ಕಸದ ವಿಚಾರಕ್ಕೆ ಜಗಳ: ಪಿಸ್ತೂಲು ಹಿಡಿದು ಬೆದರಿಸಿ ಗಾಳಿಯಲ್ಲಿ ಗುಂಡು ಹಾರಿಸಿದ ಉದ್ಯಮಿ!
ಶನಿವಾರ ಪೌರ ಕಾರ್ಮಿಕರು ಮಹೇಶ್ ಪಟೇಲ್ ಅವರ ಮನೆಯ ಹೊರಗೆ ಕಸ ಸಂಗ್ರಹಿಸಲು ಹೋಗಿದ್ದರು. ಒಣ ಮತ್ತು ಹಸಿ ತ್ಯಾಜ್ಯವನ್ನು ಬೇರ್ಪಡಿಸದ ಕಾರಣ ಉದ್ಯಮಿಯ ಪತ್ನಿ ಮತ್ತು ನೈರ್ಮಲ್ಯ ಕಾರ್ಮಿಕರ ನಡುವೆ ವಾಗ್ವಾದ ನಡೆದಿದೆ. ಬಳಿಕ ಈ ಜಗಳ ಶೀಘ್ರದಲ್ಲೇ ಉಲ್ಬಣಗೊಂಡಿದ್ದು, ತಮ್ಮ ಪತ್ನಿಯ ಜತೆಗೆ ಮಹೇಶ್ ಪಟೇಲ್ ಮತ್ತು ಅವರ ಮಗ ಸೇರಿಕೊಂಡಿದ್ದಾರೆ.
ಇಂದೋರ್ (ಏಪ್ರಿಲ್ 17, 2023): ಮಧ್ಯ ಪ್ರದೇಶದ ಇಂದೋರ್ ಮೂಲದ ಉದ್ಯಮಿಯೊಬ್ಬರು ಗುಂಡು ಹಾರಿಸೋದಾಗಿ ಪೌರ ಕಾರ್ಮಿಕರಿಗೆ ಬೆದರಿಕೆ ಹಾಕಿದ್ದಾರೆ. ಇನ್ನು, ಈ ಜಗಳ ನಡೆದಿರೋದು ಯಾವುದೋ ದೊಡ್ಡ ವಿಚಾರಕ್ಕಲ್ಲ. ಕಸದ ವಿಚಾರಕ್ಕೆ. ಬರೀ ಬೆದರಿಕೆ ಮಾತ್ರವಲ್ಲ, ಗಾಳಿಯಲ್ಲಿ ಗುಂಡನ್ನೂ ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.
ಪೆಟ್ರೋಲ್ ಪಂಪ್ ಮಾಲೀಕ ಮಹೇಶ್ ಪಟೇಲ್ ಈ ರೀತಿ ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಕೆ ಹಾಕಿದ್ದಾರೆ. ಇವರು ಮಧ್ಯಪ್ರದೇಶದ ಬಿಜೆಪಿ ಮಾಜಿ ಶಾಸಕರ ಸಂಬಂಧಿಯೂ ಎಂದು ತಿಳಿದುಬಂದಿದ್ದು, ಇವರ ವಿರುದ್ಧ ಸ್ಥಳೀಯ ನಾಗರಿಕ ಸಂಸ್ಥೆಯ ನೈರ್ಮಲ್ಯ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನು ಓದಿ: ಮತ್ತೊಂದು ಮರ್ಯಾದಾ ಹತ್ಯೆ: ಹೆತ್ತ ತಾಯಿ, ಮಗನನ್ನೇ ಕೊಚ್ಚಿ ಕೊಲೆ ಮಾಡಿದ ಪಾಪಿ ತಂದೆ!
ಶನಿವಾರ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದ್ದು, ಇದರ ವಿಡಿಯೋ ಸಹ ವೈರಲ್ ಆಗಿದೆ. ಶನಿವಾರ ಪೌರ ಕಾರ್ಮಿಕರು ಮಹೇಶ್ ಪಟೇಲ್ ಅವರ ಮನೆಯ ಹೊರಗೆ ಕಸ ಸಂಗ್ರಹಿಸಲು ಹೋಗಿದ್ದರು. ಒಣ ಮತ್ತು ಹಸಿ ತ್ಯಾಜ್ಯವನ್ನು ಬೇರ್ಪಡಿಸದ ಕಾರಣ ಉದ್ಯಮಿಯ ಪತ್ನಿ ಮತ್ತು ನೈರ್ಮಲ್ಯ ಕಾರ್ಮಿಕರ ನಡುವೆ ವಾಗ್ವಾದ ನಡೆದಿದೆ. ಬಳಿಕ ಈ ಜಗಳ ಶೀಘ್ರದಲ್ಲೇ ಉಲ್ಬಣಗೊಂಡಿದ್ದು, ತಮ್ಮ ಪತ್ನಿಯ ಜತೆಗೆ ಮಹೇಶ್ ಪಟೇಲ್ ಮತ್ತು ಅವರ ಮಗ ಸೇರಿಕೊಂಡಿದ್ದಾರೆ.
ನಂತರ, ಮನೆಯ ಒಳಗೆ ಹೋದ ಉದ್ಯಮಿ ಕೆಲ ಹೊತ್ತಿನ ಬಳಿಕ ಮೊದಲನೇ ಮಹಡಿಯ ಬಾಲ್ಕನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಪಿಸ್ತೂಲು ಹಿಡಿದಿದ್ದ ಉದ್ಯಮಿ ಪೌರ ಕಾರ್ಮಿಕರಿಗೆ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ಕೂಡಲೇ ಕೆಳಗಿಳಿದು ಅವರತ್ತ ಪಿಸ್ತೂಲನ್ನು ತೋರಿಸಿದ್ದಾರೆ. ಬಂದೂಕು ನೋಡಿದ ಪೌರ ಕಾರ್ಮಿಕರು ಸ್ಥಳದಿಂದ ಓಡಿಹೋಗಿದ್ದಾರೆ.
ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ನಾಯಕನ ಭೀಕರ ಹತ್ಯೆ: ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು
ಈ ಘಟನೆಯ ವಿಡಿಯೋದಲ್ಲಿ ಮಹೇಶ್ ಪಟೇಲ್ ಪೌರ ಕಾರ್ಮಿಕರ ಕಡೆಗೆ ಗನ್ ತೋರಿಸಿರುವುದು ಸೆರೆಯಾಗಿದೆ. ಅಲ್ಲದೆ, ಉದ್ಯಮಿಯ ಮಗ ಪೌರ ಕಾರ್ಮಿಕರನ್ನು ನಿಂದಿಸಿದ್ದು, ಅವರನ್ನು ಜೀವಂತ ಸಮಾಧಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ನಂತರ ಪೊಲೀಸ್ ಅಧಿಕಾರಿಯೊಬ್ಬರು ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರ ನಡುವೆ ಸಂಧಾನ ಮಾಡಲು ಯತ್ನಿಸಿದ್ದಾರೆ. ಆದರೂ, ಈ ವಿಷಯ ಅಷ್ಟಕ್ಕೇ ಮುಗಿಯಲಿಲ್ಲ. ಕಸದ ವ್ಯಾನ್‌ಗಳನ್ನು ನಿರ್ವಹಿಸುವ ಚಾಲಕರ ಸಂಘದ ಸದಸ್ಯರೊಬ್ಬರು ಬೆದರಿಕೆಗೆ ಒಳಗಾದ ಪೌರ ಕಾರ್ಮಿಕರೊಂದಿಗೆ ಪೊಲೀಸರನ್ನು ಸಂಪರ್ಕಿಸಿ ಲಿಖಿತ ದೂರು ನೀಡಿದ್ದರು. ಆದರೆ, ಉದ್ಯಮಿ ಬಿಜೆಪಿಯ ಮಾಜಿ ಶಾಸಕ ಮನೋಜ್ ಪಟೇಲ್ ಅವರ ಸಂಬಂಧಿ ಎಂಬ ಕಾರಣಕ್ಕೆ ಪೊಲೀಸರು ಈ ಪ್ರಕರಣದಲ್ಲಿ ಕ್ರಮ ಕೈಗೊಂಡಿಲ್ಲ ಎಂದೂ ಆರೋಪಿಸಲಾಗಿದೆ.
ಇದನ್ನೂ ಓದಿ: Maharashtra Accident: ಕಮರಿಗೆ ಬಿದ್ದ ಬಸ್: 12 ಜನ ದುರ್ಮರಣ, 27 ಕ್ಕೂ ಹೆಚ್ಚು ಮಂದಿಗೆ ಗಾಯ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭರವಸೆ ನೀಡಿದ್ದಾರೆ. "ನಿಖರವಾಗಿ ಏನಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ವಿಷಯವನ್ನು ಪರಿಶೀಲಿಸುತ್ತಿದ್ದೇವೆ. ನಾವು ದೂರುದಾರರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ" ಎಂದೂ ಹಿರಿಯ ಪೊಲೀಸ್ ಅಧಿಕಾರಿ ಆಶಿಶ್ ಮಿಶ್ರಾ ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಾಯ್‌ಫ್ರೆಂಡ್ ಜತೆ ಸೆಕ್ಸ್‌ಚಾಟ್ ಬಹಿರಂಗ: ಮೊಬೈಲ್ ಕಸಿದುಕೊಂಡ ಸಿಟ್ಟಿಗೆ ಅತ್ತೆ - ಮಾವನನ್ನೇ ಹತ್ಯೆಗೈದ ಪಾಪಿ ಸೊಸೆ