಎಂಬಾಕೆಯನ್ನು ಬಂಧಿಸಲಾಗಿದೆ.

ಈಕೆ ದುಬೈಯಿಂದ ಏರ್‌ ಇಂಡಿಯಾ ವಿಮಾನದಲ್ಲಿ ಆಗಮಿಸಿದ್ದು, ಕಸ್ಟಮ್ಸ್‌ ಅಧಿಕಾರಿಗಳು ಈಕೆಯನ್ನು ತಪಾಸಣೆ ನಡೆಸಿದಾಗ 1.10 ಕೋಟಿ ರು. ಮೌಲ್ಯದ 2.41 ಕಿ.ಗ್ರಾಂ ಚಿನ್ನ ಪತ್ತೆಯಾಗಿದೆ. ಚಿನ್ನವನ್ನು ಸ್ಯಾನಿಟರಿ ಪ್ಯಾಡ್‌ ಹಾಗೂ ಸಾಕ್ಸ್‌ನಲ್ಲಿ ಬಚ್ಚಿಟ್ಟು ಸಾಗಾಟ ಮಾಡಿದ್ದರು. ಕೋಟ್ಪಾ ಕಾಯ್ದೆ ಉಲ್ಲಂಘಿಸಿ ವಿದೇಶಿ ಸಿಗರೇಟ್‌ ಬಾಕ್ಸ್‌ಗಳನ್ನೂ ಈಕೆ ಸಾಗಾಟ ಮಾಡಿದ್ದು, ಅವುಗಳನ್ನು ಕೂಡ ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.

ಗುದನಾಳದಲ್ಲಿ 9 ಜನರಿಂದ 9 ಕೇಜಿ ಅಕ್ರಮ ಚಿನ್ನ ಸಾಗಣೆ!

ಕಸ್ಟಮ್ಸ್‌ ಡೆಪ್ಯುಟಿ ಕಮಿಷನರ್‌ ಡಾ.ಕಪಿಲ್‌ ಗಾಢೆ, ಸೂಪರಿಟೆಂಡೆಂಟ್‌ಗಳಾದ ಪ್ರೀತಿ ಸುಮಾ, ರಾಕೇಶ್‌ ಕುಮಾರ್‌ ಹಾಗೂ ಕ್ಷಿತಿ ನಾಯಕ್‌ ಕಾರ್ಯಾಚರಣೆಯಲ್ಲಿ ಇದ್ದರು.