ಕೊಟ್ಟಿಗೆಹಾರ ಮುಖ್ಯ ವೃತ್ತದಲ್ಲಿ ರಕ್ತದ ಕಲೆ ಯಾರದ್ದು? ಸಿಸಿ ಕ್ಯಾಮೆರಾ ನಿಷ್ಕ್ರಿಯ ಘಟನೆ ನಿಗೂಢ!
ಕೊಟ್ಟಿಗೆಹಾರ ವೃತ್ತದ ಬಳಿ ರಸ್ತೆ ಮೇಲೆ ನಾಲ್ಕೈದು ಅಡಿ ವಿಸ್ತಾರದಲ್ಲಿ ರಕ್ತದ ಗುರುತು ಕಂಡುಬಂದಿದೆ. ಆದರೆ, ಈ ರಕ್ತದ ಗುರುತು ಕಾಣದಿರುವ ಹಾಗೆ ಸಗಣಿಯಿಂದ ಸಾರಿಸಲಾಗಿದೆ. ಇದು ಈಗ ಅನುಮಾನಕ್ಕೆ ಕಾರಣವಾಗಿದೆ.
, ಮೂಡಿಗೆರೆ (ಮಾ.11) : ಕೊಟ್ಟಿಗೆಹಾರ ವೃತ್ತದ ಬಳಿ ರಸ್ತೆ ಮೇಲೆ ನಾಲ್ಕೈದು ಅಡಿ ವಿಸ್ತಾರದಲ್ಲಿ ರಕ್ತದ ಗುರುತು ಕಂಡುಬಂದಿದೆ. ಆದರೆ, ಈ ರಕ್ತದ ಗುರುತು ಕಾಣದಿರುವ ಹಾಗೆ ಸಗಣಿಯಿಂದ ಸಾರಿಸಲಾಗಿದೆ. ಇದು ಈಗ ಅನುಮಾನಕ್ಕೆ ಕಾರಣವಾಗಿದೆ.
ಗುರುವಾರ ರಾತ್ರಿ ಯಾವುದೋ ಘಟನೆಯಿಂದಾಗಿ ರಸ್ತೆಯಲ್ಲಿ ರಕ್ತದ ಕಲೆ ಮೂಡಿದೆ. ಕೊಟ್ಟಿಗೆಹಾರ(Kottigehara) ಮುಖ್ಯ ವೃತ್ತದ ಬಳಿ ಅಂಗಡಿ- ಮುಂಗಟ್ಟುಗಳಿದ್ದು, ರಾತ್ರಿ 10ರವರೆಗೆ ತೆರೆದಿರುತ್ತವೆ. 11 ಗಂಟೆಯವರೆಗೂ ಜನಸಂಚಾರ ಇರುತ್ತದೆ. ಬೆಳಗ್ಗೆ 5 ಗಂಟೆಗೆ ಪುನಃ ಅಂಗಡಿಗಳು ಬಾಗಿಲು ತೆರೆಯುತ್ತವೆ. ನಡುರಾತ್ರಿ ಯಾವುದೋ ಘಟನೆಯಿಂದ ರಸ್ತೆಯಲ್ಲಿ ರಕ್ತ ಹರಿದಿದ್ದು ಇದು ಕಾಣದಂತೆ ಸಗಣಿಯನ್ನು ರಕ್ತದ ಮೇಲೆ ಸಾರಿಸಲಾಗಿದೆ. ಆದರೂ ಅಲ್ಲಲ್ಲಿ ರಕ್ತದ ಕಲೆಗಳು ಕಂಡುಬಂದಿದೆ.
400 ರೂಪಾಯಿ ಕುಕ್ಕರ್‌ಗೆ 1400 ರೂಪಾಯಿ ಸ್ಟಿಕ್ಕರ್, ಮತದಾರರನ್ನ ಕುರಿ ಮಾಡಿದ್ರಾ ರಾಜೇಗೌಡ್ರು!
ಸಿಸಿ ಕ್ಯಾಮರಾ ನಿಷ್ಕ್ರಿಯ:
ಸಿಸಿ ಕ್ಯಾಮರಾ(CC Camera) ನಿಷ್ಕಿ್ರಯಗೊಂಡಿರುವುದರಿಂದ ಸತ್ಯ ತಿಳಿಯುವುದು ಸವಾಲಾಗಿ ಪರಿಣಮಿಸಿದೆ. ಇಲ್ಲಿಗೆ ಸಮೀಪದ ಚಾರ್ಮಾಡಿ ಘಾಟ್(Charmadighat)ನಲ್ಲಿ ಮೃತದೇಹ ತಂದು ಎಸೆಯುವಂಥ ಪ್ರಕರಣಗಳು ಹೆಚ್ಚಾಗಿವೆ. ತಿಂಗಳ ಹಿಂದೆಯಷ್ಟೇ ಇಂಥ ಪ್ರಕರಣ ಪೊಲೀಸರು ಭೇದಿಸಿದ್ದರು.
ದನಗಳ್ಳರ ಕೈವಾಡ ಶಂಕೆ?:
ಕೊಟ್ಟಿಗೆಹಾರ ಬಣಕಲ್ ಭಾಗದಲ್ಲಿ ಬಿಡಾಡಿ ದನಗಳ ಹಾವಳಿಯೂ ಹೆಚ್ಚಾಗಿದೆ. ಕೊಟ್ಟಿಗಹಾರದಲ್ಲಿ ರಾತ್ರಿ ದನಗಳ್ಳತನಗಳೂ ಕೂಡ ಹೆಚ್ಚಿದ್ದು ರಕ್ತದ ಕಲೆ ಹಿಂದೆ ದನಗಳ್ಳರ ಕೈವಾಡ ಇರಬಹುದೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಣಕಲ್ ಠಾಣೆ ಎಎಸ್‌ಐ ಶಶಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಕೈಗೊಂಡಿದ್ದಾರೆ. ರಕ್ತದ ಮಾದರಿ ಸಂಗ್ರಹಿಸಿ ಮನುಷ್ಯ ಅಥವಾ ಜಾನುವಾರು ರಕ್ತವೇ ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ.
ಚಿಕ್ಕಮಗಳೂರು: ಬಿಸಿಲ ಧಗೆ ಆರಂಭವಾಗ್ತಿದ್ದಂತೆ ಕಾಫಿನಾಡಲ್ಲಿ ಅರಣ್ಯ ಸಂಪತ್ತು ಬೆಂಕಿಗಾಹುತಿ
ಕೊಟ್ಟಿಗೆಹಾರದಲ್ಲಿ ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಸಿಸಿ ಕ್ಯಾಮರಾ ಇಲ್ಲದೇ ಇರುವುದು ಅಪರಾಧ ಚಟುವಟಿಕೆ ಹೆಚ್ಚಲು ಕಾರಣವಾಗಿದೆ. ಸಂಬಂಧಪಟ್ಟವರು ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.