ಬೆಂಗಳೂರು: ಎಂಟು ಮದುವೆ ಆಗಿದ್ದ ಮಹಿಳೆಯಿಂದ ಪತಿಗೆ ಕಿರುಕುಳ!
ವಿಜಯಲಕ್ಷ್ಮೀ ಈ ಹಿಂದೆ ತಾನು ಏಳು ಮದುವೆಯಾಗಿರುವ ವಿಚಾರವನ್ನು ರಾಮಕೃಷ್ಣ ಬಳಿ ಮುಚ್ಚಿಟ್ಟಿದ್ದಾರೆ. ಮದುವೆ ಆದ ವ್ಯಕ್ತಿಗಳ ಗಮನಕ್ಕೆ ಬಾರದಂತೆ ನಗದು ಹಣ ಹಾಗೂ ಚಿನ್ನಾಭರಣ ದೋಚಿದ್ದಾರೆ. ವಾಪಾಸ್ ಕೊಡುವಂತೆ ಅವರು ಕೇಳಿದರೆ ನೇಣು ಹಾಕಿಕೊಳ್ಳುವುದಾಗಿ ಬೆದರಿಸಿದ್ದಾರೆ. ರಾಮಕೃಷ್ಣ ವಿರುದ್ಧ ಮದ್ದೂರು ಹಾಗೂ ಮಂಡ್ಯ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಕೇಸ್‌ಗಳನ್ನು ದಾಖಲಿಸಿದ್ದಾರೆ.
ಬೆಂಗಳೂರು(ಜ.10): ಈ ಹಿಂದೆ 7 ಮದುವೆಯಾಗಿದ್ದ ವಿಚಾರ ಮುಚ್ಚಿಟ್ಟು ಎಂಟನೇ ಮದುವೆಯಾಗಿ ಪತಿಯ ಮನೆಯಲ್ಲೇ ನಗದು, ಚಿನ್ನಾಭರಣ ದೋಚಿ ಪತಿ ವಿರುದ್ದವೇ ಸುಳ್ಳು ಪ್ರಕರಣ ದಾಖಲಿಸಿ ಹಾಕುತ್ತಿರುವ ಆರೋಪ ದಡಿ ಮಹಿಳೆ ಸೇರಿ ನಾಲ್ವರ ವಿರುದ್ದ ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆದರಿಕೆ ಹಾಕುತ್ತಿರುವ ಮಹಾಗಣಪತಿ ನಗರ ನಿವಾಸಿ ರಾಮ ಕೃಷ್ಣ(62) ಎಂಬುವವರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಮಂಡ್ಯ ಜಿಲ್ಲೆ ಮದ್ದೂರು ಟೌನ್‌ನ ಎಚ್.ಎಂ.ವಿಜಯಲಕ್ಷ್ಮಿ (54), ನಂದೀಶ(30), ಮಂಡ್ಯದ ರೇಖಾ(40) ಮತ್ತು ವನಜಾ(45) ಎಂಬುವವರ ವಿರುದ್ಧ ಬಿಎನ್ 2 0 314, 316(2), 318(4), 351(2), 351(3), 61(2), 82(1), 82(2), 83, 3(5) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ದಾಖಲಿಸಲಾಗಿದೆ.
ಬೆಂಗಳೂರಿನ ಕೋರಮಂಗಲದಲ್ಲಿ ರಾತ್ರಿ ಒಬ್ಬಂಟಿ ಯುವತಿ ಹಿಂಬಾಲಿಸಿದ ಮೂವರು ಯುವಕರು!
ಏನಿದು ದೂರು?:
ದೂರುದಾರ ರಾಮಕೃಷ್ಣ ಅವರು ಪತ್ನಿ ಮೃತರಾಗಿದ್ದಾರೆ. ರಾಮಕೃಷ್ಣ ಅವರಿಗೆ 2020ರ ನವೆಂಬರ್‌ನಲ್ಲಿ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಎಚ್.ಎಂ. ವಿಜಯಲಕ್ಷ್ಮೀ ಪರಿಚಿತರಾಗಿದ್ದಾರೆ. ಬಳಿಕ ರಾಮನಗರದ ತಿಪ್ಪೇಗೌಡನ ದೊಡ್ಡಿಯ ರಾಮದೇವರ ಬೆಟ್ಟದ ರಾಮಾಂಜನೇಯ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಗುರು-ಹಿರಿಯರ ಸಮ್ಮುಖದಲ್ಲಿ ವಿಜಯಲಕ್ಷ್ಮೀ ಅವರನ್ನು ರಾಮಕೃಷ್ಣ ಅವರು ಎರಡನೇ ಮದುವೆಯಾಗಿದ್ದಾರೆ.
ಪಿಎಫ್ ಹಣ ನೀಡುವಂತೆ ಹಿಂಸೆ:
ಈ ಮದುವೆಗೂ ಮುನ್ನ ವಿಜಯಲಕ್ಷ್ಮೀ ಅವರು ಈ ಹಿಂದೆ ನನಗೆ ಮದುವೆಯಾಗಿದ್ದು, ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ರಾಮಕೃಷ್ಣಗೆ ಹೇಳಿದ್ದಾರೆ. ಬಳಿಕ ರಾಮಕೃಷ್ಣ ಅವರನ್ನು ಮದುವೆಯಾದ ಕೆಲ ದಿನಗಳ ಬಳಿಕ ರಾಮಕೃಷ್ಣ ಅವರ ಪಿಎಫ್ ಹಣ ಕಬಳಿಸುವ ಉದ್ದೇಶದಿಂದ ವಿನಾಕಾರಣ ಮನೆಯಲ್ಲಿ ಜಗಳ ತೆಗೆಯುತ್ತಿದ್ದರು. ಪಿಎಫ್ ಹಣ ಕೊಡುವಂತೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ. ಪಿಎಫ್ ಹಣ ನೀಡದಿದ್ದಲ್ಲಿ ನೇಣು ಹಾಕಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ವಿಜಯಲಕ್ಷ್ಮಿಗೆ ಏಳು ಮದುವೆ!:
ವಿಜಯಲಕ್ಷ್ಮೀ ಈ ಹಿಂದೆ ತಾನು ಏಳು ಮದುವೆಯಾಗಿರುವ ವಿಚಾರವನ್ನು ರಾಮಕೃಷ್ಣ ಬಳಿ ಮುಚ್ಚಿಟ್ಟಿದ್ದಾರೆ. ಮದುವೆ ಆದ ವ್ಯಕ್ತಿಗಳ ಗಮನಕ್ಕೆ ಬಾರದಂತೆ ನಗದು ಹಣ ಹಾಗೂ ಚಿನ್ನಾಭರಣ ದೋಚಿದ್ದಾರೆ. ವಾಪಾಸ್ ಕೊಡುವಂತೆ ಅವರು ಕೇಳಿದರೆ ನೇಣು ಹಾಕಿಕೊಳ್ಳುವುದಾಗಿ ಬೆದರಿಸಿದ್ದಾರೆ. ರಾಮಕೃಷ್ಣ ವಿರುದ್ಧ ಮದ್ದೂರು ಹಾಗೂ ಮಂಡ್ಯ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಕೇಸ್‌ಗಳನ್ನು ದಾಖಲಿಸಿದ್ದಾರೆ.
ಹುಡುಗಿಯರ ಜತೆಗೆ ಪೋಲಿ ಪ್ರಿನ್ಸಿಪಾಲ್ ಚಾಟಿಂಗ್: ಸಚಿನ್ ಕುಮಾರನ ಚಳಿ ಬಿಡಿಸಿದ ವಿದ್ಯಾರ್ಥಿನಿಯರು!
ಮನೆಯಲ್ಲೇ ಮದ್ಯದ ಪಾರ್ಟಿ
ರಾಮಕೃಷ್ಣ ಮನೆಯಲ್ಲಿ ಇಲ್ಲದ ಸಮಯದಲ್ಲಿ ನಂದೀಶ್, ವನಜಾ, ರೇಖಾ ಅವರನ್ನು ಮನೆಗೆ ಕರೆಸಿಕೊಂಡು ಮದ್ಯದ ಪಾರ್ಟಿ ಮಾಡುತ್ತಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದರೆ," ನೇಣು ಹಾಕಿಕೊಳ್ಳುವುದಾಗಿ ವಿಜಯಲಕ್ಷ್ಮೀ ಬೆದರಿಸಿದ್ದಾರೆ. ಅಂತೆಯೇ ರಾಮಕೃಷ್ಣ ಅವರ ಮೊದಲ ಪತ್ನಿಯ ಮಗಳು ಹಾಗೂ ಅಳಿಯನ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮನೆಯಲ್ಲಿದ್ದ ನಗದು, ಚಿನ್ನಾಭರಣ ಕಳವು:
ರಾಮಕೃಷ್ಣ ಅವರ ಅರಿವಿಗೆ ಬಾರದಂತೆ ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಆಭರಣಗಳು ಮತ್ತು 25 ಲಕ್ಷನಗದು ಕಳವು ಮಾಡಿದ್ದಾರೆ. ವಿಜಯಲಕ್ಷ್ಮೀ ಮೋಸ ಮಾಡುವ ಉದ್ದೇಶದಿಂದ ಸುಳ್ಳು ಹೇಳಿ ರಾಮಕೃಷ್ಣ ಅವರನ್ನು ಮದುವೆಯಾಗಿ ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದಾರೆ. ಬಳಿಕ ರಾಮಕೃಷ್ಣ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.