ಬಡವ ಶ್ರೀಮಂತನಾದಾಗ ಬಿಟ್ಟು ಹೋದ ಪತ್ನಿ 22 ವರ್ಷದ ಬಳಿಕ ವಾಪಸ್, ಕೊನೆಗೂ ಒಂದಾಗಲಿಲ್ಲ!

ಕಟ್ಟಿಕೊಂಡ ಪತಿ ಕುಟುಂಬದಲ್ಲಿ ಆರ್ಥಿಕ ಸಂಕಷ್ಟ, ಬಡನ. ಹೀಗಾಗಿ ಪತ್ನಿಗೆ ಹಳೇ ಪ್ರಿಯಕರನತ್ತ ಮನಸ್ಸು ವಾಲಿದೆ. ಒಂದು ದಿನ ಪತಿ ಬಿಟ್ಟು ಪ್ರಿಯಕರನ ಜೊತೆ ತೆರಳಿದ್ದಾಳೆ. 22 ವರ್ಷದ ಬಳಿಕ ಪತಿ ಶ್ರೀಮಂತನಾಗಿದ್ದಾನೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಪತ್ನಿ ಮರಳಿದ್ದಾಳೆ. ಆದರೆ ಕುಟುಂಬ ಒಂದಾಗಿಲ್ಲ, ಬದಲಾಗಿ ಕೇಸ್ ದಾಖಲಾಗಿದೆ.
 

Wife return after 22 years when husband become rich Man filed complaint against her Uttar pradesh ckm

ಝಾನ್ಸಿ(ಜು.30)  ಬಡತನದ ಜೊತೆ ಎದುರಾದ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವಾಗ ಪತ್ನಿಗೆ ಬೇರೊಬ್ಬನ ಜೊತೆಯಲ್ಲಿ ಅಕ್ರಮ ಸಂಬಂಧ ಶುರುವಾಗಿದೆ. ಈ ಬಡವನ ಜೊತೆ ಸಂಸಾರ ಸಾಧ್ಯವಿಲ್ಲ ಎಂದು ಮಕ್ಕಳಿಬ್ಬರನ್ನು ಕರೆದುಕೊಂಡು ಪ್ರಿಯಕರ ಜೊತೆ ಹೊರಟೇ ಬಿಟ್ಟಿದ್ದಳು. ಇದರ ಜೊತೆಗೆ ದೌರ್ಜನ್ಯದ ಕೇಸ್ ಕೂಡ ದಾಖಲಿಸಿದ್ದಳು. ಹೀಗಾಗಿ ಜೈಲು ಶಿಕ್ಷೆ ಸೇರಿದಂತೆ ಹಲವು ಸವಾಲಿನಲ್ಲಿ ಬದುಕು ಸಾಗಿಸಿದ್ದ. ಬಡತನದಲ್ಲಿ ನೊಂದು ಬೆಂದ ಈತನ ಅದೃಷ್ಟದ ಬಾಗಿಲು ತೆರೆದಿದೆ. ಬಡವನಾಗಿದ್ದ ಈತ ಏಕಾಏಕಿ ಶ್ರೀಮಂತನಾಗಿದ್ದಾನೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಬರೋಬ್ಬರಿ 22 ವರ್ಷದ  ಹಿಂದೆ ಬಿಟ್ಟು ಹೋದ ಪತ್ನಿ ಮರಳಿ ಬಂದಿದ್ದಾಳೆ. ಆದರೆ ಮರಳಿ ಬಂದರೂ ಇವರ ಸಂಸಾರ ಜೊತೆಯಾಗಿ ಸಾಗಲಿಲ್ಲ.

ಉತ್ತರ ಪ್ರದೇಶದ ಝಾನ್ಸಿ ನಿವಾಸಿ ಅನಿಲ್ ಸದ್ಯ ವಯಸ್ಸು 60. ಆದರೆ 22 ವರ್ಷಗಳ ಹಿಂದೆ ಅನಿಲ್ ಕುಟುಂಬದಲ್ಲಿ ಕಡು ಬಡತನ ತಾಂಡವಾಡಿತ್ತು. ಇದರ ಜೊತೆ ಪೋಷಕರ ಆರೋಗ್ಯ ಸಮಸ್ಯೆ ಸೇರಿದಂತೆ ಇತರ ಹಲವು ಕಾರಣಗಳಿಂದ ಆರ್ಥಿಕ ಸಂಕಷ್ಟ ಎದುರಾಗಿತ್ತು. ಇದೇ ವೇಳೆ ಪತ್ನಿಗೆ ಹಳೇ ಪ್ರಿಯಕರನತ್ತ ಮನಸ್ಸ ವಾಲಿದೆ. ಪತಿ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದ ಪತ್ನಿ ಠಾಣೆಯಲ್ಲಿ ದೂರು ದಾಖಲಿಸಿದ್ದಳೆ. 

ಸೀರೆ ಕೊಡಿಸದ ಗಂಡನ ಪೊಲೀಸ್ ಠಾಣೆಗೆ ಮೆಟ್ಟಿಲೇರಿಸಿದ ಪತ್ನಿ, ಸಂಧಾನ ಮತ್ತಷ್ಟು ರೋಚಕ!

ದೌರ್ಜನ್ಯ, ವರದಕ್ಷಿಣೆ ಸೇರಿದಂತೆ ಕೆಲ ಪ್ರಕರಣದ ಕಾರಣ ಅನಿಲ್‌ನನ್ನು ಪೊಲೀಸರು ಬಂಧಿಸಿದ್ದರು. ಇತ್ತ ಇದೇ ಸಂದರ್ಭದಲ್ಲಿ ಪತ್ನಿ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಅದೇ ಜಿಲ್ಲೆಯಲ್ಲಿ ವಾಸವಿದ್ದ ಪ್ರಿಯಕರನ ಜೊತೆ ತೆರಳಿದ್ದಾಳೆ. ಕೆಲ ದಿನಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ಅನಿಲ್ ಮರಳಿದಾಗ ಪತ್ನಿ ಪ್ರಿಯಕರನ ಜೊತೆ ತೆರಳಿದ್ದರೆ, ಮನೆಯ ಸಂಕಷ್ಟ ಮತ್ತಷ್ಟು ಹೆಚ್ಚಾಗಿತ್ತು.

ಅದೇ ಗ್ರಾಮದ ದೇವಸ್ಥಾನ ಒಂದರಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸಿದ ಅನಿಲ್ ಬಳಿಕ ಟ್ರಕ್ ಚಾಲಕನಾಗಿ ಕೆಲಸ ಆರಂಭಿಸಿದ್ದಾನೆ. ಆಸ್ತಿ ಹಂಚಿಕೆ ಮಾಡಲಾಗಿತ್ತು. ಈ ವೇಳೆ ಇದ್ದ ಮನೆಯನ್ನು ಸಹೋದರನಿಗೆ ನೀಡಲಾಗಿದೆ. ಪಾಳುಬಿದ್ದ, ಒಂದು ಹುಲ್ಲು ಕಡ್ಡಿಯೂ ಬೆಳೆಯ ಸಣ್ಣ ಜಮೀನು ಈತನಿಗೆ ನೀಡಲಾಗಿದೆ. ಕುಟುಂಬ, ಸಂಸಾರ, ಮಕ್ಕಳು ಇಲ್ಲದ ಕಾರಣ ಈ ನಿರ್ಧಾರ ಮಾಡಲಾಗಿತ್ತು.  ಸಹೋದರ ಹಾಗೂ ಅವರ ಕುಟುಂಬದ ಜೊತೆ ನೆಲೆಸಿರುವ ಅನಿಲ್ ಸಂಕಷ್ಟಗಳು ನಿಧಾನವಾಗಿ ಸರಿಯತೊಡಗಿತು. 

ಉತ್ತರ ಪ್ರದೇಶ ಕೆಲ ಅಭಿವೃದ್ಧಿ ಯೋಜನೆಗಳ ಸಲುವಾಗಿ ಬುಂದೇಲ್ಕಂಡ್ ಡೆವಲಪ್ ಅಥಾರಿಟಿ ಈ ಜಮೀನು ಗುರುತಿಸಿ ವಶಕ್ಕೆ ಪಡೆಯಿತು. ಇದಕ್ಕೆ ಪರಿಹಾರವಾಗಿ 28 ಲಕ್ಷ ರೂಪಾಯಿ ಮೊತ್ತವನ್ನು ಅನಿಲ್‌ಗೆ ನೀಡಲಾಗಿದೆ. ಖಾತೆಗೆ ಹಣ ಜಮೆ ಆಗುತ್ತಿದ್ದಂತೆ ಬಡವ ಅನಿಲ್ ಶ್ರೀಮಂತನಾಗಿದ್ದಾನೆ. ಈ ಮಾಹಿತಿ ತಿಳಿದು 22 ವರ್ಷದ ಬಳಿಕ ಪತ್ನಿ ತನ್ನ ಮಕ್ಕಳೊಂದಿಗೆ ಮರಳಿದ್ದಾಳೆ. ಪಾಠ ಕಲಿತಿದ್ದೇನೆ. ನಿಮ್ಮೊಂದಿಗೆ ಸಂಸಾರ ನಡೆಸುವುದಾಗಿ ಹೇಳಿದ್ದಾರೆ. 

ಮಗು ಪಡೆಯುವ ಚಿಕಿತ್ಸೆ ವೇಳೆ ವೈದ್ಯರ ವರದಿಯಿಂದ ಪತಿಗೆ ಶಾಕ್, ಪತ್ನಿ ವಿರುದ್ದ ಪ್ರಕರಣ ದಾಖಲು!

ಆದರೆ ಪತ್ನಿಯ ಬಣ್ಣದ ಮಾತನ್ನು ಅನಿಲ್ ಅರಿತಿದ್ದ. ಹೀಗಾಗಿ ಜೊತೆಯಾಗಿ ಬಾಳಲು ಸಾಧ್ಯವಿಲ್ಲ. ಮನೆಯಿಂದ ತೆರಳಲು ಸೂಚಿಸಿದ್ದಾನೆ. ಮನೆಗೆ ಬಂದ ಪತ್ನಿ ಮನೆಯಲ್ಲಿಟ್ಟಿದ್ದ 1.5 ಲಕ್ಷ ರೂಪಾಯಿ ಹಣವನ್ನು ಎಗರಿಸಿಕೊಂಡು ಮತ್ತೆ ಪರಾರಿಯಾಗಿದ್ದಾಳೆ. ಇತ್ತ ಅನಿಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Latest Videos
Follow Us:
Download App:
  • android
  • ios