ಬಿಜೆಪಿ ಮುಖಂಡನ ಆತ್ಮಹತ್ಯೆಗೆ ಪತ್ನಿ ಕಿರುಕುಳ ಕಾರಣ?
* ಅನಂತರಾಜು ಆತ್ಮಹತ್ಯೆ ಪ್ರಕರಣ; ಪತ್ನಿ ಸುಮಾ ವಿಚಾರಣೆ
* ಕೌಟುಂಬಿಕ ಕಲಹದ ಆಡಿಯೋ ವೈರಲ್ ಹಿನ್ನೆಲೆಯಲ್ಲಿ ವಿಚಾರಣೆ
* ಅನಂತರಾಜ್‌ಗೆ ಪತ್ನಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ನಡೆಸಿರುವುದು ಕೇಳಿಬಂದಿದೆ
ಬೆಂಗಳೂರು(ಮೇ.25): ಮೇ.12ರಂದು ಬಿಜೆಪಿ ಮುಖಂಡ ಬಿ.ಪಿ.ಅನಂತರಾಜು ಆತ್ಮಹತ್ಯೆ ಪ್ರಕರಣ ಸಂಬಂಧ ಮೃತನ ಪತ್ನಿ ಬಿ.ಕೆ.ಸುಮಾ ಅವರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಮಂಗಳವಾರ ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಹಿನ್ನೆಲೆಯಲ್ಲಿ ಮಧ್ಯಾಹ್ನ ಇನ್ಸ್‌ಪೆಕ್ಟರ್ ರವಿಕುಮಾರ್ ಮುಂದೆ ಹಾಜರಾದ ಸುಮಾ ಅವರನ್ನು ನಾಲ್ಕು ತಾಸು ಸುದೀರ್ಘವಾಗಿ ಪ್ರಶ್ನಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆದರೆ ತನ್ನ ಮೇಲಿನ ಆರೋಪಗಳನ್ನು ಸುಮಾ ನಿರಾಕರಿಸಿದ್ದಾರೆ.
ಇತ್ತೀಚಿಗೆ ವೈಯಕ್ತಿಕ ಕಾರಣಕ್ಕೆ ಅನಂತರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ತಮ್ಮ ಪತಿಗೆ ಸಾವಿಗೆ ಹನಿಟ್ರ್ಯಾಪ್ ಕಾರಣ ಎಂದೂ ಆರೋಪಿಸಿ ಸುಮಾ ನೀಡಿದ ದೂರಿನ ಮೇರೆಗೆ ಅನಂತರಾಜು ಅವರ ಗೆಳತಿ ರೇಖಾಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು. ಈ ಬಂಧನ ಬಳಿಕ ಪ್ರಕರಣಕ್ಕೆ ಅನಿರೀಕ್ಷಿತ ತಿರುವು ಸಿಕ್ಕಿದ್ದು, ಅನಂತರಾಜು ಕೌಟುಂಬಿಕ ಕಲಹದ ಆಡಿಯೋಗಳು ಬಯಲಾಗಿ ವೈರಲ್ ಆಗಿದ್ದವು. ಈ ಆಡಿಯೋಗಳಲ್ಲಿ ಪತಿಗೆ ಸುಮಾ ಜೀವ ಬೆದರಿಕೆ ಹಾಕುವ ಮಾತು ಉಲ್ಲೇಖವಾಗಿತ್ತು.
ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ: ಪತ್ನಿಗೆ ಮತ್ತೊಮ್ಮೆ ನೋಟಿಸ್ ನೀಡಲು ಪೊಲೀಸ್ ಸಿದ್ದತೆ
ಆಡಿಯೋದಲ್ಲಿನ ಸಂಭಾಷಣೆಯನ್ನೇ ಮುಂದಿಟ್ಟು ವಿಚಾರಣೆ ನಡೆಸಿದ ಪೊಲೀಸರು, ತಮ್ಮ ದಾಂಪತ್ಯ ಜೀವನದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅನಂತರಾಜ್ ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ಅಂತಿಮ ವರದಿ ಬಂದ ಮೇಲೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನಂತರಾಜ್‌ಗೆ ಪತ್ನಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ನಡೆಸಿರುವುದು ಕೇಳಿಬಂದಿದೆ. ಅನಂತ್‌ಗೆ ಯಾವುದೇ ಕಿರುಕುಳ ಕೊಡಬೇಡ. ನನಗೆ ಕೊಡು ನಾನು ದೂರ ಆಗುತ್ತೇನೆ ಎಂದು ರೇಖಾ ಗೋಗರೆಯುತ್ತಾಳೆ. ಇದಕ್ಕೆ ಅನಂತರಾಜ್ ಪತ್ನಿ, ಈಗಾಗಲೇ ಕೈ ಮುರಿದು, ಎದೆ ಮೇಲೆ ಹಲ್ಲೆ ನಡೆಸಿ ಆಸ್ಪತ್ರೆಗೆ ಸೇರಿಸಿದ್ದೆ. ಬೇಕಾದರೆ ವಾರ್ಡ್‌ನ ಜನರನ್ನು ಕೇಳು. ನಂಬಿಕೆ ಇಲ್ಲವಾದರೆ, ವಿಡಿಯೋ ಕಾಲ್ ಮಾಡಿ ಮಾತನಾಡು ಎಂದು ಸುಮಾ, ಹೇಳುವ ಮಾತುಗಳು ಕೇಳಿಬಂದಿದ್ದವು.