ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು : ಮಗುವನ್ನು ಕೊಂದು ನೇಣಿಗೆ ಶರಣಾದ ಗೃಹಿಣಿ!
ಬೆಂಗಳೂರಿನಲ್ಲಿ ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಗೃಹಿಣಿಯೊಬ್ಬರು ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್‌ನಲ್ಲಿ ಪತಿಯ ಅಕ್ರಮ ಸಂಬಂಧದ ಬಗ್ಗೆ ಬರೆದಿಟ್ಟಿದ್ದಾರೆ. ಪೊಲೀಸರು ಪತಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ಬೆಂಗಳೂರು (ಫೆ.19): ಪತಿ ಬೇರೊಬ್ಬಳೊಂದಿಗೆ ಅಕ್ರಮ ಸಂಬಂಧಕ್ಕೆ ಬೇಸತ್ತು ಗೃಹಿಣಿಯೋರ್ವಳು ಮಗುವನ್ನು ಕೊಂದು ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಬೆಂಗಳೂರಿನ ಬಾಗಲಗುಂಟೆ ವ್ಯಾಪ್ತಿಯ ರಾಮಯ್ಯ ಲೇಔಟ್‌ನ ಮನೆಯಲ್ಲಿ ನಿನ್ನೆ ಸಂಜೆ 6ಗಂಟೆ ಸುಮಾರಿಗೆ ನಡೆದಿದೆ.
ಶೃತಿ(33) ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿ, ರೋಶಿಣಿ(5) ತಾಯಿಯಿಂದಲೇ ಕೊಲೆಗೀಡಾದ ದುರ್ದೈವಿ ಮಗು. ಪಾವಗಡದ ಗ್ರಾಮ ಪಂಚಾಯ್ತಿಯೊಂದರ ಅಧ್ಯಕ್ಷರಾಗಿರುವ ಮೃತ ಮಹಿಳೆ. ಚಾರ್ಟೆಡ್ ಅಕೌಂಟೆಂಟ್ ಆಗಿರುವ ಗೋಪಾಲಕೃಷ್ಣ ಜೊತೆಗೆ ಹತ್ತು ವರ್ಷದ ಹಿಂದೆ ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಮಗಳು ಶೃತಿ ತಾಯಿಯೊಂದಿಗೆ ಮನೆಯಲ್ಲೇ ಇದೆ. ಇನ್ನೊಬ್ಬ ಮಗ ದೊಡ್ಡವನು ಆಟವಾಡಲು ಹೊರಗಡೆ ಹೋಗಿದ್ದಾನೆ. ಆಟದ ಬಳಿಕ ಮನೆಗೆ ಬಂದಾಗ ಮನೆಯೊಳಗಿದ್ದ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಹಸುಗಳ್ಳತನಕ್ಕೆ ಎತ್ತಿದ ಕೈ, ಕದ್ದ ಹಸು ಕಾರಿನಲ್ಲಿ ಸಾಗಿಸುತ್ತಿದ್ದ ಭೂಪರು! ಫೈರೋಜ್ ಬೇಗ್, ಸೈಯದ್ ಬಂಧನ! ಕದ್ದಿದ್ದೆಷ್ಟು?
ಡೆತ್‌ನೋಟ್ ಪತ್ತೆ:
ಗೃಹಿಣಿ ಶೃತಿ ಸಾಯುವ ಮುನ್ನ ವಿವರವಾಗಿ ಡೆತ್ ನೋಟ್ ಬರೆದಿದ್ದಾರೆ. ಪತಿ ಬೇರೊಬ್ಬಳೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಬರೆದಿದ್ದಾಳೆ. ಗಂಡನ ವಂಚನೆಯಿಂದ ಬೇಸತ್ತು ಸಾಯುತ್ತಿರುವುದಾಗಿ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣ.
ಇದನ್ನೂ ಓದಿ: ಇದನ್ನೂ ಓದಿ: ಮತ್ತೆ ಗೋವಿನ ಕರುವಿಗೆ ದುರುಳರಿಂದ ಮಚ್ಚಿನೇಟು! ನೋವಿನಿಂದ ಒದ್ದಾಡಿದ ಕರು
ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಭೇಟಿ:
ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಬಾಗಲುಂಟೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೃತದೇಹ ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾಸಿರುವ ಪೊಲೀಸರು. ಡೆತ್ ನೋಟ್‌ನಲ್ಲಿ ಪತಿಯ ಅಕ್ರಮ ಸಂಬಂಧದ ಬಗ್ಗೆ ಬರೆದಿಟ್ಟಿರುವ ಹಿನ್ನೆಲೆ ಗಂಡನ ಅಕ್ರಮ ಸಂಬಂಧವೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಸದ್ಯ ಪತಿಯನ್ನ ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.