Asianet Suvarna News Asianet Suvarna News

ನಗ್ನ ಫೋಟೋ ಸಾಮಾಜಿಕ ಜಾಲಕ್ಕೆ ಹಾಕೋದಾಗಿ ಪತಿ ಬೆದರಿಕೆ: ಎಫ್‌ಐಆರ್‌ ದಾಖಲು

*ವರದಕ್ಷಿಣೆ ಕೊಟ್ಟರೂ ಕಿರುಕುಳ: ವಿಚ್ಛೇದನ ನೀಡುವಂತೆ ಹಿಂಸೆ
*ಕುಡಿದು ಬಂದು ಪತ್ನಿಯ ನಗ್ನ ಫೋಟೋ ತೆಗೆದ
*ಆಸ್ತಿ ತನ್ನ ಹೆಸರಿಗೆ ಬರೆದುಕೊಡಲು ಹಿಂಸೆ

Wife Files FIR against Husband for threatening to share nude photo on social media mnj
Author
Bengaluru, First Published Feb 28, 2022, 10:54 AM IST | Last Updated Feb 28, 2022, 10:54 AM IST

ಬೆಂಗಳೂರು (ಫೆ. 28): ಪತಿಯೇ ನನ್ನ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹಾಕುವುದಾಗಿ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಬಸವನಗುಡಿ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಲಕ್ಕಸಂದ್ರದ 25 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು, ಹನುಮಂತ ನಗರದ ನಿವಾಸಿ ಉದ್ಯಮಿ ಪ್ರಗತ್‌ ಪುರುಷೋತ್ತಮ್‌(32) ಎಂಬಾತನ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಕುಟುಂಬದವರು ಏಳು ವರ್ಷದ ಹಿಂದೆ ಪ್ರಗತ್‌ನೊಂದಿಗೆ ನನ್ನನ್ನು ವಿವಾಹ ಮಾಡಿದ್ದರು. ಈ ವೇಳೆ ಪ್ರಗತ್‌ಗೆ ಅರ್ಧ ಕೆ.ಜಿ. ಚಿನ್ನಾಭರಣ, 15 ಕೆ.ಜಿ. ಬೆಳ್ಳಿ ಸೇರಿದಂತೆ ಲಕ್ಷಾಂತರ ರುಪಾಯಿ ಮೌಲ್ಯದ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಆರಂಭದಲ್ಲಿ ವೈವಾಹಿಕ ಜೀವನ ಚೆನ್ನಾಗಿತ್ತು. 

ಬಳಿಕ ಪ್ರಗತ್‌, ತವರು ಮನೆಯಿಂದ ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಆರಂಭಿಸಿದ್ದ. ಈ ವಿಚಾರವನ್ನು ತವರು ಮನೆಗೆ ತಿಳಿಸಿದಾಗ, ಪ್ರಗತ್‌ಗೆ .40 ಲಕ್ಷ ವರದಕ್ಷಿಣೆ ನೀಡಲಾಗಿತ್ತು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಯಾವುದು ಲೈಂಗಿಕ ಕಿರುಕುಳ? : ಯಾವಾಗ ದೂರು ನೀಡಬಹುದು..?

ಇಷ್ಟಕ್ಕೆ ತೃಪ್ತರಾಗದ ಪ್ರಗತ್‌, ಮದ್ಯಪಾನ ಮಾಡಿ ಮನೆಗೆ ಬಂದು ಬಲವಂತವಾಗಿ ಮೊಬೈಲ್‌ನಲ್ಲಿ ನನ್ನ ನಗ್ನ ಫೋಟೋ ತೆಗೆಯುತ್ತಿದ್ದ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕುತ್ತಿದ್ದ. ಅಲ್ಲದೆ, ನಿನ್ನ ತಂದೆಯ ಅರ್ಧ ಆಸ್ತಿಯನ್ನು ನನ್ನ ಹೆಸರಿಗೆ ಬರೆಸಬೇಕು. 

ಬಳಿಕ ನೀನು ವಿಚ್ಛೇದನ ಕೊಡಬೇಕು. ಇಲ್ಲವಾದರೆ, ನಿನ್ನ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವುದಾಗಿ ಪ್ರಗತ್‌ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.

ನಗ್ನ ಫೋಟೊ ಕಳಿಸೆಂದ ಅಧಿಕಾರಿ ಅರೆಸ್ಟ್: ಕಚೇರಿಯಲ್ಲಿ ಸಹೋದ್ಯೋಗಿ (Colleague) ಯುವತಿ ಮೇಲೆ ಲೈಂಗಿಕ ಕಿರುಕುಳ (Sexual harassment) ನೀಡುತ್ತಿದ್ದ ಆರೋಪದಲ್ಲಿ ದ.ಕ. ಜಿಲ್ಲಾ (Dakshina kannada) ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ (Minorities Development Corporation ) ಜಿಲ್ಲಾ ವ್ಯವಸ್ಥಾಪಕ ಮೊಹಮ್ಮದ್‌ ಫಾರೂಕ್‌(45) ಎಂಬಾತನನ್ನು ಪಾಂಡೇಶ್ವರ ಮಹಿಳಾ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ.

19 ವರ್ಷದ ಯುವತಿ ಪಾಂಡೇಶ್ವರದ (Pandeshwara) ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ (Office) ಕೆಲಸಕ್ಕಿದ್ದಳು. ಆಕೆಯನ್ನು ಆರೋಪಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿ, ವಾಟ್ಸಪ್‌ನಲ್ಲಿ(Whatsapp) ನಗ್ನ ಚಿತ್ರಗಳನ್ನು ಕಳುಹಿಸಿ, ತನ್ನೊಂದಿಗೆ ಸಹಕರಿಸುವಂತೆ ಒತ್ತಾಯ ಪಡಿಸುತ್ತಿದ್ದ. 

ಇದನ್ನೂ ಓದಿ: Social Media Upload: ಸಾಲ ವಾಪಸ್ ಕೊಡದ್ದಕ್ಕೆ ಬೆತ್ತಲಾಗಿಸಿ ಡ್ಯಾನ್ಸ್ ಮಾಡಿಸಿದ ಜ್ಯೋತಿಷಿ!

ಅಲ್ಲದೆ, ನಿನ್ನ ನಗ್ನ ಚಿತ್ರವನ್ನು ಕಳುಹಿಸುವಂತೆ ಆರೋಪಿ ಒತ್ತಾಯಿಸುತ್ತಿದ್ದ. ಇದಕ್ಕೆ ಸೊಪ್ಪು ಹಾಕದ ಯುವತಿ, ಆತನಿಂದ ದೂರವಿದ್ದಳು. ಈ ನಡುವೆ ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿ ಆರೋಪಿ ಆಕೆಯ ಮೈಗೆ ಕೈಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಬಳಿಕ ಕೆಲಸವನ್ನೇ (Work) ಬಿಟ್ಟು ತೆರಳಿದ್ದ ಯುವತಿ ಎರಡು ದಿನಗಳ ಹಿಂದೆ ಅಧಿಕಾರಿ ವಿರುದ್ಧ ಪಾಂಡೇಶ್ವರ ಮಹಿಳಾ ಠಾಣೆಗೆ ದೂರು (Complaint) ನೀಡಿದ್ದಾಳೆ.

ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಬುಧವಾರ ರಾತ್ರಿ ಮೊಹಮ್ಮದ್‌ ಫಾರೂಕ್‌ನನ್ನು ಬಂಧಿಸಿದ್ದಾರೆ. ಆತನ ವಿರುದ್ಧ 354 ಎ, 364 ಡಿ ಮತ್ತು 506 ಸೆಕ್ಷನ್‌ ಪ್ರಕಾರ ಕೇಸು ದಾಖಲಾಗಿದೆ. ಕಿರುಕುಳಕ್ಕೆ ಒಳಗಾದ ಸಂತ್ರಸ್ತೆ ಹೊರಗುತ್ತಿಗೆ ನೆಲೆಯಲ್ಲಿ ಪಾಂಡೇಶ್ವರದ ನಿಗಮದ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದಳು.

Latest Videos
Follow Us:
Download App:
  • android
  • ios