Asianet Suvarna News Asianet Suvarna News

ಬೆಂಗಳೂರು; ಪಾನಮತ್ತಳಾಗಿದ್ದ ಯುವತಿ ಮೇಲೆ ಕ್ಯಾಬ್ ಚಾಲಕನಿಂದ ಅತ್ಯಾಚಾರ!

* ಯುವತಿ ಮೇಲೆ ಕ್ಯಾಬ್ ಚಾಲಕನಿಂದ ಅತ್ಯಾಚಾರ.?
* ಬೆಂಗಳೂರಿನಲ್ಲೊಂದು ಘೋರ ಪ್ರಕರಣ
* ರಾತ್ರಿ ಸ್ನೇಹಿತರ ಮನೆಯಿಂದ ತೆರಳುತ್ತಿದ್ದ ಯುವತಿ ಮೇಲೆ ಅತ್ಯಾಚಾರ
*  ಎಚ್ ಎಸ್ ಆರ್ ಲೇಔಟ್ ನಿಂದ ಮುರುಗೇಶ್ ಪಾಳ್ಯಕ್ಕೆ ಹೊರಟಿದ್ದಾಗ ಕೃತ್ಯ

Woman Allegedly Raped By Cab Driver On Her Way Home Bengaluru mah
Author
Bengaluru, First Published Sep 22, 2021, 4:55 PM IST
  • Facebook
  • Twitter
  • Whatsapp

ಬೆಂಗಳೂರು(ಸೆ. 22)   ಸ್ನೇಹಿತೆ ಮನೆಯಿಂದ  ತೆರಳುತ್ತಿದ್ದ ಅನ್ಯ ರಾಜ್ಯದ ಯುವತಿ ಕ್ಯಾಬ್ ಬುಕ್ ಮಾಡಿದ್ದಾಳೆ. ಪಾನಮತ್ತಳಾಗಿದ್ದ ಯುವತಿ ಮೇಲೆ ಅತ್ಯಾಚಾರ ನಡೆದಿದೆ ಎಂಬ ಆರೋಪ ಬಂದಿದೆ.

ಯುವತಿಯೇ ಬಂದು ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಚ್.ಎಸ್.ಆರ್ ಲೇಔಟ್ ನಿಂದ ಮುರುಗೇಶ್ ಪಾಳ್ಯಗೆ ಕ್ಯಾಬ್ ಬುಕ್ ಮಾಡಿದ್ದಳು. ಪಾನಮತ್ತರಾಳಾಗಿದ್ದ ಯುವತಿ ಕ್ಯಾಬಿನಿಂದ ಇಳಿಯುವ ಸ್ಥಿತಿಯಲ್ಲಿ  ಇರಲಿಲ್ಲ.  ಈ ಸಮಯದಲ್ಲಿ ರೇಪ್  ಎಸಗಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.

ಯುವತಿ ದೌರ್ಜನ್ಯವನ್ನು ವಿರೋಧಿಸಿದ್ದಾಳೆ ಅತ್ಯಾಚಾರ ಪ್ರಯತ್ನ ವೇಳೆ ಕೂಗಾಡಿ ಜಟಾ ಪಟಿ ಮಾಡಿದ ಯುವತಿ ಎಸ್ಕೇಪ್ ಅಗೋಕೆ ಟ್ರೈ ಮಾಡಿ ಆರೋಪಿಯ ಮೊಬೈಲ್ ಕಿತ್ತುಕೊಂಡಿದ್ದಾಳೆ.  ಖುದ್ದು ಜೀವನ್ ಭೀಮಾ ನಗರ ಠಾಣೆಗೆ ಬಂದು ದೂರು ನೀಡಿದ್ದಾಳೆ.

ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ತನಿಖೆ ಎಲ್ಲಿಗೆ ಬಂತು?

ಈ ಬಗ್ಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್  ಮಾತನಾಡಿದ್ದು, ಆರೋಪಿ, ಸಂತ್ರಸ್ತೆ ನಡುವೆ ಕಾನ್ವರ್ಷೇಷನ್ ಆಗಿದೆ. ಯುವತಿ ಹೋಟೆಲ್ ನಲ್ಲಿ ಕೆಲಸ ಮಾಡ್ತಾರೆ  . ಆ ಬಳಿಕ ಇಬ್ಬರ ನಡುವೆ ಏನಾಗಿದೆ ಗೊತ್ತಿಲ್ಲ . ಚಾಲಕ ರೇಪ್ ಮಾಡಿಲ್ಲ ಎನ್ನುತ್ತಿದ್ದಾನೆ ವಿಚಾರಣೆ ನಡೆಯುತ್ತಿದೆ . ಸತ್ಯಾಂಶ ಪರಿಶೀಲನೆ ನಡೆಸುತ್ತಿದ್ದೇವೆ  ಎಂದು ತಿಳಿಸಿದ್ದಾರೆ.

ಆರೋಪಿ ಚಾಲಕನ ವಶಕ್ಕೆ ಪಡೆದ ಪೊಲೀಸರು ಬೈಯಪ್ಪನ ಹಳ್ಳಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಬೆಳಗ್ಗಿನ ಜಾವ 3.30- 4 ಗಂಟೆ ವೇಳೆ ಘಟನೆ ನಡೆದಿದೆ ಎಂದಿರುವ ಪೊಲೀಸರು ಆಂಧ್ರ ಮೂಲದ ಚಾಲಕಕನ್ನು ಬಂಧಿಸಿದ್ದಾರೆ.  ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

 

 

Follow Us:
Download App:
  • android
  • ios